ನಕ್ಸಲ್ ನಾಯಕ ಬಸವರಾಜ್ ಶವ ಕುಟುಂಬಕ್ಕೆ ನೀಡುವುದಕ್ಕೆ ಪೊಲೀಸರು ಹಿಂದೆಮುಂದೆ ನೋಡ್ತಿರೋದೇಕೆ?

Published : May 26, 2025, 11:39 AM IST
Naxal Leader basavaraj

ಸಾರಾಂಶ

ಹತ್ಯೆಯಾದ ನಕ್ಸಲ್ ನಾಯಕ ಬಸವರಾಜ್ ಅವರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಪೊಲೀಸರು ಹಿಂದೆ ಮುಂದೆ ನೋಡ್ತಿರೋದೇಕೆ ಇಲ್ಲಿದೆ ಡಿಟೇಲ್ ಸ್ಟೋರಿ.

ರಾಯ್‌ಪುರ: ಕಳೆದ ವಾರ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಪ್ರಮುಖ ನಕ್ಸಲ್ ನಾಯ, ಸಿಪಿಐ ಮಾವೋವಾದಿ ಪ್ರಧಾನ ಕಾರ್ಯದರ್ಶಿನಂಬಲ ಕೇಶವರಾವ್ ಅಲಿಯಾಸ್ ಬಸವರಾಜ್ ಮೃತದೇಹವನ್ನು ಆತನ ಕುಟುಂಬದವರಿಗೆ ನೀಡಲು ಛತ್ತೀಸ್‌ಗಢ ಪೊಲೀಸರು ನಿರಾಕರಿಸುತ್ತಿದ್ದಾರೆ ಎಂದು ವರದಿಯೊಂದು ಹರಿದಾಡುತ್ತಿದೆ. ಬಸವರಾಜುವಿನ ಅಂತ್ಯಕ್ರಿಯೆಯನ್ನು ಸಾರ್ವಜನಿಕವಾಗಿ ನಡೆಸಲು ಕುಟುಂಬದವರಿಗೆ ಬಿಟ್ಟರೆ, ಅದು ಆತನ ವೈಭವೀಕರಣಕ್ಕೆ ತಿರುಗುವ ಸಾಧ್ಯತೆ ಇದೆ ಎಂಬುದು ಪೊಲೀಸರ ಆತಂಕ, ನೂರಾರು ಭದ್ರತಾ ಸಿಬ್ಬಂದಿ ಹಾಗೂ ಮುಗ್ಧ ಬುಡಕಟ್ಟು ಜನಾಂಗದ ಸಾವಿಗೆ ಕಾರಣವಾಗಿರುವ ಈ ನಕ್ಸಲ್ ನಾಯಕನ ವೈಭವೀಕರಣವಾಗುವುದು ಪೊಲೀಸರಿಗೆ ಮಾತ್ರ ದೇಶದ ಪರ ಇರುವ ನಾಗರಿಕರಿಗೆ ಇಷ್ಟವಿಲ್ಲದ ವಿಚಾರವಾಗಿದೆ. ಆದರೆ ನಕ್ಸಲ್ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ ಕೆಲವರು ಒಂದು ವೇಳೆ ಬಸವರಾಜ್ ಶವ ಕುಟುಂಬಕ್ಕೆ ಹಸ್ತಾಂತರವಾದರೆ ನೂರಾರು ಜನರ ಸಾವಿಗೆ ಕಾರಣವಾದ ಆತನನ್ನು ವೀರ ಯೋಧನಂತೆ ವೈಭವೀಕರಿಸಿ ಅಂತ್ಯಸಂಸ್ಕಾರ ಮಾಡುವ ಸಾಧ್ಯತೆ ಇದೆ ಇದೇ ಕಾರಣಕ್ಕೆ ಪೊಲೀಸರು ಆತನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಬೇಕೆ ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಛತ್ತೀಸ್‌ಗಢದ ಪೊಲೀಸ್ ಮೂಲಗಳ ಪ್ರಕಾರ ಬಸವರಾಜುವಿನ ಮಲತಾಯಿ ಹಾಗೂ ಸೋದರರು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಆತನ ಹುಟ್ಟೂರಿನಲ್ಲಿವ ವಾಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಆತನ ಅಂತ್ಯಸಂಸ್ಕಾರ ನಡೆಸಲು ಆತನ ಸಹೋದರರು ಹಾಗೂ ಸೋದರ ಸಂಬಂಧಿಗಳು ಕಳೆದ ಕೆಲವು ದಿನಗಳಿಂದಲೂ ಛತ್ತೀಸ್‌ಗಢ ಪೊಲೀಸರನ್ನು ಸಂಪರ್ಕಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಛತ್ತೀಸ್‌ಗಢ ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಹಕ್ಕುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ವಿಚಾರಗಳನ್ನು ಪರಿಶೀಲಿಸಲಿದ್ದಾರೆ ಎಂದು ವರದಿಯಾಗಿದೆ ಎಂದು ಆಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ಜಮ್ಮು ಕಾಶ್ಮೀರ ಪೊಲೀಸರಿಂದ ಸಲಹೆಗಳನ್ನು ಪಡೆಯಬಹುದು ಎಂದು ಹಿರಿಯ ಅಧಿಕಾರಿಗಳು ಸುಳಿವು ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2019ರಿಂದಲೂ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಹತರಾದ ಭಯೋತ್ಪಾದಕರ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಿಲ್ಲ, ಇದಕ್ಕೆ ಪ್ರತಿಯಾಗಿ ಪೊಲೀಸರು ಕೆಲವೇ ಕೆಲವು ಮೃತರ ಸಂಬಂಧಿಕರ ಸಮ್ಮುಖದಲ್ಲಿ ಪೊಲೀಸರೇ ಗೊತ್ತು ಪಡಿಸಿದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಈ ಹಿಂದೆ ಮೃತರ ಸ್ವಾಗ್ರಾಮಗಳಲ್ಲಿ ನಡೆದ ಭಯೋತ್ಪಾದಕರ ಅಂತ್ಯಸಂಸ್ಕಾರದ ಸಮಯದಲ್ಲಿ ಅವರ ಆಪ್ತರು ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಹೀರೋ ರೀತಿ ಬಿಂಬಿಸುವಂತಹ ಕೃತ್ಯಗಳನ್ನು ನಡೆಸಿದ್ದರು. ಈ ರೀತಿಯ ಕೃತ್ಯಗಳನ್ನು ತಡೆಯುವುದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೀಗಾಗಿ ಈಗ ಬಸವರಾಜುವಿನ ಶವ ಬೇಕು ಎಂದು ಹೇಳುತ್ತಿರುವ ಕುಟುಂಬದವರಿಗೆ ಇದೇ ರೀತಿ ಪೊಲೀಸರೇ ನಡೆಸುವ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ನೀಡಬಹುದು, ಸಾರ್ವಜನಿಕರ ಗಮನಕ್ಕೆ ಬಾರದಂತಹ ಸುರಕ್ಷಿತ ಸ್ಥಳದಲ್ಲಿ ಪೊಲೀಸರು ನಡೆಸುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕುಟುಂಬದವರಿಗೆ ಅವಕಾಶ ನೀಡಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಇತ್ತ ಬಸವರಾಜು ಅವರ ಶವವನ್ನು ಪಡೆಯಲು ಈ ಮಾವೋವಾದಿಗಳೇ ಅವರ ಕುಟುಂಬವನ್ನು ರಹಸ್ಯವಾಗಿ ಪ್ರೇರೇಪಿಸಿರಬಹುದು ಎಂಬ ಮತ್ತೊಂದು ಅನುಮಾನವಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಬಳಿಕ ಈ ಸಾರ್ವಜನಿಕ ಅಂತ್ಯಸಂಸ್ಕಾರವನ್ನು ಬಳಸಿಕೊಂಡು ಆತನನ್ನು ಜನರ ಮುಂದೆ ಹೀರೋ ರೀತಿ ಬಿಂಬಿಸಿ ಜನರ ಅನುಕಂಪ ಗಿಟ್ಟಿಸಲು ಪ್ರಯತ್ನಿಸುವ ಉದ್ದೇಶವನ್ನು ಕೆಲ ಮಾವೋವಾದಿಗಳು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತ ಛತ್ತೀಸ್‌ಗಢದ ನಾರಾಯಣಪುರದಲ್ಲಿ ನಡೆದ ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಕಾರ್ಯಾಚರಣೆಯಲ್ಲಿ ಈಗಾಗಲೇ 27 ನಕ್ಸಲರ ನೆಲಸಮ ಮಾಡಲಾಗಿದ್ದು, ಅವರೆಲ್ಲರ ಶವಗಳನ್ನು ಛತ್ತೀಸ್‌ಗಢದ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

PREV
Read more Articles on
click me!

Recommended Stories

ಸಂತ ಕಬೀರ ನಗರದಲ್ಲಿ ಯೋಗಿ ಭರ್ಜರಿ ಘೋಷಣೆ
ಗಢ ಗಢ ನಡುಗಿದ ಅನುಭವ; ನೋಡಿದ್ರೆ ಕುಸಿದ ಬಾವಿ, ವಿಡಿಯೋ ವೈರಲ್