ದುಬೈನಲ್ಲಿ RCB ತಂಡ ಸೇರಿಕೊಂಡ ABD ಸೇರಿದಂತೆ ಸೌತ್ ಆಫ್ರಿಕಾ ಕ್ರಿಕೆಟರ್ಸ್!

By Suvarna NewsFirst Published Aug 22, 2020, 3:11 PM IST
Highlights

IPL ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ದುಬೈನಲ್ಲಿ ಬೀಡು ಬಿಟ್ಟಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟಿಗರು ನೇರವಾಗಿ ದುಬೈ ತೆರಳಿದ್ದರೆ, RCB ತಂಡ ವಿದೇಶಿ ಕ್ರಿಕೆಟಿಗರು ತಮ್ಮ ತಮ್ಮ ದೇಶಗಳಿಂದ ನೇರವಾಗಿ ದುಬೈಗೆ ಆಗಮಿಸುತ್ತಿದ್ದಾರೆ. ಇದೀಗ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ AB ಡಿವಿಲಿಯರ್ಸ್ ಹಾಗೂ ಡೇಲ್ ಸ್ಟೇನ್ RCB ತಂಡ ಸೇರಿಕೊಂಡಿದ್ದಾರೆ.

ದುಬೈ(ಆ.22):  IPL ಟೂರ್ನಿ ರಂಗು ಕಳೆಗಟ್ಟಿದೆ. ಭಾರತದಲ್ಲಿ 13ನೇ ಆವೃತ್ತಿ IPL ಟೂರ್ನಿ ನಡೆಯದಿದ್ದರೂ ಭಾರತೀಯರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ವೈರಸ್ ಕಾರಣ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭವಾಗುತ್ತಿರುವ ಐಪಿಎಲ್ ಟೂರ್ನಿಗಾಗಿ ಇದೀಗ 8 ತಂಡಗಳು ದುಬೈಗೆ ತೆರಳಿದೆ. RCB ಕೂಡ ದುಬೈನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದೆ. ಇದೀಗ ದುಬೈನಲ್ಲಿರುವ RCB ತಂಡದ ಜೊತೆಗೆ ಫೇವರಿಟ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಹಾಗೂ ,ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಸೇರಿಕೊಂಡಿದ್ದಾರೆ.

ಪ್ರತ್ಯೇಕ ವಿಮಾನದಲ್ಲಿ ದುಬೈಗೆ ಹಾರಿದ ಕೊಹ್ಲಿ: RCB ತಂಡ ಸೇರಿಕೊಂಡ ನಾಯಕ!

ಶುಕ್ರವಾರ(ಆ.21) ನಾಯಕ ವಿರಾಟ್ ಕೊಹ್ಲಿ ದುಬೈ ತಲುಪಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದೀಗ ಸೌತ್ ಆಫ್ರಿಕಾದಿಂದ ಆಗಮಿಸಿದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 7 ದಿನಗಳ ಕಾಲ ಐಪಿಎಲ್ ತಂಡದ ಕ್ರಿಕೆಟಿಗರು ಕ್ವಾರಂಟೈನ್‌ಗೆ ಒಳಪಡಲಿದ್ದಾರೆ.

ನಾಯಕನಿಲ್ಲದೇ ದುಬೈ ವಿಮಾನವೇರಿದ RCB ಪಡೆ..! ಈಗ ಶುರುವಾಯ್ತು ಧೋನಿ-ಕೊಹ್ಲಿ ಅಭಿಮಾನಿಗಳ ಕಿತ್ತಾಟ

ಹೊಸ ಮಾರ್ಗಸೂಚಿ, ನಿಯಮ ಹಾಗೂ ಮುಂಜಾಗ್ರತೆಗಳಿಂದ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಪ್ರಯಾಣ ಮಾಡಿದಂತೆ ಸಾಧ್ಯವಿಲ್ಲ. ಕೊರೋನಾ ವೈರಸ್ ಕಾರಣ ಎಚ್ಚರ ವಹಿಸಬೇಕಿದೆ. ಸದ್ಯ ಐಪಿಲ್ ಟೂರ್ನಿಗಾಗಿ ದುಬೈಗೆ ಆಗಮಿಸಿರುವುದು ಸಂತಸ ತಂದಿದೆ. ಉತ್ತಮ ಟೂರ್ನಿಯನ್ನು ಎದುರನೋಡುತ್ತಿದ್ದೇನೆ. ಜೊತೆಗೆ ತಂಡ ಸೇರಿಕೊಂಡಿರುವ ಹೊಸ ಮುಖಗಳನ್ನು ನೋಡಲು, ಅವರ ಜೊತೆ ಒಟ್ಟಾಗಿ ಆಡಲು ಉತ್ಸುಕನಾಗಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ತಂಡದ ವೇಗಿ ಡೇಲ್ ಸ್ಟೇನ್ ಕೂಡ ಮತ್ತೆ ಆರ್‌ಸಿಬಿ ಸೇರಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಉಷ್ಣತೆ ಇದೆ. ಈ ಬಿಸಿ ವಾತಾವರಣದಲ್ಲಿ ಪ್ರದರ್ಶನ ಸವಾಲಿನ ಕೆಲಸ ಎಂದಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ. 

click me!