ಐಪಿಎಲ್‌ಗೆ ಭಾರತದಿಂದಲ್ಲೇ ನೆಟ್‌ ಬೌಲ​ರ್‍ಸ್ ಕರೆದೊಯ್ಯಲು ಚಿಂತನೆ

By Kannadaprabha News  |  First Published Aug 12, 2020, 6:28 PM IST

ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಅಭ್ಯಾಸ ಹಾಗೂ ಪಂದ್ಯಗಳು ನಡೆಯಲಿರುವ ಕಾರಣ, ನೆಟ್ಸ್‌ ಅಭ್ಯಾಸಕ್ಕೆ ಬೌಲರ್‌ಗಳ ಕೊರತೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಭಾರತದಿಂದಲೇ ನೆಟ್ಸ್‌ ಬೌಲರ್‌ಗಳನ್ನು ಕರೆದೊಯ್ಯಲು ಐಪಿಎಲ್ ತಂಡಗಳು ನಿರ್ಧರಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ನವದೆಹಲಿ(ಆ.12): 13ನೇ ಆವೃತ್ತಿಯ ಐಪಿಎಲ್‌ಗೆ ಇನ್ನು ಕೇವಲ 1 ತಿಂಗಳು ಮಾತ್ರ ಬಾಕಿ ಉಳಿದಿದ್ದು, ಯುಎಇಗೆ ತೆರಳಿ ಅಭ್ಯಾಸ ಆರಂಭಿಸಲು ಎಲ್ಲಾ 8 ತಂಡಗಳು ಸಿದ್ಧತೆ ಆರಂಭಿಸಿವೆ. 

ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಅಭ್ಯಾಸ ಹಾಗೂ ಪಂದ್ಯಗಳು ನಡೆಯಲಿರುವ ಕಾರಣ, ನೆಟ್ಸ್‌ ಅಭ್ಯಾಸಕ್ಕೆ ಬೌಲರ್‌ಗಳ ಕೊರತೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಭಾರತದಿಂದಲೇ ನೆಟ್ಸ್‌ ಬೌಲರ್‌ಗಳನ್ನು ಕರೆದೊಯ್ಯಲು ತಂಡಗಳು ನಿರ್ಧರಿಸಿವೆ.  ಕೆಕೆಆರ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ತಲಾ 10 ಬೌಲರ್‌ಗಳನ್ನು ಕರೆದೊಯ್ಯಲು ನಿರ್ಧರಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ 6 ಬೌಲರ್‌ಗಳನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಖಚಿತಪಡಿಸಿದೆ. 

Latest Videos

undefined

ಆರ್‌ಸಿಬಿ ಸಹ ಸದ್ಯದಲ್ಲೇ ನೆಟ್‌ ಬೌಲರ್‌ಗಳನ್ನು ಅಂತಿಮಗೊಳಿಸಲಿದೆ. ಮಾಜಿ ಅಂಡರ್ 19 ಕ್ರಿಕೆಟಿಗ ಆದಿತ್ಯ ಠಾಕ್ರೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೆಟ್ ಬೌಲರ್‌ ಆಗಿ ಯುಎಇಗೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ. ಆದಿತ್ಯ ನಾಯಕ ಕೊಹ್ಲಿಗೆ ನೆಟ್‌ ಬೌಲರ್‌ ಆಗಿ ಕಾರ್ಯ ನಿರ್ವಹಿಸಬಲ್ಲರು. ಪ್ರಥಮ ದರ್ಜೆ, ಅಂಡರ್‌-19, ಅಂಡರ್‌-23 ಕ್ರಿಕೆಟ್‌ ಆಡಿರುವ ಸುಮಾರು 50 ಯುವ ಕ್ರಿಕೆಟಿಗರಿಗೆ ಯುಎಇಗೆ ತೆರಳುವ ಅವಕಾಶ ಸಿಗಲಿದೆ.

IPLಗೂ ಮುನ್ನ ರಾಜಸ್ಥಾನ ರಾಯಲ್ಸ್‌ಗೆ ಆಘಾತ, ಫೀಲ್ಡಿಂಗ್‌ ಕೋಚ್‌ಗೆ ಕೊರೋನಾ ಪಾಸಿಟಿವ್..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ದುಬೈ, ಶಾರ್ಜಾ ಹಾಗೂ ಅಬುದಾಬಿ ಮೈದಾನದಲ್ಲಿ ಚುಟುಕು ಕ್ರಿಕೆಟ್ ಸಂಗ್ರಾಮ ನಡೆಯಲಿದೆ.

click me!