ಮಾರ್ಚ್ ಅಂತ್ಯಕ್ಕೆ ಐಪಿಎಲ್ 2020 ಆರಂಭ; ವೇಳಾಪಟ್ಟಿ ಪ್ರಕಟಿಸಲಿದೆ ಬಿಸಿಸಿಐ?

Published : Dec 19, 2019, 02:28 PM ISTUpdated : Dec 19, 2019, 02:29 PM IST
ಮಾರ್ಚ್ ಅಂತ್ಯಕ್ಕೆ ಐಪಿಎಲ್ 2020 ಆರಂಭ; ವೇಳಾಪಟ್ಟಿ ಪ್ರಕಟಿಸಲಿದೆ ಬಿಸಿಸಿಐ?

ಸಾರಾಂಶ

IPL ಟೂರ್ನಿ ಕಾವು ಹೆಚ್ಚಾಗುತ್ತಿದೆ. ಇದೀಗ ಬಿಸಿಸಿಐ 2020ರ ಐಪಿಎಲ್ ಟೂರ್ನಿ ವೇಳಾಪಟ್ಟಿ ಪ್ರಕಟಿಸಲು ಮುಂದಾಗಿದೆ. 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭ ಯಾವಾಗ? ಟೂರ್ನಿ ವೇಳಾಪಟ್ಟಿ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೋಲ್ಕತಾ(ಡಿ.19): 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಕೆಲ ತಿಂಗಳು ಬಾಕಿ ಇದೆ. ಆದರೆ ಐಪಿಎಲ್ ಜ್ವರ ಈಗಲೇ ಆರಂಭಗೊಂಡಿದೆ. ಇದಕ್ಕೆ ಕಾರಣ ಆಟಗಾರರ ಹರಾಜು. ಐಪಿಎಲ್ ಆಕ್ಷನ್‌ನಿಂದ 2020ರ ಐಪಿಎಲ್ ಟೂರ್ನಿಗೆ ಈಗಲೇ ಅಭಿಮಾನಿಗಳು ತಯಾರಿ ನಡೆಸುತ್ತಿದ್ದಾರೆ. ಇದರ ಬೆನಲ್ಲೇ ಬಿಸಿಸಿಐ ಐಪಿಎಲ್ ವೇಳಾಪಟ್ಟಿ ಪ್ರಕಟಿಸಲು ಮುಂದಾಗಿದೆ.

ಇದನ್ನೂ ಓದಿ: IPL 2020: ಹರಾಜಿಗೆ ಮುನ್ನ ಮತ್ತೆ 6 ಆಟಗಾರರ ಸೇರ್ಪಡೆ

ಬಿಸಿಸಿಐ ಮೂಲಗಳ ಪ್ರಕಾರ 2020ರ ಐಪಿಎಲ್ ಟೂರ್ನಿ 2019ರ ಮಾರ್ಚ್ 28 ರಿಂದ ಆರಂಭಗೊಳ್ಳಲಿದ್ದು, ಮೇ 24ಕ್ಕೆ ಅಂತ್ಯವಾಗಲಿದೆ. ಈಗಾಗಲೇ 8 ಫ್ರಾಂಚೈಸಿಗಳ ಜೊತೆ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಚರ್ಚೆ ನಡೆಸಿದೆ. ದಿನಾಂಕ ಕುರಿತು ಮಾಹಿತಿ ನೀಡಿದೆ. ಫ್ರಾಂಚೈಸಿಗಳು ಕೂಡ ಬಿಸಿಸಿಐ ದಿನಾಂಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಇಂದು IPL ಆಟಗಾರರ ಹರಾಜು; ಯಾರಿಗೆ ಸಿಗುತ್ತೆ ಜಾಕ್‌ಪಾಟ್..?.

2020ರ ಐಪಿಎಲ್ ಟೂರ್ನಿಯಲ್ಲಿ ನೋ ಬಾಲ್ ಅಂಪೈರ್ ಸೇರಿದಂತೆ ಹಲವು ಹೊಸ ನಿಯಮಗಳು ಪರಿಚಯಿಸಲಾಗುತ್ತಿದೆ. ವಿಶೇಷವಾಗಿ ಫುಟ್ಬಾಲ್ ಟೂರ್ನಿಲ್ಲಿರುವಂತೆ ಲೋನ್ ಮೂಲಕ ಸರಣಿ ನಡುವೆ ಮತ್ತೊಂದು ತಂಡಕ್ಕೆ ವರ್ಗಾವಣೆ ಪ್ರಕ್ರಿಯೆಗೂ ಚಾಲನೆ ನೀಡುವ ಸಾಧ್ಯತೆ ಇದೆ. ಮಿಡ್ ವೇ ಲೋನ್ ಮೂಲಕ, ಟೂರ್ನಿಯ ಮಧ್ಯಭಾಗದಲ್ಲಿ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರನ್ನು ವರ್ಗಾಣವವಣೆ ಆಗಲು ಅವಕಾಶವಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!