IPL 2020: ಪೃಥ್ವಿ ಶಾ ಅರ್ಧಶತಕ, CSKಗೆ 176 ರನ್ ಟಾರ್ಗೆಟ್!

Published : Sep 25, 2020, 09:10 PM IST
IPL 2020: ಪೃಥ್ವಿ ಶಾ ಅರ್ಧಶತಕ, CSKಗೆ  176 ರನ್ ಟಾರ್ಗೆಟ್!

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 175 ರನ್ ಸಿಡಿಸಿದೆ.  ಇದೀಗ ಈ ಮೊತ್ತ ಚೇಸ್ ಮಾಡಲು ಚೆನ್ನೈ ರೆಡಿಯಾಗಿದೆ. ಆದರೆ ಡೆಲ್ಲಿ ಬೌಲಿಂಗ್ ಪಡೆ ಇದಕ್ಕೆ ಅವಕಾಶ ನೀಡುತ್ತಾ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ   

ದುಬೈ(ಸೆ.25): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ದಿಟ್ಟ ಹೋರಾಟ ನೀಡಿದೆ.  ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಹೋರಾಟದಿಂದ  ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಉತ್ತಮ ಆರಂಭ ನೀಡಿದರು. ಕೊಂಚ  ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 94 ರನ್ ಜೊತೆಯಾಟ ನೀಡಿತು. ಅಪಾಯದ ಸೂಚನೆ ನೀಡಿದ ಧವನ್ ಹಾಗೂ ಪೃಥ್ವಿ ಪಾರ್ಟ್ನರ್‌ಶಿಪ್ ಬ್ರೇಕ್ ಮಾಡಲು, ನಾಯಕ ಧೋನಿ ಪಿಯೂಷ್ ಚಾವ್ಲಾ ಸ್ಪಿನ್ ಅಸ್ತ್ರ ಬಳಸಿದರು.

ಚಾವ್ಲಾ ಸ್ಪಿನ್ ಮೋಡಿಗೆ 27 ಎಸೆತದಲ್ಲಿ 35 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು. ಇತ್ತ ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದ ಪೃಥ್ವಿ ಶಾ 64 ರನ್ ಸಿಡಿಸಿ ನಿರ್ಗಮಿಸಿದರು. ಇಬ್ಬರೂ ಆರಂಭಿಕರೂ ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. 

ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಜೊತೆಯಾಟದಿಂದ ಡೆಲ್ಲಿ ಮತ್ತೆ ಚೇತರಿಸಿಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ 26ರನ್ ಸಿಡಿಸಿ ಔಟಾದರು. ಪಂತ್ ಅಜೇಯ 37 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ. 

ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ತಂಡದಲ್ಲಿ ಎರಡು ಬದಲಾವಣೆಗಳಾಗಿವೆ. ಇಂಜುರಿಯಾದ ಆರ್ ಅಶ್ವಿನ್ ಬದಲು ಅಮಿತ್ ಮಿಶ್ರಾ ಆಗಮಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಹೆಗ್ಗಳಿಕೆ ಮಿಶ್ರಾ ಬೆನ್ನಿಗಿದೆ. ಇನ್ನು ವೇಗದ ವಿಭಾಗದಲ್ಲಿ ಅವೇಶ್ ಖಾನ್ ತಂಡ ಸೇರಿಕೊಂಡಿದ್ದಾರೆ. ಇತ್ತ ಕಾಗಿಸೋ ರಬಾಡಾ ದಾಳಿಗೆ ಚೆನ್ನೈ ರನ್ ಗಳಿಸುವುದು ಕಠಿಣ ಸವಲಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!