ಐಪಿಎಲ್ ಟೂರ್ನಿಯು ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ತವರಿಗೆ ಮರಳಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಚೆನ್ನೈ(ಮಾ.16): ಮಾರಕ ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾ.29ರಿಂದ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಅಮಾನತು ಮಾಡಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಚೆನ್ನೈನಿಂದ ರಾಂಚಿಗೆ ತೆರಳಿದ್ದಾರೆ.
"It has become your home sir!" Keep whistling, as Dhoni bids a short adieu to . 🦁💛 pic.twitter.com/XUx3Lw4cpH
— Chennai Super Kings (@ChennaiIPL)ಐಪಿಎಲ್ ರದ್ದಾದರೂ ಶತಕದ ಸಿಡಿಸಿ ಅಬ್ಬರಿಸಿದ ಧೋನಿ!
ಐಪಿಎಲ್‌ಗಾಗಿ ಮಾ.1ರಿಂದ ಅಭ್ಯಾಸದಲ್ಲಿ ನಿರತರಾಗಿದ್ದ ಧೋನಿ, ಅಭ್ಯಾಸ ಪಂದ್ಯವೊಂದರಲ್ಲಿ ಶತಕ ಸಹ ಸಿಡಿಸಿದ್ದರು. ರಾಂಚಿಗೆ ತೆರಳುವ ಮೊದಲು ಧೋನಿ ಚೆಪಾಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಕಾಲ ಕಳೆದರು. ಆ ವಿಡಿಯೋವನ್ನು ಚೆನ್ನೈ ತಂಡ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ್ದು, ವಿಡಿಯೋ ವೈರಲ್ ಆಗಿದೆ.
ಧೋನಿ ಕ್ರಿಕೆಟ್ ಭವಿಷ್ಯ ನುಡಿದ ಸುನಿಲ್ ಜೋಶಿ..!
ಧೋನಿ ಪಾಲಿಗೆ 2020ರ ಐಪಿಎಲ್ ಅತ್ಯಂತ ಮಹತ್ವದಾಗಿದ್ದು, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರಷ್ಟೇ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.