ಭಾರತೀಯರಿಗೆ ಮತ್ತೊಂದು ಲಸಿಕೆ; ತುರ್ತು ಬಳಕೆಗೆ ಅನುಮತಿ ಕೋರಲು ಸಜ್ಜಾದ ಝೈಡಸ್ ಕ್ಯಾಡಿಲಾ!

By Suvarna NewsFirst Published Jun 18, 2021, 7:10 PM IST
Highlights
  • ಭಾರತೀಯರಿಗೆ ಸಿಗಲಿದೆ ಮತ್ತೊಂದು ಕೊರೋನಾ ವೈರಸ್ ಲಸಿಕೆ
  • ತುರ್ತು ಬಳಕೆಗೆ ಅನುಮತಿ ಕೋರಲು ಸಜ್ಜಾದ ಕ್ಯಾಡಿಲಾ
  • ಒಂದು ವಾರದಲ್ಲಿ ಕೇಂದ್ರಕ್ಕೆ ಅನುಮತಿ ಕೋರಿ ಪತ್ರ

ನವದೆಹಲಿ(ಜೂ.18): ಕೊರೋನಾ ವೈರಸ್ ವಿರುದ್ಧದ ಭಾರತ ಹೋರಾಟ ಚುರುಕುಗೊಳಿಸಿದೆ. ಇದಕ್ಕೆ ತಕ್ಕಂತೆ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೀಗ ಕೋವಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಪುಟ್ನಿಕ್ ಲಸಿಕೆ ಜೊತೆಗೆ ಮತ್ತೊಂದು ಲಸಿಕೆ ತುರ್ತು ಬಳಕೆಗೆ ಲಭ್ಯವಾಗಲಿದೆ.

ಕೋವಿಡ್ ವಿರುದ್ಧ ಭಾರತದ ಬಯೋಲಾಜಿಕಲ್ E ಲಸಿಕೆ ಶೇ.90 ರಷ್ಟು ಪರಿಣಾಮಕಾರಿ!

ಅಹಮ್ಮದಾಬಾದ್‌ನಲ್ಲಿರುವ ಝೈಡಸ್ ಕ್ಯಾಡಿಲಾ ಲಸಿಕೆ 3ನೇ ಹಂತದ ಪ್ರಯೋಗ ಮುಗಿಸಿದೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಝೈಡಸ್ ಕ್ಯಾಡಿಲಾ ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ)ಗೆ ತುರ್ತು ಬಳಕೆಗೆ ಅನುಮತಿ ಕೋರಿ ಪತ್ರ ಬರೆಯಲು ಸಜ್ಜಾಗಿದೆ.

3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗಾಗಿ 28,000 ಸ್ವಯಂ ಸೇವಕರ ನೇಮಕ ಮಾಡಿ ಪ್ರಯೋಗ ಮಾಡಲಾಗಿದೆ. ಕೋವಿಡ್ ವಿರುದ್ಧ ಝೈಡಸ್ ಕ್ಯಾಡಿಲಾ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ ಅನ್ನೋದು ದೃಢಪಟ್ಟಿದೆ ಎಂದು ಕ್ಯಾಡಿಲಾ ಸಂಸ್ಥೆ ಹೇಳಿದೆ. 

ಕ್ಯಾಡಿಲಾ ಲಸಿಕೆ ಅಭಿವೃದ್ಧಿ ಕುರಿತು ಮಹತ್ವ ಮಾಹಿತಿ ಬಹಿರಂಗ ಪಡಿಸಿರುವ ನೀತಿ ಆಯೋಗ ಸದಸ್ಯ ವಿಕೆ ಪೌಲ್, ಶೀಘ್ರದಲ್ಲೇ ಝೈಡಸ್ ಕ್ಯಾಡಿಲಾ ಲಸಿಕೆ ಬಳಕೆಗೆ ಲಭ್ಯವಾಗಲಿದೆ ಎಂದಿದ್ದಾರೆ. ಇದು ವಿಶೇಷ ಲಸಿಕೆಯಾಗಿದ್ದು, ವಿಶ್ವದ ಮೊದಲ DNA ಲಸಿಕೆಯಾಗಿದೆ ಎಂದು ಪೌಲ್ ಹೇಳಿದ್ದಾರೆ. 

click me!