IPL 2020: ಪಂಜಾಬ್ ವಿರುದ್ಧ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಮತ್ತೊಂದು ಶಾಕ್..!

By Suvarna NewsFirst Published Sep 26, 2020, 8:31 AM IST
Highlights

ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ನಾಯಕನಿಗೆ ಐಪಿಎಲ್ ಆಡಳಿತ ಮಂಡಳಿ ಮತ್ತೊಂದು ಶಾಕ್ ನೀಡಿದೆ. ಏನದು ನೀವೇ ನೋಡಿ.

ದುಬೈ(ಸೆ.26): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯವನ್ನು ಬಹುಶಃ ನೆನೆಸಿಕೊಳ್ಳಲು ಇಷ್ಟಪಡುವುದಿಲ್ಲವೇನೋ. ಯಾಕೆಂದರೆ ಒಂದು ಕಡೆ ಆರ್‌ಸಿಬಿ ಹೀನಾಯ ಸೋಲು ಕಂಡರೆ, ಮತ್ತೊಂದು ಕಡೆ ಕೊಹ್ಲಿ ಫೀಲ್ಡಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದರು. ಇದೆಲ್ಲದರ ನಡುವೆ ಇದೀಗ ಕೊಹ್ಲಿಗೆ ಮತ್ತೊಂದು ಶಾಕ್ ಎದುರಾಗಿದೆ.

ಹೌದು, ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಕೆ.ಎಲ್. ರಾಹುಲ್ ನೇತೃತ್ವ ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ವಿರಾಟ್ ಕೊಹ್ಲಿ ಪಡೆ 97 ರನ್‌ಗಳ ಹೀನಾಯ ಸೋಲು ಕಂಡಿತ್ತು. ಇದೀಗ ಪಂಜಾಬ್ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಐಪಿಎಲ್ ಆಡಳಿತ ಮಂಡಳಿ 12 ಲಕ್ಷ ರುಪಾಯಿ ದಂಡ ವಿಧಿಸಿದೆ. ಇದರೊಂದಿಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರನೊಬ್ಬ ದಂಡ ತೆತ್ತ ಮೊದಲ ಪ್ರಕರಣ ಇದು ಎನಿಸಿಕೊಂಡಿದೆ.

RCB ವಿರುದ್ಧ ಪಂಜಾಬ್ ದಿಗ್ವಿಜಯ: ವಿರಾಟ್ ಪಡೆ ಎಡವಿದ್ದೆಲ್ಲಿ..?

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ನೀಡಿದ್ದ ಎರಡು ಕ್ಯಾಚ್‌ಗಳನ್ನು ವಿರಾಟ್ ಕೊಹ್ಲಿ ಕೈಚೆಲ್ಲಿದ್ದರು. ಇದರ ಜತೆಗೆ ಬ್ಯಾಟಿಂಗ್‌ನಲ್ಲೂ ನಾಯಕ ವಿರಾಟ್ ಕೊಹ್ಲಿ ಕೇವಲ 1 ರನ್ ಬಾರಿಸಿ ಶೆಲ್ಡನ್ ಕಾಟ್ರೆಲ್‌ಗೆ ವಿಕೆಟ್ ಒಪ್ಪಿಸಿದ್ದರು. ಕೆ.ಎಲ್ ರಾಹುಲ್ ನೀಡಿದ್ದ ಕ್ಯಾಚ್ ಹಿಡಿದಿದ್ದರೆ ಪಂಜಾಬ್ ತಂಡವು 180 ರನ್‌ಗಳೊಳಾಗಿ ನಿಯಂತ್ರಿಸಬಹುದಿತ್ತು. ಆಗ ಹೆಚ್ಚು ನಾವು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ. ನಾವು ಎಲ್ಲಿ ತಪ್ಪು ಮಾಡಿದೆವು ಅನ್ನೋದು ಗೊತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ಪಂದ್ಯ ಮುಕ್ತಾಯದ ಬಳಿಕ ಹೇಳಿದ್ದರು.
 

click me!