ಇಂಡೋ-ಆಸೀಸ್‌ ಟೆಸ್ಟ್‌: ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ

By Kannadaprabha NewsFirst Published Nov 11, 2020, 8:56 AM IST
Highlights

ಡಿಸೆಂಬರ್ 17ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯ ಪಂದ್ಯಾವಳಿಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅನುಮತಿ ನೀಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತ ಪಡಿಸಿದೆ.  ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಸಿಡ್ನಿ(ನ.11): ಭಾರತ ಹಾಗೂ ಆಸ್ಪ್ರೇಲಿಯಾ ಟೆಸ್ಟ್‌ ಸರಣಿಗೆ ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶ ನೀಡಲಾಗುವುದು ಎಂದು ಮಂಗಳವಾರ ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ. 

ಮೊದಲ ಟೆಸ್ಟ್‌ ಅಡಿಲೇಡ್‌ನಲ್ಲಿ ನಡೆಯಲಿದ್ದು, ಅದು ಹಗಲು-ರಾತ್ರಿ ಪಂದ್ಯವಾಗಿರಲಿದೆ. ಆ ಪಂದ್ಯಕ್ಕೆ ಪ್ರತಿ ದಿನ ಗರಿಷ್ಠ 27,000 ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ. ಸಿಡ್ನಿಯಲ್ಲಿ 2ನೇ ಟೆಸ್ಟ್‌ ನಡೆಯಲಿದ್ದು, ದಿನಕ್ಕೆ 23,000, 3ನೇ ಟೆಸ್ಟ್‌ ಮೆಲ್ಬರ್ನ್‌ನಲ್ಲಿ ನಡೆಯಲಿದ್ದು, ದಿನಕ್ಕೆ 25000, ಬ್ರಿಸ್ಬೇನ್‌ನಲ್ಲಿ ಅಂತಿಮ ಪಂದ್ಯ ನಡೆಯಲಿದ್ದು ದಿನಕ್ಕೆ 30,000 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುವುದು ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ.

ಟೀಂ ಇಂಡಿಯಾ ಆಸೀಸ್ ಪ್ರವಾಸ: ವಿರಾಟ್‌ ಕೊಹ್ಲಿಗೆ ಪಿತೃತ್ವ ರಜೆ; ಟೆಸ್ಟ್ ತಂಡ ಕೂಡಿಕೊಂಡ ಹಿಟ್‌ಮ್ಯಾನ್..!

ಆದರೆ ನವೆಂಬರ್ 27ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಯು ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 3 ಏಕದಿನ ಆ ಬಳಿಕ 3 ಟಿ20 ಪಂದ್ಯಗಳ ಸರಣಿ ನಡೆಯಲಿದ್ದು, ನಂತರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದೆ. 

ಆಯ್ಕೆಗಾರರ ಸೇರ್ಪಡೆಗೆ ಬಿಸಿಸಿಐ ಅರ್ಜಿ ಆಹ್ವಾನ

ನವದೆಹಲಿ: ಭಾರತ ಪುರುಷರ ತಂಡದ ಆಯ್ಕೆ ಸಮಿತಿ ಸದಸ್ಯರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ದೇವಾಂಗ್‌ ಗಾಂಧಿ, ಸರಣ್‌ದೀಪ್‌ ಸಿಂಗ್‌ ಹಾಗೂ ಜತಿನ್‌ ಪರಂಜಪೆ ಅವರ ಕಾರಾರ‍ಯವಧಿ ಮುಕ್ತಾಯಗೊಂಡಿದ್ದು, ಈ ಮೂವರ ಸ್ಥಾನಕ್ಕೆ ಹೊಸಬರನ್ನು ನೇಮಿಸಬೇಕಿದೆ. 

ಅರ್ಜಿ ಸಲ್ಲಿಸಲು ನ.15 ಕೊನೆ ದಿನವಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು 60 ವರ್ಷದೊಳಗಿರಬೇಕು. ಕನಿಷ್ಠ 30 ಪ್ರಥಮ ದರ್ಜೆ ಪಂದ್ಯಗಳನ್ನಾಡಿರಬೇಕು ಇಲ್ಲವೇ 7 ಟೆಸ್ಟ್‌ ಅಥವಾ 10 ಏಕದಿನ ಹಾಗೂ 20 ಪ್ರ.ದರ್ಜೆ ಪಂದ್ಯಗಳನ್ನಾಡಿರಬೇಕು ಎನ್ನುವ ಷರತ್ತು ವಿಧಿಸಿದೆ .


 

click me!