ಪ್ರಧಾನಿ ಮೋದಿಯಿಂದ ಪಿಎಂ ಅವಾಸ್ ಯೋಜನೆಯಡಿ ನಿರ್ಮಿಸಿದ 19,000 ಮನೆ ಗೃಹಪ್ರವೇಶ!

Published : May 11, 2023, 07:10 PM IST
ಪ್ರಧಾನಿ ಮೋದಿಯಿಂದ ಪಿಎಂ ಅವಾಸ್ ಯೋಜನೆಯಡಿ ನಿರ್ಮಿಸಿದ 19,000 ಮನೆ ಗೃಹಪ್ರವೇಶ!

ಸಾರಾಂಶ

ಬಿಜೆಪಿ ಪ್ರಮುಖ ಹಾಗೂ ಮಹತ್ವಾಂಕ್ಷೆ ಯೋಜೆಗಳಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆ ಕೂಡ ಒಂದು. ಈಗಾಗಲೇ ಈ ಯೋಜನೆಯಡಿ 3 ಕೋಟಿ ಮನೆ ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ. ನಾಳೆ ಪ್ರಧಾನಿ ಮೋದಿ, 19,000 ಮನೆಗಳ ಗೃಹ ಪ್ರವೇಶ ಮಾಡಲಿದ್ದಾರೆ.

ಅಹಮ್ಮದಾಬಾದ್(ಮೇ.11): ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ನಿರ್ಮಾಣಗೊಂಡಿರುವ 19,000 ಮನೆಗಳನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಗೃಹಪ್ರವೇಶ ಮಾಡಲಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಗುಜರಾತ್ ಪ್ರವಾಸ ಮಾಡಲಿರುವ ಮೋದಿ, ಇದೇ ವೇಳೆ 19,000 ಪಿಎಂ ಆವಾಸ್ ಯೋಜನೆ ಮನೆಗಳ ಗೃಹ ಪ್ರವೇಶ ಮಾಡಲಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಮನೆ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಲಾಗಿದೆ. ಗೃಹ ಪ್ರವೇಶ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಅರ್ಹ ಫಲಾನುಭವಿಗಳಿಗೆ ಮನೆ ಕೀ ವಿತರಿಸಲಿದ್ದಾರೆ. 

ಎಪ್ರಿಲ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಯತ್ ರಾಜ್ ದಿನ ರೇವಾಗೆ ಭೇಟಿ ನೀಡಿದ್ದರು. ಈ ವೇಳೆ ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ 4 ಲಕ್ಷ ಮನೆಗಳ ಗೃಹ ಪ್ರವೇಶ ನೆರವೇರಿಸಿ ಫಲಾನುಭವಿಗಳಿಗೆ ಕೀ ವಿತರಿಸಿದ್ದರು. 2022ರ ಡಿಸೆಂಬರ್ ತಿಂಗಳಲ್ಲಿ ತ್ರಿಪುರಾಗೆ ತೆರಳಿದ ಮೋದಿ, ಗ್ರಾಮೀಣ ಭಾಗದಲ್ಲಿ ನಿರ್ಮಿಸಲಾದ 2 ಲಕ್ಷ ಮನೆಗಳ ಗೃಹ ಪ್ರವೇಶ ನೆರೇವರಿಸಿದ್ದರು.

 

ಪಿಎಂ ಆವಾಸ್‌ ಯೋಜನೆಯಿಂದ ವಸತಿ ರಹಿತರಿಗೆ ಅನುಕೂಲ

2022ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರದೇಶ ಸಾತ್ನಾದಲ್ಲಿ ನಿರ್ಮಿಸಲಾದ 4.51 ಲಕ್ಷ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದ್ದರು. 2022ರ ನವೆಂಬರ್ ತಿಂಗಳಲ್ಲಿ ದೆಹಲಿ ಸ್ಲಂ ನಿವಾಸಿಗಳಿಗೆ ನಿರ್ಮಿಸಲಾದ 3024 ಫ್ಲ್ಯಾಟ್‌ಗಳನ್ನು ವಿತರಿಸಿದ್ದರು.  2022ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ಮೋದಿ ಗುಜರಾತ್ ಪ್ರವಾಸದಲ್ಲಿ 45,000 ಮನೆಗಳ ನಿರ್ಮಾಣಕ್ಕೆ ಶಿಲನ್ಯಾಸ ಮಾಡಿದ್ದರು.

2022ರ ಮಾರ್ಚ್ ತಿಂಗಳಲ್ಲಿ ಮಧ್ಯ ಪ್ರದೇಶದಲ್ಲಿ ನಿರ್ಮಿಸಲಾದ 5 ಲಕ್ಷ ಆವಾಸ್ ಮನೆಗಳ ಗೃಹ ಪ್ರವೇಶ ನೇರವೇರಿಸಿ ಅರ್ಹರಿಗೆ ಕೀ ವಿತರಿಸಿದ್ದರು. 2021ರ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪಿಎಂ ಅವಾಸ್ ಯೋಜನೆಯಡಿ ನಿರ್ಮಿಸಲಾದ 75,000 ಮನೆಗಳ ಗೃಹ ಪ್ರವೇಶ ನೆರವೇರಿಸಿ, ಫಲಾನುವಿಗಳಿಗೆ ಮನೆ ವಿತರಿಸಿದ್ದರು.  2020ರ ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದ 1.75 ಲಕ್ಷ ಕುಟುಂಬಗಳಿಗೆ ಪಿಎಂ ಆವಾಸ್ ಯೋಜನೆ ಮನೆಗಳನ್ನು ವಿತರಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!