IPL 2020: ಚೆನ್ನೈ ಸೂಪರ್ ಕಿಂಗ್ಸ್‌ಗಿಂದು ಡೆಲ್ಲಿ ಕ್ಯಾಪಿಟಲ್ಸ್ ಚಾಲೆಂಜ್..!

By Kannadaprabha News  |  First Published Sep 25, 2020, 9:29 AM IST

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 7ನೇ ಪಂದ್ಯದಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ದುಬೈ: 13ನೇ ಆವೃ​ತ್ತಿಯ ಐಪಿ​ಎಲ್‌ ರೋಚಕ ಪಂದ್ಯ​ಗ​ಳಿಗೆ ಸಾಕ್ಷಿ​ಯಾ​ಗು​ತ್ತಿದ್ದು, ಶುಕ್ರ​ವಾರ ಮತ್ತೊಂದು ರೋಚಕ ಪಂದ್ಯ ನಿರೀ​ಕ್ಷಿ​ಸ​ಲಾ​ಗಿ​ದೆ. ಗೆಲು​ವಿ​ನೊಂದಿಗೆ ಟೂರ್ನಿ ಆರಂಭಿಸಿ 2ನೇ ಪಂದ್ಯ​ದಲ್ಲಿ ಕಳಪೆ ಪ್ರದ​ರ್ಶ​ನ​ದಿಂದಾಗಿ ಸೋಲುಂಡ ಚೆನ್ನೈ ಸೂಪರ್‌ ಕಿಂಗ್ಸ್‌, ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿ ಶುಭಾ​ರಂಭ ಮಾಡಿದ ಡೆಲ್ಲಿ ಕ್ಯಾಪಿ​ಟಲ್ಸ್‌ ತಂಡ​ವನ್ನು ಎದು​ರಿ​ಸ​ಲು ಸಜ್ಜಾ​ಗಿದೆ.

ಚೆನ್ನೈನ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಭಾರೀ ಚರ್ಚೆ ನಡೆ​ಯು​ತ್ತಿದ್ದು, ನಾಯಕ ಎಂ.ಎಸ್‌.ಧೋನಿ ಸಹ ಟೀಕೆಗೆ ಒಳ​ಗಾ​ಗಿ​ದ್ದಾರೆ. ಶೇನ್‌ ವಾಟ್ಸನ್‌ ದೊಡ್ಡ ಇನ್ನಿಂಗ್ಸ್‌ ಆಡು​ತ್ತಿ​ಲ್ಲ. ಮೊದಲ ಪಂದ್ಯ​ದಲ್ಲಿ ಮಿಂಚಿದ ಅಂಬಟಿ ರಾಯುಡು ಗಾಯ​ಗೊಂಡಿದ್ದು, ಮತ್ತೊಂದು ಪಂದ್ಯ ತಪ್ಪಿ​ಸಿ​ಕೊ​ಳ್ಳಲಿದ್ದಾರೆ. ಮುರಳಿ ವಿಜಯ್‌, ಋುತು​ರಾಜ್‌ ಗಾಯ​ಕ್ವಾಡ್‌, ಕೇದಾರ್‌ ಜಾಧವ್‌ ನಿರೀಕ್ಷೆ ಉಳಿ​ಸಿ​ಕೊಳ್ಳುತ್ತಿಲ್ಲ. ಸುರೇಶ್‌ ರೈನಾ ಅನು​ಪ​ಸ್ಥಿತಿ ತಂಡ​ವನ್ನು ಬಲವಾಗಿ ಕಾಡು​ತ್ತಿದೆ. ಫಾಫ್‌ ಡು ಪ್ಲೆಸಿ ಏಕಾಂಗಿ ಹೋರಾಟ ನಡೆ​ಸುತ್ತಿದ್ದಾರೆ. ಕಳೆದ ಪಂದ್ಯ​ದಲ್ಲಿ 7ನೇ ಕ್ರಮಾಂಕ​ದಲ್ಲಿ ಬ್ಯಾಟ್‌ ಮಾಡಿದ ಧೋನಿಯ ನಿರ್ಧಾರಗಳನ್ನು ಮಾಜಿ ಕ್ರಿಕೆ​ಟಿಗರು, ತಜ್ಞರು, ಅಭಿ​ಮಾ​ನಿ​ಗಳು ಪ್ರಶ್ನಿ​ಸಿ​ದ್ದಾರೆ.

Latest Videos

undefined

ಚೆನ್ನೈ ಸ್ಪಿನ್ನರ್‌ಗಳು ಸಹ ದುಬಾ​ರಿ​ಯಾ​ಗು​ತ್ತಿ​ದ್ದಾರೆ. ಆಲ್ರೌಂಡರ್‌ ಸ್ಯಾಮ್‌ ಕರ್ರನ್‌ ಭರ​ವಸೆ ಮೂಡಿ​ಸಿ​ದ್ದಾರೆ ಆದರೆ ಪಂದ್ಯ ಗೆಲ್ಲಿ​ಸುವ ಸಾಮರ್ಥ್ಯ ಪ್ರದ​ರ್ಶಿ​ಸಿಲ್ಲ. 3 ಬಾರಿ ಚಾಂಪಿ​ಯನ್‌ ಚೆನ್ನೈ, ಪ್ಲೇ-ಆಫ್‌ನತ್ತ ಹೆಜ್ಜೆ ಹಾಕ​ಬೇ​ಕಿ​ದ್ದರೆ ಹಲವು ಸಮ​ಸ್ಯೆಗಳಿಗೆ ಪರಿ​ಹಾರ ಕಂಡು​ಕೊ​ಳ್ಳ​ಬೇ​ಕಿದೆ.

ಆರ್‌ಸಿಬಿ ತಂಡದಲ್ಲಿ ಡ್ಯಾನಿಶ್‌ ಸೇಠ್‌ಗೇನು ಕೆಲಸ?

ಆತ್ಮ​ವಿ​ಶ್ವಾಸ ಅಲೆಯಲ್ಲಿ ಡೆಲ್ಲಿ: ಕಿಂಗ್ಸ್‌ ಇಲೆ​ವೆನ್‌ ವಿರುದ್ಧ ಕೈಜಾ​ರಿದ್ದ ಪಂದ್ಯ​ವನ್ನು ಟೈ ಮಾಡಿ​ಕೊಂಡು, ಸೂಪರ್‌ ಓವರ್‌ನಲ್ಲಿ ಗೆಲುವು ಕಸಿದ ಡೆಲ್ಲಿ ಕ್ಯಾಪಿ​ಟಲ್ಸ್‌ ಆತ್ಮ​ವಿ​ಶ್ವಾಸದ ಅಲೆಯಲ್ಲಿ ತೇಲು​ತ್ತಿದೆ. ತಂಡ ಅತ್ಯು​ತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಮೊದಲ ಪಂದ್ಯ​ದಲ್ಲೇ ಅಮೋಘ ಪ್ರದ​ರ್ಶ​ನದ ಮೂಲಕ ಭರ​ವಸೆ ಮೂಡಿ​ಸಿ​ದ್ದಾರೆ. ಕಗಿಸೋ ರಬಾಡ ತಂಡದ ಬೌಲಿಂಗ್‌ ಪಡೆಯನ್ನು ಮುನ್ನ​ಡೆ​ಸ​ಲಿದ್ದು, ಇಲ್ಲಿನ ಮೈದಾನ ದೊಡ್ಡ​ದಾ​ಗಿ​ರುವ ಕಾರಣ ಚೆನ್ನೈ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿ​ಸಲು ಕಠಿಣ ಸವಾಲು ಎದು​ರಾ​ಗ​ಲಿದೆ. ಕಳೆದ ಪಂದ್ಯ​ದಲ್ಲಿ ಗಾಯ​ಗೊಂಡಿದ್ದ ಪ್ರಮುಖ ಸ್ಪಿನ್ನರ್‌ ಆರ್‌.ಅ​ಶ್ವಿನ್‌ ಈ ಪಂದ್ಯಕ್ಕೆ ಅಲ​ಭ್ಯ​ರಾ​ಗುವ ಸಾಧ್ಯತೆ ಇದ್ದು, ಅಮಿತ್‌ ಮಿಶ್ರಾ ಸ್ಪಿನ್‌ ಪಡೆಯನ್ನು ಮುನ್ನ​ಡೆ​ಸ​ಬ​ಹುದು.

ಒಟ್ಟು ಮುಖಾಮುಖಿ: 21

ಚೆನ್ನೈ: 15

ಡೆಲ್ಲಿ: 06

ಸಂಭವನೀಯ ಆಟಗಾರರ ಪಟ್ಟಿ:

ಚೆನ್ನೈ: ಶೇನ್‌ ವಾಟ್ಸನ್‌, ಮುರಳಿ ವಿಜಯ್‌, ಫಾಫ್‌ ಡುಪ್ಲೆಸಿ, ಸ್ಯಾಮ್‌ ಕರ್ರನ್‌, ಋುತುರಾಜ್‌ ಗಾಯಕ್ವಾಡ್‌, ಕೇದಾರ್‌ ಜಾಧವ್‌, ಧೋನಿ (ನಾಯಕ), ರವೀಂದ್ರ ಜಡೇಜಾ, ದೀಪಕ್‌ ಚಹರ್‌, ಪಿಯೂಷ್‌ ಚಾವ್ಲಾ, ಲುಂಗಿ ಎನ್‌ಗಿಡಿ.

ಡೆಲ್ಲಿ: ಪೃಥ್ವಿ ಶಾ, ಶಿಖರ್‌ ಧವನ್‌, ಶಿಮ್ರೊನ್‌ ಹೆಟ್ಮೇಯರ್‌, ಶ್ರೇಯಸ್‌ ಅಯ್ಯರ್‌ (ನಾಯಕ), ರಿಷಭ್‌ ಪಂತ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಕ್ಷರ್‌ ಪಟೇಲ್‌, ಆರ್‌.ಅಶ್ವಿನ್‌, ಕಗಿಸೋ ರಬಾಡ, ಅನ್ರಿಚ್‌ ನೋಕಿ​ಯೆ, ಮೋಹಿತ್‌ ಶರ್ಮಾ.

ಪಿಚ್‌ ರಿಪೋರ್ಟ್‌

ದುಬೈ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಉಭಯ ತಂಡಗಳ ಆಟಗಾರರ ಮನೋಬಲ ಪರೀಕ್ಷಿಸಲಿದೆ. ವೇಗದ ಬೌಲರ್‌ಗಳು ಕೊಂಚ ಯಶಸ್ಸು ಸಿಗಲಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚಿನ ಲಾಭ ದೊರಕಲಿದೆ. ಪಂದ್ಯದಲ್ಲಿ ಟಾಸ್‌ ಪ್ರಮುಖ ಪಾತ್ರವಹಿಸಲಿದ್ದು, ಮೊದಲು ಬ್ಯಾಟ್‌ ಮಾಡುವ ತಂಡಕ್ಕಿಂತ 2ನೇ ಬ್ಯಾಟಿಂಗ್‌ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ ದೊರಕಲಿದೆ.

ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

click me!