ಲೋಕಸಭಾ ಚುನಾವಣೆ 2024: ನಾಗಾಲ್ಯಾಂಡ್‌ನ 730 ಮತಗಟ್ಟೆಗಳಲ್ಲಿ ಶೂನ್ಯ ಮತದಾನ

By Kannadaprabha NewsFirst Published Apr 20, 2024, 8:30 AM IST
Highlights

ನಾಗಾಲ್ಯಾಂಡ್‌ನ ಪೂರ್ವ ಭಾಗದ ಆರು ಜಿಲ್ಲೆಗಳಿಗೆ ರಾಜ್ಯ ಸರ್ಕಾರವು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮಗೆ ಫ್ರಾಂಟಿಯರ್‌ ನಾಗಾಲ್ಯಾಂಡ್‌ ಟೆರಿಟರಿ (ಎಫ್‌ಎನ್‌ಟಿ) ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತ ಬಹಿಷ್ಕಾರ ಮಾಡಿದ್ದಾರೆ. 

ಕೊಹಿಮಾ(ಏ.20):  ಪೂರ್ವ ನಾಗಾಲ್ಯಾಂಡ್‌ ಪ್ರದೇಶದಲ್ಲಿ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುತ್ತಿರುವ ರಾಜ್ಯದ ಆರು ಜಿಲ್ಲೆಗಳ ಸುಮಾರು 4 ಲಕ್ಷ ಮತದಾರರು ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ್ದಾರೆ.

ಈ ಕುರಿತು ಪೂರ್ವ ನಾಗಾಲ್ಯಾಂಡ್‌ ಪೀಪಲ್‌ ಆರ್ಗನೈಜೇಷನ್‌ (ಇಎನ್‌ಪಿಒ) ಸಂಘಟನೆಯು ಸಂಬಂಧಿತ ಪ್ರದೇಶಗಳಲ್ಲಿ ಬಂದ್‌ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ಸೇವೆಗಳು ಬಂದ್‌ ಆಗಿದ್ದವು. ಈ ಪ್ರದೇಶದ ಜನಪ್ರತಿನಿಧಿಗಳೂ ಕೂಡ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸದೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯದ 20 ವಿಧಾನಸಭಾ ಕ್ಷೇತ್ರಗಳ ಎಲ್ಲ 738 ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ.

ಮೊದಲ ಹಂತದ ಲೋಕಸಭಾ ಚುನಾವಣೆ ಸಂಪನ್ನ: ಶೇ.62 ಮತದಾನ

ಏಕೆ ಬಹಿಷ್ಕಾರ?

ನಾಗಾಲ್ಯಾಂಡ್‌ನ ಪೂರ್ವ ಭಾಗದ ಆರು ಜಿಲ್ಲೆಗಳಿಗೆ ರಾಜ್ಯ ಸರ್ಕಾರವು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮಗೆ ಫ್ರಾಂಟಿಯರ್‌ ನಾಗಾಲ್ಯಾಂಡ್‌ ಟೆರಿಟರಿ (ಎಫ್‌ಎನ್‌ಟಿ) ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತ ಬಹಿಷ್ಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳ 20 ವಿಧಾನಸಭಾ ಕ್ಷೇತ್ರಗಳ ಎಲ್ಲ 738 ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದ್ದು, ಬರೋಬ್ಬರಿ 4,00,032 ಮತದಾರರು ಮತ ಬಹಿಷ್ಕರಿಸಿದ್ದಾರೆ.

click me!