ರಾಜಸ್ಥಾನ್ ವಿರುದ್ಧ ಹೊಸ ದಾಖಲೆ ಬರೆದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್..!

By Suvarna News  |  First Published Oct 30, 2020, 10:15 PM IST

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 410ನೇ ಟಿ20 ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ. 
 


ಅಬುಧಾಬಿ, ಅ.30): ಐಪಿಎಲ್ 2020ರಲ್ಲಿ  8 ಪಂದ್ಯಗಳ ನಂತರ  11ರ ಬಳಗದಲ್ಲಿ ತಂಡ ಸೇರಿಕೊಂಡಿರುವ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

41ನೇ ವಯಸ್ಸಿನಲ್ಲೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕ್ರಿಸ್ ಗೇಲ್,ಇಂದು  (ಶುಕ್ರವಾರ) ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ  ಈ ಸಾಧನೆ ಮಾಡಿದರು. 410ನೇ ಟಿ20 ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ. 

Latest Videos

undefined

ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಗೇಲ್ ಅಬ್ಬರ, ರಾಜಸ್ಥಾನಕ್ಕೆ ಭರ್ಜರಿ ಟಾರ್ಗೆಟ್

ಇಂದಿನ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಶತಕ ವಂಚಿತರಾದ ಗೇಲ್ ಒಟ್ಟು 8 ಸಿಕ್ಸರ್​ ಸಿಡಿಸಿದ್ದು, ಅವರೀಗ ಒಟ್ಟಾರೆ 1001 ಸಿಕ್ಸರ್​ಗಳ ಸರದಾರರಾಗಿದ್ದಾರೆ. 

ಗೇಲ್ ಅವರ ಸಾವಿರ ಸಿಕ್ಸರ್‌ಗಳ ಪೈಕಿ 105 ಸಿಕ್ಸರ್‌ಗಳು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಬಂದಿವೆ. ಐಪಿಎಲ್‌ನಲ್ಲೂ ಅವರು 345 ಸಿಕ್ಸರ್ ಸಿಡಿಸಿದ್ದಾರೆ.  ಉಳಿದೆಲ್ಲ ಸಿಕ್ಸರ್‌ಗಳನ್ನು ವಿಶ್ವದ ವಿವಿಧ ಟಿ20 ಲೀಗ್‌ಗಳಲ್ಲಿ ಬಾರಿಸಿದ್ದಾರೆ.  ಟಿ20 ಕ್ರಿಕೆಟ್‌ನಲ್ಲಿ 22 ಶತಕ ಮತ್ತು 85 ಅರ್ಧಶತಕಗಳ ಸಹಿತ 13 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ಬೌಂಡರಿಗಳನ್ನೂ ಸಿಡಿಸಿದ್ದಾರೆ.  

ಮತ್ತೋರ್ವ ವೆಸ್ಟ್ ಇಂಡೀಸ್  ಆಟಗಾರ ಕಿರಾನ್ ಪೊಲ್ಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 690 ಸಿಕ್ಸರ್ ಬಾರಿಸುವ ಮೂಲಕ  2ನೇ ಸ್ಥಾನದಲ್ಲಿದ್ದಾರೆ.
 
ಟಿ20ಯ ಸಿಕ್ಸರ್ ಸರದಾರರು
1. ಕ್ರಿಸ್ ಗೇಲ್- 1000 ಸಿಕ್ಸ್
2. ಕಿರಾನ್ ಪೊಲಾರ್ಡ್- 690
3. ಬ್ರೆಂಡನ್ ಮೆಕಲಂ- 485
4. ಶೇನ್ ವಾಟ್ಸನ್- 467
5. ಆಂಡ್ರೋ ರಸೆಲ್- 447
5. ಎಬಿಡಿ ವಿಲಿಯರ್ಸ್-417

click me!