IPL 2020: ಮತ್ತೊಂದು ದಾಖಲೆ ಬರೆದ ಶಿಖರ್ ಧವನ್!

Published : Oct 20, 2020, 08:49 PM ISTUpdated : Oct 21, 2020, 08:28 AM IST
IPL 2020: ಮತ್ತೊಂದು ದಾಖಲೆ ಬರೆದ ಶಿಖರ್ ಧವನ್!

ಸಾರಾಂಶ

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಭರ್ಜರಿ ಫಾರ್ಮ್‌ಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಸೆಂಚುರಿ ಸಿಡಿಸಿ ಅಬ್ಬರಿಸಿದರೆ, ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅರ್ಧಶತಕ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಮತ್ತೊಂದು ದಾಖಲೆ ಬರೆದಿದ್ದಾರೆ.

ದುಬೈ(ಅ.20):  ಐಪಿಎಲ್ 2020 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್  ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದ ಧವನ್ ಇದೀಗ ಐಪಿಎಲ್ ಟೂರ್ನಿಯಲ್ಲಿ 5,000 ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ.

IPL 2020: ಸೆಂಚುರಿ ಸಿಡಿಸಿ ದಾಖಲೆ ಬರೆದ ಶಿಖರ್ ಧವನ್!

ಐಪಿಎಲ್ ಟೂರ್ನಿಯಲ್ಲಿ 5,000 ರನ್ ಪೂರೈಸಿದ 5ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ವಿರಾಜಮಾನರಾಗಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ 5000+ ರನ್ ಸಿಡಿಸಿದ ಸಾಧಕರು:
5759 ವಿರಾಟ್ ಕೊಹ್ಲಿ
5368 ಸುರೇಶ್ ರೈನಾ
5158 ರೋಹಿತ್ ಶರ್ಮಾ
5037 ಡೇವಿಡ್ ವಾರ್ನರ್
5003* ಶಿಖರ್ ಧವನ್

5 ಸಾವಿರ ರನ್ ಜೊತೆಗೆ ಮತ್ತೊಂದು ದಾಖಲೆ ಬರೆದಿದ್ದಾರೆ. ಐಪಿಎಲ್ ಆವೃತ್ತಿಯಲ್ಲಿ ಸತತ 50 + ಸ್ಕೋರ್ ಸಿಡಿಸಿದ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಧವನ್, 6ನೇ ಸ್ಥಾನ ಅಲಂಕರಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಸತತ 50+ ಸಿಡಿಸಿದ ಸಾಧಕರು
5 (ಬಾರಿ) ವೀರೇಂದ್ರ ಸೆಹ್ವಾಗ್, 2012 (DC)
5(ಬಾರಿ) ಜೋಸ್ ಬಟ್ಲರ್, 2018 (RR)
5(ಬಾರಿ) ಡೇವಿಡ್ ವಾರ್ನರ್, 2019 (SRH)
4(ಬಾರಿ) ವಿರಾಟ್ ಕೊಹ್ಲಿ, 2016 (RCB)
4(ಬಾರಿ) ಕೇನ್ ವಿಲಿಯಮ್ಸನ್, 2018 (SRH)
4(ಬಾರಿ) ಶಿಖರ್ ಧವನ್, 2020 (DC)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ
IPL 2026: ರಾಜಸ್ಥಾನ ರಾಯಲ್ಸ್‌ಗೆ ಅಚ್ಚರಿ ನಾಯಕನ ನೇಮಕ; ರವೀಂದ್ರ ಜಡೇಜಾಗೆ ಭಾರೀ ನಿರಾಸೆ