ಐಪಿಎಲ್ 2020: ನನ್ನ ಕ್ರಿಕೆಟ್ ಜೀವನದಲ್ಲಿ ಕಂಡ ಅತ್ಯದ್ಭುತ ರನ್ ಸೇವ್‌ ಎಂದು ಉದ್ಘರಿಸಿದ ಸಚಿನ್ ತೆಂಡುಲ್ಕರ್..!

Naveen Kodase   | Asianet News
Published : Sep 28, 2020, 02:13 PM IST
ಐಪಿಎಲ್ 2020: ನನ್ನ ಕ್ರಿಕೆಟ್ ಜೀವನದಲ್ಲಿ ಕಂಡ ಅತ್ಯದ್ಭುತ ರನ್ ಸೇವ್‌ ಎಂದು ಉದ್ಘರಿಸಿದ  ಸಚಿನ್ ತೆಂಡುಲ್ಕರ್..!

ಸಾರಾಂಶ

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಕೆಟಿಗ ನಿಕೋಲಸ್ ಪೂರನ್ ಅವರ ಕ್ಷೇತ್ರ ರಕ್ಷಣೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮನ ಗೆದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಶಾರ್ಜಾ(ಸೆ.28): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವೆ ಭಾನುವಾರ(ಸೆ.27) ನಡೆದ ಪಂದ್ಯ ದಾಖಲೆಯ ರನ್ ಚೇಸ್‌ಗೆ ಸಾಕ್ಷಿಯಾಯಿತು. ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 224 ರನ್‌ಗಳ ಗುರಿಯನ್ನು ರಾಜಸ್ಥಾನ 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇದೆಲ್ಲದರ ಹೊರತಾಗಿಯೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಿಕೋಲಸ್ ಪೂರನ್ ಅವರು ಮಾಡಿದ ಕ್ಷೇತ್ರ ರಕ್ಷಣೆ ಕ್ರಿಕೆಟ್ ಅಭಿಮಾನಿಗಳು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.

ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಬೌಂಡರಿ ಗೆರೆಯಲ್ಲಿ ಆಕರ್ಷಕ ಜಂಪ್ ಮಾಡಿ ಸಿಕ್ಸರ್ ತಡೆದದ್ದು ಎಲ್ಲರು ಒಂದು ಕ್ಷಣ ವಾವ್ಹ್  ಎನ್ನುವಂತಿತ್ತು. ಮುರುಗನ್ ಅಶ್ವಿನ್ ಎಸೆದ ಎಂಟನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡು ಸಿಕ್ಸರ್ ಗೆರೆ ದಾಟಿತು ಎಂದೇ ಎಲ್ಲರು ಬಾವಿಸಿಬಿಟ್ಟಿದ್ದರು. ಆದರೆ ಮಿಂಚಿನಂತೆ ಬಂದ ಪೂರನ್ ಗಾಳಿಯಲ್ಲಿ ನೆಗೆದು ಸಿಕ್ಸರ್ ಹೋಗುವುದನ್ನು ತಡೆದು ತಂಡಕ್ಕೆ 4 ರನ್‌ಗಳನ್ನು ಉಳಿಸಿಕೊಟ್ಟರು. 

ಇದಾಗಿ ಕೆಲವೇ ಹೊತ್ತಿನಲ್ಲಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ವಿಂಡೀಸ್ ಕ್ರಿಕೆಟಿಗನ ಚುರುಕಿನ ಕ್ಷೇತ್ರ ರಕ್ಷಣೆಗೆ ಶಹಬ್ಬಾಸ್ ಎಂದಿದ್ದಾರೆ. ಇನ್ನು ಕ್ರಿಕೆಟ್ ದೇವರೆಂದೇ ಹೆಸರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಒಂದು ಹೆಜ್ಜೆ ಮುಂದೆ ಹೋಗಿ, ನನ್ನ ಕ್ರಿಕೆಟ್‌ ಜೀವನದಲ್ಲಿ ನಾನು ನೋಡಿದ ಅತ್ಯದ್ಭುತ ರನ್ ಸೇವ್ ಇದು ಎಂದು ಗುಣಗಾನ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಅತ್ಯದ್ಭುತವಾದ ಕ್ಷೇತ್ರ ರಕ್ಷಣೆಯ ಕ್ಷಣಗಳನ್ನು ನಾವೆಲ್ಲ ನೋಡಿದ್ದೇವೆ. ಆದರೆ ಪೂರನ್ ಅವರ ಈ ಫೀಲ್ಡಿಂಗ್‌ಗೆ ಅಗ್ರಸ್ಥಾನ ಎಂದು ಹಲವರು ಕ್ರಿಕೆಟ್ ಪಂಡಿತರ ಷರಾ ಬರೆದಿದ್ದಾರೆ.

ಇದು ನನ್ನ ಜೀವನದಲ್ಲಿ ಕಂಡ ಬೆಸ್ಟ್ ಸೇವ್. ಇದು ನಿಜಕ್ಕೂ ಅತ್ಯದ್ಭುತ ಎಂದು ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಉದ್ಘರಿಸಿದ್ದಾರೆ.

ಪೂರನ್ ಅವರ ಕ್ಷೇತ್ರ ರಕ್ಷಣೆಯ ಆ ಬೆಸ್ಟ್ ವಿಡಿಯೋವನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?
ಜಡ್ಡು ಬಿಟ್ಟುಕೊಟ್ಟು ಮರಿ ಜಡೇಜಾಗೆ 14.2 ಕೋಟಿ ಖರ್ಚು ಮಾಡಿದ ಸಿಎಸ್‌ಕೆ! ಯಾರು ಈ ಪ್ರಶಾಂತ್ ವೀರ್?