'ಉತ್ತಮ ಜೀವನಕ್ಕೆ ಶ್ರೇಷ್ಠ ಉದಾಹರಣೆ...' ದಿನಸಿ ಅಂಗಡಿ ಇಟ್ಟುಕೊಂಡ ಮಾವನ ಬಗ್ಗೆ ಕೋಟ್ಯಧೀಶ ಅಳಿಯನ ಮಾತು!

Published : May 11, 2023, 08:15 PM IST
'ಉತ್ತಮ ಜೀವನಕ್ಕೆ ಶ್ರೇಷ್ಠ ಉದಾಹರಣೆ...' ದಿನಸಿ ಅಂಗಡಿ ಇಟ್ಟುಕೊಂಡ ಮಾವನ ಬಗ್ಗೆ ಕೋಟ್ಯಧೀಶ ಅಳಿಯನ ಮಾತು!

ಸಾರಾಂಶ

ಹಳ್ಳಿಯಲ್ಲಿ ಕುಳಿತ ವ್ಯಕ್ತಿಗೂ ಸ್ಟಾಕ್‌ ಮಾರ್ಕೆಟ್‌ ವ್ಯವಹಾರ ತಲುಪುವಂತೆ ಮಾಡಿದ ಜೀರೋದಾದ ಸಂಸ್ಥಾಪಕ ನಿತಿನ್‌ ಕಾಮತ್‌ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗೆ ಅವರು ತಮ್ಮ ಮಾವನ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅವರಿಂದ ಕಲಿತ ಜೀವನಪಾಠಗಳ ಬಗ್ಗೆ ಬರೆದುಕೊಂಡಿದ್ದಾರೆ. ನಿಮಗೆ ನೆನಪಿರಲಿ, ನಿತಿನ್‌ ಕಾಮತ್‌ ಇಂದು ಕೋಟ್ಯಧೀಶ ಹಾಗಿದ್ದರೂ ಅವರ ಮಾವ ಪುಟ್ಟ ದಿನಸಿ ಅಂಗಡಿ ಇಟ್ಟುಕೊಂಡು ದಿನ ಕಳೆಯುತ್ತಿದ್ದಾರೆ.

ಬೆಂಗಳೂರು (ಮೇ.11): ಜೀರೋಧಾ ಸಹ ಸಂಸ್ಥಾಪಕ ಹಾಗೂ ಸಿಇಒ ನಿತಿನ್‌ ಕಾಮತ್‌ ಇತ್ತೀಚೆಗೆ ತಮ್ಮ ಲಿಂಕ್ಡಿನ್‌ ಪುಟದಲ್ಲಿ ಒಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮ್ಮ ಮಾವನ ಬಗ್ಗೆ ಬರೆದುಕೊಂಡಿದ್ದಾರೆ.  ಊರಿನಲ್ಲಿ ಪುಟ್ಟ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ಮಾವ ಶಿವಾಜಿ ಪಾಟೀಲ್‌ ಅವರಿಂದ ಕಲಿತ ಜೀವನ ಪಾಠದ ಬಗ್ಗೆ ಅವರು ಬರೆದುಕೊಂಡಿದ್ದಾರೆ. 70 ವರ್ಷದ ಮಾವನ ಜೊತೆಗೆ ಅವರ ಕಿರಾಣಿ ಅಂಗಡಿಯಲ್ಲಿರುವ ಚಿತ್ರಗಳನ್ನು ಹಂಚಿಕೊಂಡಿರುವ ಕೋಟ್ಯಧೀಶ ಸಿಇಒ ನಿತಿನ್‌ ಕಾಮತ್‌, ಶಿವಾಜಿ ಪಾಟೀಲ್‌ ಅವರು ಕಾರ್ಗಿಲ್‌ ಯುದ್ಧದ ಸಮಯದಲ್ಲಿ ತಮ್ಮ ಬೆರಳುಗಳನ್ನು ಕಳೆದುಕೊಂಡ ಬಳಿಕ ಸೇನೆಯಿಂದ ನಿವೃತ್ತಿರಾಗಿದ್ದರು. ಆ ನಂತರ ತಮ್ಮೂರಾದ ಬೆಳಗಾವಿಯಲ್ಲಿ ಪುಟ್ಟ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸಿದ್ದಾರೆ. ನಿಜವಾದ ಸ್ವಾತಂತ್ರ್ಯವನ್ನು ಸಾಧಿಸುವ ಕೀಲಿಯು ತೃಪ್ತಿಯಿಂದ ಇರುವುದೇ ಅಗಿದೆ ಮತ್ತು ಪಾಟೀಲ್ ಆ ಗುಣದ ಸಾಕಾರವಾಗಿದ್ದಾರೆ ಎಂದು ಕಾಮತ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಪಾಟೀಲ್ ಅವರ ದಿನಚರಿಯನ್ನು ಬರೆದುಕೊಂಡಿರುವ ಕಾಮತ್, 'ಅವರಿಗೆ 70 ವರ್ಷ ವಯಸ್ಸಾಗಿದೆ ಆದರೆ ವಿಶೇಷ ಸಾಮರ್ಥ್ಯವುಳ್ಳವರು ಅಂಗಡಿಗೆ ದಿನಸಿ ಖರೀದಿಸಲು ತಮ್ಮ ದಶಕಗಳ ಹಳೆಯ ಸ್ಕೂಟರ್‌ನಲ್ಲಿ ನಿರಂತರವಾಗಿ ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಾರೆ. ಅವರ ಏಕೈಕ ಸಹಾಯ ನನ್ನ ಅತ್ತೆ, ಅವರು ಅಂಗಡಿಯನ್ನು ನಡೆಸಲು ಮತ್ತು ಮನೆಯನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ' ಎಂದಿದ್ದಾರೆ.

ಕಾಮತ್ ಅವರ ಆನ್‌ಲೈನ್ ಬ್ರೋಕರೇಜ್ ಸಂಸ್ಥೆಯಾಗಿರುವ ಜೀರೋಧಾ,  ಅಪಾರ ಯಶಸ್ಸನ್ನು ಅನುಭವಿಸಿದರೂ, ಮಾವ ಶಿವಾಜಿ ಪಾಟೀಲ್‌ ನಿಯಮಿತವಾಗಿ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 'ನಿಮ್ಮ ಅಂಗಡಿಯಲ್ಲಿರುವ 'ಲಾಭದ ಮಾರ್ಜಿನ್‌' ಎಷ್ಟು ಎಂದು ಕೇಳಿದಾಗ, ಶಿವಾಜಿ ಪಾಟೀಲ್‌, 'ಚಿಕ್ಕಿಗೆ ₹200 ಬೆಲೆ ಇದ್ದು, ₹250ಕ್ಕೆ ಮಾರಾಟವಾಗುವ ಚಿಕ್ಕಿಗಳಿಗೆ ಶೇ.25 ಮಾರ್ಜಿನ್ ಸಿಕ್ಕಿದೆ’ ಎಂದು ತಮಾಷೆಯಯಾಗಿಯೇ ಹೇಳುತ್ತಾರೆ. ಅದಲ್ಲದೆ, ಯುದ್ಧದಲ್ಲಿ ತಮ್ಮ ಕೈಬೆರಳುಗಳನ್ನು ಕಳೆದುಕೊಂಡರೂ, ಯಾವುದರ ಬಗ್ಗೆಯೂ ದೂರು ಹೇಳದ ಶಿವಾಜಿ ಪಾಟೀಲ್‌ ಅವರನ್ನು ಶ್ಲಾಘಿಸಿದ ಅವರು, ಎಲ್ಲ ರೀತಿಯಲ್ಲೂ ಕ್ರಿಯಾಶೀಲರಾಗಿ ಉತ್ತಮ ಜೀವನ ನಡೆಸಬಹುದು ಎಂದು ತಮ್ಮ ಪೋಸ್ಟ್ ಅನ್ನು ಮುಕ್ತಾಯ ಮಾಡಿದ್ದಾರೆ.

"ಇಷ್ಟೆಲ್ಲಾ ಇದ್ದರೂ, ನಾನಿನ್ನೂ ಜೀರೋದಾದಲ್ಲಿ  ಕಷ್ಟಪಡುತ್ತಿದ್ದಾಗ, 2007 ರಲ್ಲಿ ಅವರ ಮಗಳನ್ನು ಮದುವೆಯಾಗಲು ನಾನು ಅನುಮತಿ ಕೇಳಿದಾಗ ಅವರು ನನಗೆ ಸರ್ಕಾರಿ ಕೆಲಸವನ್ನು ಪಡೆಯಲು ಮನವೊಲಿಸಲು ಪ್ರಯತ್ನಿಸಿದರು," ಅವರು ಬರೆದುಕೊಂಡಿದ್ದಾರೆ. ಜೀವನದಲ್ಲಿ ಫಿಟ್ ಆಗಿರುವುದರ ಬಗ್ಗೆ ದನಿಯೆತ್ತಿರುವ ಕಾಮತ್ ಅವರ ಪ್ರಕಾರ, ಹಣವು ಜೀವನದಲ್ಲಿ ತೃಪ್ತಿಯನ್ನು ಖರೀದಿಸಲು ಸಾಧ್ಯವಿಲ್ಲ ಮತ್ತು ನನ್ನ ಮಾವನೇ ಅದಕ್ಕೆ ಆದರ್ಶ ಉದಾಹರಣೆಯಾಗಿದೆ.

ಬೆಂಗಳೂರು ನನಗಿಷ್ಟ,ಇನ್ನೊಬ್ಬರನ್ನು ತುಳಿದು ಬೆಳೆಯುವ ಮನಸ್ಥಿತಿ ಇಲ್ಲಿಲ್ಲ: ನಿಖಿಲ್ ಕಾಮತ್

"ನಾನು ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳುವ ಬಗ್ಗೆ ಅಥವಾ ಕೊನೆಯವರೆಗೂ ಉತ್ತಮ ಜೀವನವನ್ನು ಹೇಗೆ ನಡೆಸುವುದು ಎಂಬುದರ ಕುರಿತು ಯೋಚನೆ ಮಾಡುತ್ತಿದ್ದೇನೆ. ಉತ್ತರವು ಸಂತೃಪ್ತಿ ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಕ್ರಿಯವಾಗಿರುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಹಣದಿಂದ ಇದನ್ನು ಖರೀದಿಸಲು ಸಾಧ್ಯವಿಲ್ಲ, ಮತ್ತು ನನ್ನ ಮಾವ  ಅತ್ಯುತ್ತಮ ಉದಾಹರಣೆಯಾಗಿದ್ದಾರೆ, ”ಎಂದು ಅವರು ಹೇಳಿದರು.

ಝೆರೋಧಾ ಮುಖ್ಯಸ್ಥನ ಜೊತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್; ಫೋಟೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯ್ಯಪ್ಪನ ಚಿನ್ನ ಎಗರಿಸಿದ ಕೇಸಲ್ಲಿ ಬಳ್ಳಾರಿ ವ್ಯಕ್ತಿ ಸೆರೆ
ಸಂಸತ್‌ ಅಧಿವೇಶನ ಅಂತ್ಯ : ಶೇ.100ಕ್ಕೂ ಹೆಚ್ಚು ಉತ್ಪಾದಕತೆ