ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ ವಿಡಿಯೋ ವೈರಲ್

Published : Nov 20, 2018, 05:17 PM ISTUpdated : Nov 20, 2018, 05:27 PM IST
ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ ವಿಡಿಯೋ ವೈರಲ್

ಸಾರಾಂಶ

ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ; ಪ್ರಚಾರದ ಭರಾಟೆ ಜೋರು; ಬಿಜೆಪಿ ಶಾಸಕ, ಅಭ್ಯರ್ಥಿಯನ್ನು ವ್ಯಕ್ತಿಯೊಬ್ಬ ‘ಸ್ವಾಗತಿಸಿದ್ದು’ ಹೀಗೆ

ಭೋಪಾಲ್: ಮಧ್ಯಪ್ರದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ.

ಜನಪ್ರತಿನಿಧಿಗಳ, ರಾಜಕಾರಣಿಗಳ ಮೇಲಿನ ತಮ್ಮ ಆಕ್ರೊಶವನ್ನು ಹೊರಗೆಡಹಲು ಮತದಾರರು ಚುನಾವಣೆ ಹಾಗೂ ಪ್ರಚಾರದ ಸಂದರ್ಭಗಳನ್ನು ಬಳಸಿಕೊಳ್ಳುವುದನ್ನು ನಾವು ನೋಡಿದ್ದೇವೆ.

ಇದೀಗ ಅಂತಹದ್ದೇ ಒಂದು ಬೆಳವಣಿಗೆಯಲ್ಲಿ  ಬಿಜೆಪಿ ಶಾಸಕ ಹಾಗೂ ನಾಗಡ ಕ್ಷೇತ್ರದ ಅಭ್ಯರ್ಥಿ ದಿಲೀಪ್ ಶೇಖಾವತ್ ಗೆ ವ್ಯಕ್ತಿಯೊಬ್ಬ ಸ್ವಾಗತಿಸಿದ ವಿಡಿಯೋ ವೈರಲ್ ಆಗಿದೆ.

ನ. 28 ರಂದು ಮಧ್ಯಪ್ರದೇಶದ ವಿಧಾನಸಭೆಯ 230 ಸೀಟುಗಳಿಗೆ ಮತದಾನ ನಡೆಯಲಿದ್ದು, ಡಿ.11 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

PREV
click me!

Recommended Stories

ಸಂತ ಕಬೀರ ನಗರದಲ್ಲಿ ಯೋಗಿ ಭರ್ಜರಿ ಘೋಷಣೆ
ಗಢ ಗಢ ನಡುಗಿದ ಅನುಭವ; ನೋಡಿದ್ರೆ ಕುಸಿದ ಬಾವಿ, ವಿಡಿಯೋ ವೈರಲ್