ಪ್ರೀತಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಹೇಳಲಾಗುತ್ತದೆ. ಇದು ಯಾರಿಗಾದರೂ ಯಾವುದೇ ಸಮಯದಲ್ಲಿಯಾದರೂ ಸಂಭವಿಸಬಹುದು. ಇಂತಹ ಒಂದು ಪ್ರಕರಣ ಇದೀಗ ಬಿಹಾರದಿಂದ ಬೆಳಕಿಗೆ ಬಂದಿದೆ. ಇಬ್ಬರ ಪ್ರೀತಿ ಅರಳಿದ್ದು ಪ್ರೌಢವಸ್ಥೆಯಲ್ಲಿ. ಇದಾದ ನಂತರ ಅವರು ಬೇರೆ ಬೇರೆಯಾದರು. ಆದರೆ ಇಬ್ಬರು ಮತ್ತೆ ವ್ಯದ್ಯಾಪ್ಯದಲ್ಲಿ ಭೇಟಿಯಾದರು. ಈಗ ಅವರ ಪ್ರೀತಿ ಮತ್ತೆ ಚಿಗುರೊಡೆದಿದೆ.
ಹೌದು, ಪ್ರೇಮಿಗೆ 60 ವರ್ಷ ವಯಸ್ಸಾದರೆ, ಅವರ ಗೆಳತಿಗೆ 50 ವರ್ಷ ವಯಸ್ಸಾಗಿದೆ. ಆದರೇನಂತೆ...ಪರಸ್ಪರ ಇಬ್ಬರೂ ಕೈ ಬಿಡಲಿಲ್ಲ ಇಬ್ಬರೂ ತಮ್ಮ ಕುಟುಂಬದ ಬಗ್ಗೆಯಾಗಲಿ ಅಥವಾ ಸಮಾಜದ ಬಗ್ಗೆಯಾಗಲಿ ಸ್ವಲ್ಪವೂ ಯೋಚಿಸದೆ ಒಂದು ದಿನ ಓಡಿಹೋದರು. ವ್ಯದ್ಯಾಪ್ಯದಲ್ಲಿ ಓಡಿಹೋದ ಪ್ರೇಮಿಗಳನ್ನು ಹುಡುಕಲು ಇಬ್ಬರ ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಸಹರ್ಸಾ ಎಂಬ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದಾರೆ.
ಘಟನೆಯ ವಿವರ
ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣ ನಡೆದಿರುವುದು ಪೂರ್ಣಿಯಾ ಎಂಬ ಪ್ರದೇಶದಲ್ಲಿ. ಮಾಹಿತಿಯ ಪ್ರಕಾರ, ಒರ್ವ ವೈದ್ಯೆ ಮತ್ತು ವಕೀಲರ ನಡುವೆ ಬಾಲ್ಯದ ಸ್ನೇಹವಿತ್ತು. ಆ ನಂತರ ಅವರೂ ಒಬ್ಬರನ್ನೊಬ್ಬರು ಪ್ರೀತಿಸಲು ಪ್ರಾರಂಭಿಸಿದರು, ಆದರೆ ಅವರ ಕುಟುಂಬ ಸದಸ್ಯರು ವಿಧಿಸಿದ ನಿರ್ಬಂಧಗಳಿಂದಾಗಿ ಅವರು ಒಂದಾಗಲು ಸಾಧ್ಯವಾಗಲಿಲ್ಲ. ಆ ಹುಡುಗಿಯ ಮನೆಯವರು ಅವಳನ್ನು ಒಬ್ಬ ವೈದ್ಯನಿಗೆ ಕೊಟ್ಟು ಮದುವೆ ಮಾಡಿದರು. ಆದರೆ ಇಬ್ಬರೂ ಪ್ರೇಮಿಗಳು ಆಗಾಗ ಭೇಟಿಯಾಗುತ್ತಲೇ ಇದ್ದರು. ಇಬ್ಬರೂ ಫೋನ್ ಮೂಲಕವೂ ಮಾತನಾಡುತ್ತಿದ್ದರು. ಅದಾದ ನಂತರ ಇಬ್ಬರೂ ಲೈಫಲ್ಲಿ ಬ್ಯೂಸಿಯಾದರು. ಹಲವು ವರ್ಷಗಳ ನಂತರ ಇಬ್ಬರೂ ಇದ್ದಕ್ಕಿದ್ದಂತೆ ಭೇಟಿಯಾದರು. ಅವರ ಹಳೆಯ ಸ್ನೇಹ ಮತ್ತೆ ಪ್ರೀತಿಯಾಗಿ ಚಿಗುರೊಡೆಯಿತು. ಈಗ ಮಹಿಳಾ ವೈದ್ಯೆಯ ವಯಸ್ಸು 50 ಆಗಿತ್ತು ಮತ್ತು ಪ್ರೇಮಿ ವಕೀಲನ ವಯಸ್ಸು 60 ಆಗಿತ್ತು. ಇಬ್ಬರ ನಡುವೆ ಮತ್ತೆ ಪ್ರೀತಿ ಚಿಗುರಿತು. ಮತ್ತೆ ಅವರು ಓಡಿಹೋದರು. ಈ ವಿಷಯ ಇಬ್ಬರ ಕುಟುಂಬಗಳಿಗೂ ತಿಳಿದಾಗ ಅವರಿಗೆ ಸಮಾಜದಲ್ಲಿ ಮುಖ ತೋರಿಸಲೂ ಸಾಧ್ಯವಾಗಲಿಲ್ಲ.
ವಕೀಲರ ವಿರುದ್ಧ ಪ್ರಕರಣ ದಾಖಲು
ತನ್ನ ಪ್ರಿಯಕರನೊಂದಿಗೆ ಒಡಿಹೋದ ಪತ್ನಿಯ ಬಗ್ಗೆ ಪತಿ ಪೊಲೀಸ್ ಠಾಣೆಯಲ್ಲಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ವೈದ್ಯೆಯ ಪತಿ "ನನ್ನ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ನಂತರ ಸಹರ್ಸಾದ ವಕೀಲರೊಬ್ಬರು ತಮ್ಮ ಪತ್ನಿಯನ್ನು ಭೇಟಿಯಾಗಲು ಆಗಾಗ್ಗೆ ಬರುತ್ತಿದ್ದರು ಎಂದು ಹೇಳಿದ್ದಾರೆ. ಅವರಿಗೆ ಹಲವು ಬಾರಿ ವಿವರಿಸಲಾಯಿತು. ಆದರೆ ಅವರು ಕೇಳಲಿಲ್ಲ. ತನ್ನ ಹೆಂಡತಿಯೊಂದಿಗೆ ಓಡಿಹೋದರು" ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತನಗೆ ಇಬ್ಬರು ಗಂಡು ಮಕ್ಕಳು ಮತ್ತು ಒರ್ವ ಹೆಣ್ಣು ಮಗಳು ಇದ್ದಾರೆ. ಇಬ್ಬರು ಪುತ್ರರು ಎಂಬಿಬಿಎಸ್ ಓದುತ್ತಿದ್ದಾರೆ. ಮಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಳೆ. ಈ ಘಟನೆಯಿಂದ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ವೈದ್ಯರು ದೂರು ಕೊಟ್ಟ ನಂತರ, ಈ ಪ್ರಕರಣವು ಹೆಚ್ಚು ಸುದ್ದಿಯಾದ ನಂತರ ಪೊಲೀಸರು ಕ್ರಮ ಕೈಗೊಂಡರು. ಮತ್ತೊಂದೆಡೆ, ವೈದ್ಯರು ವಕೀಲರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾದ ನಂತರ ಕ್ರಮ ಕೈಗೊಳ್ಳಲಾಯಿತು. ಪ್ರಸ್ತುತ ಸಹರ್ಸಾದಿಂದ ಮೊಬೈಲ್ ಸಂಖ್ಯೆಗಳನ್ನು ಟ್ರ್ಯಾಕ್‌ಗಳನ್ನು ಮಾಡುವ ಮೂಲಕ 50 ವರ್ಷದ ಮಹಿಳಾ ವೈದ್ಯೆ ಮತ್ತು ಆಕೆಯ ಪ್ರಿಯಕರ ವಕೀಲರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರೇಮ ಕಥೆ ಪೂರ್ಣಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ.