ಕಾರ್ಡ್ ಸ್ವೈಪ್ ಮಾಡುತ್ತಿದ್ದಂತೆಯೇ ಹೊಟ್ಟೆಯಿಂದ ಬಂತು ಹಣ!

Published : Nov 19, 2018, 11:22 AM ISTUpdated : Nov 19, 2018, 11:40 AM IST
ಕಾರ್ಡ್ ಸ್ವೈಪ್ ಮಾಡುತ್ತಿದ್ದಂತೆಯೇ ಹೊಟ್ಟೆಯಿಂದ ಬಂತು ಹಣ!

ಸಾರಾಂಶ

ಫೇಸ್ ಬುಕ್ ನಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಹುಡುಗನೊಬ್ಬ ತನ್ನ ಗೆಳೆಯನ ಹೊಟ್ಟೆಗೆ ಎಟಿಎಂ ಕಾರ್ಡ್ ಸ್ವೈಪ್ ಮಾಡಿದ್ದು, ಮರುಕ್ಷಣವೇ ಹೊಟ್ಟೆಯೊಳಗಿಂದ ಹಣ ಬರಲಾರಂಭಿಸುತ್ತದೆ. ಸದ್ಯ ಈ ವಿಡಿಯೋ ಬಹುತೇಕರ ಮನಗೆದ್ದಿದ್ದು, ವೀಕ್ಷಿಸಿದವರೆಲ್ಲಾ ನಕ್ಕು ಸುಸ್ತಾಗಿದ್ದಾರೆ.

ಎಟಿಎಂ ಮಷೀನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಕಾರ್ಡ್ ಸ್ವೈಪ್ ಮಾಡಿ, ಪಿನ್ ನಂಬರ್ ಹಾಕಿ ಎಷ್ಟು ಹಣ ಬೇಕೆಂದು ನಮೂದಿಸಿದರೆ ಹಣ ಹೊರ ಬರುತ್ತದೆ. ಆದರೀಗ ಫೇಸ್‌ಬುಕ್‌ನಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಹುಡುಗನೊಬ್ಬ ತನ್ನ ಗೆಳೆಯನ ಹೊಟ್ಟೆಗೆ ಎಟಿಎಂ ಕಾರ್ಡ್ ಸ್ವೈಪ್ ಮಾಡಿದ್ದು, ಮರುಕ್ಷಣವೇ ಹೊಟ್ಟೆಯೊಳಗಿಂದ ಹಣ ಬರಲಾರಂಭಿಸುತ್ತದೆ. ಸದ್ಯ ಈ ವಿಡಿಯೋ ಬಹುತೇಕರ ಮನಗೆದ್ದಿದ್ದು, ವೀಕ್ಷಿಸಿದವರೆಲ್ಲಾ ನಕ್ಕು ಸುಸ್ತಾಗಿದ್ದಾರೆ.

ವಿಡಿಯೋದಲ್ಲಿ ಎಲ್ಲಕ್ಕಿಂತ ಮೊದಲು ಬಾಲಕ ನೋಟುಗಳನ್ನು ಮಡಚಿ ಹೊಟ್ಟೆ ನಡುವಿನ ಭಾಗದಲ್ಲಿ ಸಿಕ್ಕಿಸಿ ಇಟ್ಟುಕೊಳ್ಳುತ್ತಾನೆ. ಇದಾದ ಬಳಿಕ ಮತ್ತೊಬ್ಬ ಬಾಲಕ ಕಾರ್ಡ್ ಸ್ವೈಪ್ ಮಾಡಿ ಪಿನ್ ನಂಬರ್ ಹಾಕುತ್ತಾನೆ. ಇದಾದ ಮರುಕ್ಷಣವೇ ಹೊಟ್ಟೆ ನಡುವೆ ಸಿಕ್ಕಿಸಿಕೊಂಡಿದ್ದ ಹಣವನ್ನು ಹೊರ ಹಾಕಲಾಗುತ್ತದೆ. ಮಕ್ಕಳ ಈ ತುಂಟತನದಿಂದ ಕೂಡಿದ ವಿಡಿಯೋ 11 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದು, 2 ಲಕ್ಷ ಮಂದಿ ಶೇರ್ ಮಾಡಿಕೊಂಡಿದ್ದಾರೆ. 

ಮಕ್ಕಳು ತುಂಟತನ ಪ್ರದರ್ಶಿಸಿದ್ದರೂ ಜನರಿಗೆ ಇದು ಇಷ್ಟವಾಗಿದೆ.

PREV
click me!

Recommended Stories

ಸಂತ ಕಬೀರ ನಗರದಲ್ಲಿ ಯೋಗಿ ಭರ್ಜರಿ ಘೋಷಣೆ
ಗಢ ಗಢ ನಡುಗಿದ ಅನುಭವ; ನೋಡಿದ್ರೆ ಕುಸಿದ ಬಾವಿ, ವಿಡಿಯೋ ವೈರಲ್