ರಾಹುಲ್ ಸ್ಕೋರ್ ದಾಟದ RCB, ಪಂಜಾಬ್ ವಿರುದ್ಧ ಹೀನಾಯ ಸೋಲು!

Published : Sep 24, 2020, 11:15 PM IST
ರಾಹುಲ್ ಸ್ಕೋರ್ ದಾಟದ RCB, ಪಂಜಾಬ್ ವಿರುದ್ಧ ಹೀನಾಯ ಸೋಲು!

ಸಾರಾಂಶ

ಕರ್ನಾಟಕದ ತಂಡ vs ಕನ್ನಡಿಗರು ತುಂಬಿಕೊಂಡಿರುವ ತಂಡದ ನಡುವಿನ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ. ಕನ್ನಡಿಗ, ಪಂಜಾಬ್ ನಾಯಕ ಕೆಎಲ್ ರಾಹುಲ್ ಅಬ್ಬರ ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನ ಕಹಿ ಅನುಭವಿಸಿದೆ.

ದುಬೈ(ಸೆ.24): 13ನೇ ಆವೃತ್ತಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2ನೇ ಪಂದ್ಯದಲ್ಲಿ ಮುಗ್ಗರಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಅಬ್ಬರದ ಮುಂದೆ RCB ಹೀನಾ ಸೋಲು ಕಂಡಿದೆ.  ಕೆಎಲ್ ರಾಹುಲ್ ಏಕಾಂಗಿಯಾಗಿ ಹೋರಾಟ ನೀಡಿ ದಾಖಲೆಯ 132 ರನ್ ಸಿಡಿಸಿದ್ದರು. RCB ತಂಡದ 10 ಬ್ಯಾಟ್ಸ್‌ಮನ್‌ಗಳು ಸೇರಿ 109 ರನ್ ಸಿಡಿಸಿದ್ದಾರೆ.

206 ರನ್ ಟಾರ್ಗೆಟ್ ನೋಡಿದ RCB ಬೆಚ್ಚಿ ಬಿದ್ದಿತ್ತು. ಕಾರಣ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ, ಪಂಜಾಬ್ ತಂಡವನ್ನು 160 ರಿಂದ 170 ರನ್ ಒಳಗೆ ಕಟ್ಟಿಹಾಕಿದರೆ ಗೆಲುವು ಸುಲಭವಾಗಲಿದೆ ಎಂದಿದ್ದರು. ಆದರೆ ಕೊಹ್ಲಿ ಲೆಕ್ಕಾಚಾರವನ್ನು ಕೆಎಲ್ ರಾಹುಲ್ ಉಲ್ಟಾ ಮಾಡಿದ್ದರು. ಇಷ್ಟಾದರೂ RCB ಬ್ಯಾಟಿಂಗ್ ಪಡೆಗೆ 207 ರನ್ ಅಸಾಧ್ಯವೇನು ಆಗಿರಲಿಲ್ಲ. 

ಸ್ಪಿನ್ ಮೋಡಿ ಮೂಲಕ RCB ಬ್ಯಾಟ್ಸ್‌ಮನ್‌ಗಳನ್ನು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶವೇ ನೀಡಲಿಲ್ಲ. ಒಂದೆಡೆಯಿಂದ ರವಿ ಬಿಶ್ನೋಯಿ ಮತ್ತೊಂದೆಡೆಯಿಂದ ಮುರುಗನ್ ಅಶ್ವಿನ್ RCB ಮೇಲೆ ಸವಾರಿ ಮಾಡಿದರು. ದೇವದತ್ ಪಡಿಕ್ಕಲ್, ಜೊಶುವಾ ಪಿಲಿಪ್, ವಿರಾಟ್ ಕೊಹ್ಲಿ, ಆ್ಯರೋನ್ ಫಿಂಚ್ ಅಬ್ಬರಿಸಲೇ ಇಲ್ಲ. 

ಎಬಿ ಡಿವಿಲಿಯರ್ಸ್ 28 ಹಾಗೂ ವಾಶಿಂಗ್ಟನ್ ಸುಂದರ್ 30 ರನ್ ಹಾಗೂ ಶಿವಂ ದುಬೆ 12 ರನ್ ಸಿಡಿಸಿದರು. ಇನ್ನುಳಿದವರಿಗೆ ರನ್ ಹರಿದು ಬರಲಿಲ್ಲ. ಕಷ್ಟಪಟ್ಟು RCB 100 ಗಡಿ ದಾಟಿತು. 17ನೇ ಓವರ್‌ನಲ್ಲಿ 109 ರನ್‌ಗಳಿಗೆ RCB ಆಲೌಟ್ ಆಯಿತು. ಪಂಜಾಬ್ 97 ರನ್ ಭರ್ಜರಿ ಗೆಲುವು ದಾಖಲಿಸಿತು ಮರುಗನ್ ಅಶ್ವಿನ್ ಹಾಗೂ ರವಿ ಬಿಶ್ನೋಯಿ ತಲಾ 3 ವಿಕೆಟ್ ಕಬಳಿಸಿದರೆ, ಶೆಲ್ಡಾನ್ ಕಾಟ್ರೆಲ್ 2, ಮೊಹಮ್ಮದ್ ಶಮಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಕಬಳಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI