ಝೋಮ್ಯಾಟೋ ಡೆಲಿವರಿ ಬಾಯ್‌ಗೆ ಥಳಿಸಿದ ಮಹಿಳೆ: ವಿಡಿಯೋ ವೈರಲ್

By Anusha Kb  |  First Published Aug 24, 2022, 3:34 PM IST

ಯುವತಿಯೊಬ್ಬಳು ನಡುರಸ್ತೆಯಲ್ಲಿ ಝೋಮ್ಯಾಟೋ ಡೆಲಿವರಿ ಬಾಯ್‌ಗೆ ಥಳಿಸಿದ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ಯುವತಿಯೊಬ್ಬಳು ನಡುರಸ್ತೆಯಲ್ಲಿ ಝೋಮ್ಯಾಟೋ ಡೆಲಿವರಿ ಬಾಯ್‌ಗೆ ಥಳಿಸಿದ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಯುವತಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.  @bogas04 ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ. ಟ್ವಿಟ್‌ನಲ್ಲಿರುವ ಮಾಹಿತಿಯಂತೆ ಯುವತಿ ಟಡೆಲಿವರಿ ಬಾಯ್ ಕೈಯಲ್ಲಿದ್ದ ಆಹಾರ ಪೊಟ್ಟಣವನ್ನು ಕಿತ್ತುಕೊಂಡು ಬಳಿಕ ಕಾಲಿನಲ್ಲಿದ್ದ ಶೂ ತೆಗೆದು ಶೂನಿಂದ ಆತನ ಮೇಲೆ ಥಳಿಸಿದ್ದಾಳೆ. ಘಟನೆಯನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 

ಈ ವಿಚಾರದ ಬಗ್ಗೆ  @bogas04 ಅವರು ಝೋಮ್ಯಾಟೋ ಡೆಲಿವರಿ ಗ್ರಾಹಕರ ಸಹಾಯವಾಣಿಗೂ ದೂರು ನೀಡಿದ್ದಾರೆ. ನನ್ನ ಆರ್ಡರ್ (#4267443050) ಅನ್ನು ಪೂರೈಸುವ ವೇಳೆ ಡೆಲಿವರಿ ಏಜೆಂಟ್ ಕೈಯಿಂದ ಆರ್ಡರ್‌ನ್ನು ಕಿತ್ತುಕೊಂಡ ಮಹಿಳೆಯೊಬ್ಬರು ಬಳಿಕ ಆತನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಈ ವೇಳೆ ಅಳುತ್ತಾ ಡೆಲಿವರಿ ಬಾಯ್ ನನ್ನ ಬಳಿ ಬಂದಿದ್ದು, ಆತನ ಕೆಲಸ ಹೋಗುವ ಭಯವನ್ನು ವ್ಯಕ್ತಪಡಿಸಿದ ಎಂದು ಅವರು ಬರೆದುಕೊಂಡಿದ್ದಾರೆ.  ಅಲ್ಲದೇ ಅವರು ಝೋಮ್ಯಾಟೋ ಗ್ರಾಹಕರ ಸಹಾಯವಾಣಿಗೂ ಕರೆ ಮಾಡಿದ್ದಾಗಿ ತಿಳಿಸಿದ್ದಾರೆ. ಆಗಸ್ಟ್ 16 ರಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. 

Luckily bystanders recorded the incident on video, though at the moment he hasn't received one with audio. Should probably get it by tomorrow.

I tried calling customer care but they weren't able to understand and weren't helpful.

— dj (@bogas04)

Tap to resize

Latest Videos

ಈ ಬಗ್ಗೆ ಹಲವು ಟ್ವಿಟ್‌ಗಳ ಮೂಲಕ ವಿಚಾರ ಹಂಚಿಕೊಂಡಿರುವ @bogas04 ಅವರು, ನಾನು ಝೋಮ್ಯಾಟೋ ಗ್ರಾಹಕರ ಸಹಾಯವಾಣಿಗೆ ಕರೆ ಮಾಡಿ, ನನ್ನ ಆರ್ಡರ್‌ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ನಿಮ್ಮ ಪಾಲುದಾರ ಹಲ್ಲೆಗೊಳಗಾಗಿದ್ದಾರೆ. ದಯವಿಟ್ಟು ಆತನಿಗೆ ಸಹಾಯ ಮಾಡಿ ಎಂದು ಕೇಳಿದೆ. ಅದಕ್ಕೆ ಅವರು ಡೆಲಿವರಿ ಬಾಯ್‌ಗೆ ರೈಡರ್‌ ಸಪೋರ್ಟ್ ಟೀಮ್‌ನ್ನು ಸಂಪರ್ಕಿಸುವಂತೆ ಹೇಳಿ ಎಂದು ಹೇಳಿದರು. ಬಳಿಕ ಡೆಲಿವರಿ ಬಾಯ್ ರೈಡರ್‌ ಸಪೋರ್ಟ್ ಟೀಮ್‌ಗೆ ಕರೆ ಮಾಡಿದರು. ಆದರೆ ಅವರಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ. ಅವರು ಈಗ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ ಎಂದು @bogas04 ಬರೆದುಕೊಂಡಿದ್ದಾರೆ.

ಮಗುವನ್ನೆತ್ತಿಕೊಂಡು ಫುಡ್ ಡೆಲಿವರಿ: ಜೊಮ್ಯಾಟೋ ಬಾಯ್ ವಿಡಿಯೋ ವೈರಲ್

ಡೆಲಿವರಿ ಏಜೆಂಟ್‌ಗೆ ನ್ಯಾಯ ಸಿಗಬೇಕು. ಉದ್ಯೋಗ ಭದ್ರತೆ ಇರಬೇಕು. ನಾನು ಗ್ರಾಹಕ ಪ್ರತಿನಿಧಿಗೆ ಕರೆ ಮಾಡಿ ಅವರ ಮೇಲಾಧಿಕಾರಿಗೆ ಕನೆಕ್ಟ್ ಮಾಡುವಂತೆ (ಘಟನೆಯ ಬಗ್ಗೆ ಸವಿಸ್ತಾರವಾಗಿ ವಿವರಿಸುವ ಸಲುವಾಗಿ) ಮಾಡುವಂತೆ ಹೇಳಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇವರ ಈ ಟ್ವಿಟ್‌ಗಳಿಗೆ ಝೋಮ್ಯಾಟೋ ಪ್ರತಿಕ್ರಿಯಿಸಿದ್ದು, ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.

ಈ ವಿಡಿಯೋವನ್ನು 16 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವವರು ಮಳೆ ಬಿಸಿಲು ಎಂಬುದನ್ನು ನೋಡದೇ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಈ ರೀತಿಯ ವರ್ತನೆ ಸಹಿಸುವಂತದಲ್ಲ. ಹೀಗೆ ವರ್ತಿಸುವವರನ್ನು ಆಪ್‌ಗಳು ಬ್ಲಾಕ್‌ ಲಿಸ್ಟ್‌ನಲ್ಲಿಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಎಂತಹ ನಾಚಿಕೆ ಇಲ್ಲದ ಮಹಿಳೆ ಈಕೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಡೆಲಿವರಿ ಆಯ್ಕೆ ಮಾಡುವ ಮುನ್ನ ಜಾಗರೂಕರಾಗಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮಹಾಕಾಲ ಪ್ರಸಾದಕ್ಕೆ ಅವಮಾನ..! ಹೃತಿಕ್ ರೋಷನ್ Zomato ಜಾಹೀರಾತು ಹಿಂಪಡೆಯಲು ಆಗ್ರಹ

click me!