RCB ವಿರುದ್ಧದ ಪಂದ್ಯಕ್ಕೆ ಹೊಸ ಕಲರ್‌ಫುಲ್ ಜರ್ಸಿ ತೊಡಲಿದೆ ಡೆಲ್ಲಿ!

Published : Oct 05, 2020, 04:04 PM IST
RCB ವಿರುದ್ಧದ ಪಂದ್ಯಕ್ಕೆ ಹೊಸ ಕಲರ್‌ಫುಲ್ ಜರ್ಸಿ ತೊಡಲಿದೆ ಡೆಲ್ಲಿ!

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯ ಹಲವು ವಿಶೇಷತೆಗಳಿಂದ ಕೂಡಿದೆ. ವಿಶೇಷವಾಗಿ ಇಂದಿನ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಜರ್ಸಿ ತೊಡಲಿದೆ. ಹಲವು ಬಣ್ಣಗಳ ಈ ಜರ್ಸಿ ಕುರಿತು ಹೆಚ್ಚಿನ ವಿವರ ಇಲ್ಲಿವೆ.

ದುಬೈ(ಅ.05): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟ ಈಗಾಗಲೇ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ವಿಶೇಷ ಜರ್ಸಿ ಮೂಲಕ ಕಣಕ್ಕಿಳಿಯುತ್ತಿದೆ ಹಲವು ಬಣ್ಣಗಳ ಈ ಜರ್ಸಿ ಮೂಲಕ ಭಾರತದ ವಿವಿಧತೆಯಲ್ಲಿ ಏಕತೆಯನ್ನು ಸಾರಲಿದೆ. ಇಷ್ಟೇ ಅಲ್ಲ ಫ್ರಾಂಚೈಸಿ ಮಾಲೀಕತ್ವ ಹೊಂದಿರು JSW ಸಹ ಸಂಸ್ಥೆಯಾದ JSW ಪೈಂಟ್ಸ್ ಪ್ರಮೋಶನ್ ಮಾಡಲಿದೆ.

ಡೆಲ್ಲಿ ವಿರುದ್ಧ ಹೋರಾಟಕ್ಕೆ ಬದಲಾವಣೆ ಮಾಡ್ತಾರಾ ಕೊಹ್ಲಿ? ಇಲ್ಲಿದೆ ಸಂಭವನೀಯ ತಂಡ!

ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ JSW ಕ್ರೀಡೆಗೆ ನೆರವು ನೀಡುತ್ತಿದೆ. ಹಲವು ಕ್ರೀಡೆ ಹಾಗೂ ಕ್ರೀಡಾಪಟು, ತಂಡಗಳಿಗೆ JSW ಪ್ರಾಯೋಜಕತ್ವ ನೀಡುವ ಮೂಲಕ ಭಾರತದ ಕ್ರೀಡಾ ಪ್ರತಿಭಗಳಿಗೆ ವೇದಿಕೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಪ್ರಾಯೋಜಕತ್ವ ಒಪ್ಪಂದದಲ್ಲಿರುವ JSW ಪೈಂಟ್ಸ್ ಇದೀಗ ವಿಶೇಷವಾಗಿ ಹಲವು ಬಣ್ಣಗಳ ಜರ್ಸಿಯನ್ನು ಡೆಲ್ಲಿ ತಂಡಕ್ಕೆ ನೀಡಿದೆ.

IPL 2020: ಡೆಲ್ಲಿ ಕ್ಯಾಪಿಟಲ್ಸ್‌ ಮೇಲಿಂದು ಸವಾರಿ ಮಾಡುತ್ತಾ RCB..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯಕ್ಕೆ ಡೆಲ್ಲಿ ತಂಡ ವಿನೂತನ ಜರ್ಸಿ ತೊಡಲಿದೆ. ಈ ಜರ್ಸಿ ಬ್ರ್ಯಾಂಡ್ ಪ್ರಮೋಶನ್ ಮಾತ್ರವಲ್ಲ, ಜೊತೆಗೆ JSW ಕ್ರೀಡಾ ಸೇವೆಗೆ ಗೌರವ ಸೂಚಿಸುವ ಕಾರ್ಯವಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಿಇಒ ಧೀರಜ್ ಮಲ್ಹೋತ್ರ ಹೇಳಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!
ಕ್ಯಾಮರೋನ್ ಗ್ರೀನ್ ಬಳಿಕ ಮತ್ತೋರ್ವ ಕಾಸ್ಟ್ಲಿ ಆಟಗಾರನನ್ನು ಖರೀದಿಸಿದ ಕೋಲ್ಕತಾ! ಕೆಕೆಆರ್ ಈಗ ಮತ್ತಷ್ಟು ಬಲಿಷ್ಠ