ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಮ್ಯೂಸಿಯಂ ನಿರ್ಮಾಣ; 'ಯುಗ್ ಯುಗೀನ್ ಭಾರತ್' ಯೋಜನೆಗೆ ₹3,230 ಕೋಟಿ ಒಪ್ಪಿಗೆ!

Published : Nov 11, 2026, 09:03 PM IST
yuge yugeen bharat museum delhi ashwini vaishnaw

ಸಾರಾಂಶ

ಭಾರತೀಯ ನಾಗರಿಕತೆಯ ಶ್ರೀಮಂತ ಪರಂಪರೆ ಬಿಂಬಿಸಲು ನವದೆಹಲಿಯಲ್ಲಿ 'ಯುಗ್ ಯುಗೀನ್ ಭಾರತ್' ಹೆಸರಿನ ವಿಶ್ವದ ಅತಿದೊಡ್ಡ ಮ್ಯೂಸಿಯಂ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ₹3,230 ಕೋಟಿ ವೆಚ್ಚದಲ್ಲಿ 1 ಲಕ್ಷ ಚದರ ಮೀಟರ್‌ಗೂ ಹೆಚ್ಚು ವಿಸ್ತೀರ್ಣದಲ್ಲಿ ಇದು ನಿರ್ಮಾಣವಾಗಲಿದೆ.

ನವದೆಹಲಿ (ನ.11): ಭಾರತೀಯ ನಾಗರಿಕತೆಯ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಅನಾವರಣಗೊಳಿಸಲು ಕೇಂದ್ರ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. ರಾಜಧಾನಿ ನವದೆಹಲಿಯ ಐತಿಹಾಸಿಕ ನಾರ್ತ್ ಮತ್ತು ಸೌತ್ ಬ್ಲಾಕ್‌ಗಳ ಸಂಕೀರ್ಣದಲ್ಲಿ ‘ಯುಗ್ ಯುಗೀನ್ ಭಾರತ್’ (Yuge Yugeen Bharat) ಹೆಸರಿನ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಮ್ಯೂಸಿಯಂ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅಧಿಕೃತ ಅನುಮೋದನೆ ನೀಡಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ₹3,230 ಕೋಟಿ ಅನುದಾನವನ್ನು ಮೀಸಲಿಟ್ಟಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಲೌವ್ರೆ ಹಾಗೂ ಬ್ರಿಟಿಷ್ ಮ್ಯೂಸಿಯಂ ನಿರ್ಮಾಣಕ್ಕಿಂತ ಬೃಹತ್!

ಪ್ರಸ್ತುತ ವಿಶ್ವದ ಅತಿದೊಡ್ಡ ಮ್ಯೂಸಿಯಂ ಎಂಬ ಖ್ಯಾತಿ ಹೊಂದಿರುವ ಪ್ಯಾರಿಸ್‌ನ 'ಲೌವ್ರೆ ಮ್ಯೂಸಿಯಂ' 73,000 ಚದರ ಮೀಟರ್ ಹಾಗೂ ಲಂಡನ್‌ನ 'ಬ್ರಿಟಿಷ್ ಮ್ಯೂಸಿಯಂ' 70,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿವೆ. ಆದರೆ, ದೆಹಲಿಯಲ್ಲಿ ನಿರ್ಮಾಣವಾಗಲಿರುವ 'ಯುಗ್ ಯುಗೀನ್ ಭಾರತ್' ಮ್ಯೂಸಿಯಂ 1 ಲಕ್ಷ ಚದರ ಮೀಟರ್‌ಗೂ ಹೆಚ್ಚು ಪ್ರದರ್ಶನ ವಿಸ್ತೀರ್ಣ (ಒಟ್ಟು 1.78 ಲಕ್ಷಕ್ಕೂ ಹೆಚ್ಚು ಚದರ ಮೀಟರ್ ಕಟ್ಟಡ ವಿಸ್ತೀರ್ಣ) ಹೊಂದಲಿದ್ದು, ವಿಶ್ವದಲ್ಲೇ ಅತಿದೊಡ್ಡ ವಸ್ತುಸಂಗ್ರಹಾಲಯವಾಗಿ ಹೊರಹೊಮ್ಮಲಿದೆ.

'ಯುಗ್ ಯುಗೀನ್ ಭಾರತ್' ಮ್ಯೂಸಿಯಂನ ಮುಖ್ಯಾಂಶಗಳು:

- ವಾರ್ಷಿಕ 1 ಕೋಟಿ ಪ್ರವಾಸಿಗರು: ಈ ವಸ್ತುಸಂಗ್ರಹಾಲಯದಲ್ಲಿ ದಿನಕ್ಕೆ 30,000ಕ್ಕೂ ಹೆಚ್ಚು ಹಾಗೂ ವರ್ಷಕ್ಕೆ ಸುಮಾರು 1 ಕೋಟಿ ಭೇಟಿದಾರರಿಗೆ ಯಾವುದೇ ಕಿರಿಕಿರಿಯಿಲ್ಲದೆ ವೀಕ್ಷಿಸಲು ಅಗತ್ಯವಿರುವ ಜಾಗತಿಕ ಮಟ್ಟದ ಸುಸಜ್ಜಿತ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

- ಸೇವಾ ತೀರ್ಥಕ್ಕೆ ಕಚೇರಿಗಳ ಸ್ಥಳಾಂತರ: ನಾರ್ತ್ ಮತ್ತು ಸೌತ್ ಬ್ಲಾಕ್‌ಗಳಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಈಗಾಗಲೇ ಹೊಸದಾಗಿ ನಿರ್ಮಿಸಲಾಗಿರುವ 'ಸೇವಾ ತೀರ್ಥ' ಸಂಕೀರ್ಣಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಈ ಐತಿಹಾಸಿಕ ಕಟ್ಟಡಗಳನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

- ಭಾರತದ ಪೂರ್ಣ ಇತಿಹಾಸದ ಪ್ರದರ್ಶನ: ಪ್ರಾಚೀನ ಯುಗದಿಂದ ಹಿಡಿದು ಆಧುನಿಕ ಭಾರತದವರೆಗಿನ ಸಾವಿರಾರು ವರ್ಷಗಳ ಜ್ಞಾನ ಪರಂಪರೆ, ಕಲೆ, ವಿಜ್ಞಾನ, ಖಗೋಳಶಾಸ್ತ್ರ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ಪ್ರದರ್ಶಿಸಲಾಗುತ್ತದೆ.

ಮೊದಲ ಹಂತದ ಗ್ಯಾಲರಿ ಶೀಘ್ರವೇ ಸಾರ್ವಜನಿಕರಿಗೆ ಮುಕ್ತ!

ಹಂತ ಹಂತವಾಗಿ ಕಾರ್ಯಗತಗೊಳ್ಳಲಿರುವ ಈ ಬೃಹತ್ ಯೋಜನೆಯ ಪ್ರಥಮ ಪ್ರದರ್ಶನ ಗ್ಯಾಲರಿಯು (ಅಲಂಕಾರ ಮತ್ತು ಸಾಂಸ್ಕೃತಿಕ ಸಾಂಪ್ರದಾಯಿಕ ವಸ್ತುಗಳ ಥೀಮ್) ಶೀಘ್ರದಲ್ಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಜಾಗತಿಕ ಪ್ರವಾಸೋದ್ಯಮದಲ್ಲಿ ಭಾರತದ ಸಾಫ್ಟ್ ಪವರ್ (Soft Power) ಹೆಚ್ಚಿಸುವ ಜೊತೆಗೆ ಯುವ ಪೀಳಿಗೆಗೆ ದೇಶದ ನೈಜ ಇತಿಹಾಸವನ್ನು ತಿಳಿಸಲು ಈ 'ಯುಗ್ ಯುಗೀನ್ ಭಾರತ್' ವಸ್ತುಸಂಗ್ರಹಾಲಯ ಮಹತ್ವದ ಮೈಲಿಗಲ್ಲಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌; ಕೇವಲ 7 ಗಂಟೆ ಪ್ರಯಾಣ- ಸಂಪೂರ್ಣ ಮಾಹಿತಿ ಇಲ್ಲಿದೆ
ಮಹಿಳೆ, SC-STಗಳಿಗೆ ಕೇಂದ್ರದಿಂದ ಗುಡ್​​ನ್ಯೂಸ್​: 2.5 ಲಕ್ಷ ಉದ್ಯಮ ಆರಂಭಕ್ಕೆ 4,111 ಕೋಟಿ ರೂ ಮೀಸಲು