IPL 2020: ಪಂಜಾಬ್ vs ಡೆಲ್ಲಿ ಪಂದ್ಯ ಟೈನಲ್ಲಿ ಅಂತ್ಯ, ಗೆಲುವಿಗಾಗಿ ಸೂಪರ್ ಓವರ್!

By Suvarna NewsFirst Published Sep 20, 2020, 11:31 PM IST
Highlights

ಗೆಲುವಿಗೆ 158 ರನ್ ಗುರಿ. ಪಂಜಾಬ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಇದು ಕಷ್ಟದ ಮೊತ್ತ ಆಗಿರಲಿಲ್ಲ. ಆದರೆ ಡೆಲ್ಲಿ ಬೌಲಿಂಗ್ ದಾಳಿಗೆ ಪಂಜಾಬ್ ಅಲುಗಾಡಿತು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಬೆಟ್ಟದಷ್ಟು ಬೃಹತ್ತಾಗಿ ಗೋಚರಿಸಿತು. ರೋಚಕ ಪಂದ್ಯ ಹಲವು ತಿರುಗಳನ್ನ ಪಡೆದುಕೊಂಡಿತು. ಆದರೆ ಇನ್ನೇನು ಪಂಜಾಬ್ ಗೆಲುವಿನ ದಡ ಸೇರಿತು ಅನ್ನುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ . ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.  ಹೀಗಾಗಿ ಸೂಪರ್ ಓವರ್ ಮಾಡಬೇಕಾಯಿತು.

ದುಬೈ(ಸೆ.20): ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 158 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಲೆಕ್ಕಾಚಾರ ಆರಂಭದಲ್ಲೇ ಉಲ್ಟಾ ಹೊಡೆಯಿತು. ನಾಯಕ  ಕೆಎಲ್ ರಾಹುಲ್ 21 ರನ್ ಸಿಡಿಸಿ ಔಟಾದರು. ಮತ್ತೊರ್ವ ಕನ್ನಡಿಗ ಕರುಣ್ ನಾಯರ್ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಆದರೆ ಮಯಾಂಕ್ ಅಗರ್ವಾಲ್ ತಂಡಕ್ಕೆ ಆಸರೆಯಾದರು.

ಸೂಪರ್ ಓವರ್‌ನಲ್ಲಿ ಕುಸಿದ ಪಂಜಾಬ್, ಡೆಲ್ಲಿಗೆ ಸುಲಭ ಜಯ!...

ನಿಕೊಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಲಿಲ್ಲ. ಇದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಭಾರಿ ಹೊಡೆತ ನೀಡಿತು. ಸರ್ಫರಾಜ್ ಖಾನ್ ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಮಯಾಂಕ್ ಅಗರ್ವಾಲ್ ತಂಡದ ಜವಾಬ್ದಾರಿ ಹೊತ್ತುಕೊಂಡರು. ಇತ್ತ ಕೆ ಗೌತಮ್ ಸಾಥ್ ನೀಡಿದರು.

ಕೆ ಗೌತಮ್ 14 ಎಸೆತದಲ್ಲಿ 20 ರನ್ ಸಿಡಿಸಿ ನಿರ್ಗಮಿಸಿದರು. ಗೌತಮ್ ವಿಕೆಟ್ ಕಬಳಿಸಿದ ಡೆಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.  . ಆದರೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಯಾಂಕ್ ಬಿರುಸಿನ ಹೊಡೆತದ ಮೂಲಕ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. 

ಡೆಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ ಆರ್ ಅಶ್ವಿನ್ ಗಾಯಗೊಂಡು ಪಂದ್ಯದಿಂದ ಹೊರನಡೆದಿದ್ದಾರೆ. ಇದು ಡೆಲ್ಲಿ ತಂಡಕ್ಕೆ ಹೊಡೆತ ನೀಡಿತು. ಅಬ್ಬರಿಸಿದ ಮಾಯಾಂಕ್ ಹಾಫ್ ಸೆಂಚುರಿ ಸಿಡಿಸಿದರು. ಅಂತಿಮ 12 ಎಸೆತದಲ್ಲಿ ಪಂಜಾಬ್ ಗೆಲುವಿಗೆ 25 ರನ್ ಅವಶ್ಯಕತೆ ಇತ್ತು. 

ಏಕಾಂಗಿ ಹೋರಾಟ ನೀಡಿದ ಮಯಾಂಕ್ ಅಗರ್ವಾಲ್, ಡೆಲ್ಲಿ ಬೌಲಿಂಗ್ ದಾಳಿ ಉಡೀಸ್ ಮಾಡಿದರು. ಸ್ಟೊಯ್ನಿಸ್ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಸ್ಕೋರ್ ಸಮಬಲಗೊಳಿಸಿದರು. ಇನ್ನೇನು ಪಂದ್ಯ ಫಿನೀಶ್ ಮಾಡಬೇಕು ಅನ್ನವಷ್ಟರಲ್ಲಿ ಮತ್ತೊಂದು ತಿರುವು ಪಡೆದುಕೊಂಡಿತು. ಮಯಾಂಕ್ 60 ಎಸೆತದಲ್ಲಿ 89 ರನ್ ಸಿಡಿಸಿ ಔಟಾದರು.

ಅಂತಿಮ 1 ಎಸೆತದಲ್ಲಿ ಪಂಜಾಬ್ ಗೆಲುವಿಗೆ 1 ರನ್ ಅವಶ್ಯಕತೆ ಇತ್ತು. ಜೋರ್ಡನ್ ಕೂಡ ವಿಕೆಟ್ ಕೈಚೆಲ್ಲಿದರು. ಅಂತಿಮ ಕ್ಷಣದ ನಿರೀಕ್ಷೆಯಂತೆ ಪಂದ್ಯ  ಟೈನಲ್ಲಿ ಅಂತ್ಯಗೊಂಡಿತು. ಗೆಲುವಿಗಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯಿತು.
 

click me!