ಭಾರತಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ್ರಾ ಧ್ರುವ್ ರಾಠಿ? ಹಳೇ ಕೇಸ್ ಓಪನ್, ದೆಹಲಿ ಕೋರ್ಟ್‌ನಿಂದ ಸಮನ್ಸ್

Published : Oct 15, 2026, 12:18 PM IST
dhruv rathee

ಸಾರಾಂಶ

ಗ್ಯಾನೇಶ್ ಕುಮಾರ್ ರಾಜೀನಾಮೆ ಪ್ರತಿಭಟನೆಯಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಯೂಟ್ಯೂಬರ್ ಧ್ರುವ್ ರಾಠಿ ಬಳಿಕ ಒಂದರ ಮೇಲೊಂದರಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಹಳೇ ಕೇಸ್‌ಗಳ ಒಪನ್ ಆಗುತ್ತಿದೆ, ಇದರ ನಡುವೆ ದೆಹಲಿ ಕೋರ್ಟ್ ಸಮನ್ಸ್ ನೀಡಿದೆ.

ದೆಹಲಿ (ಅ.15) ಯೂಟ್ಯೂಬರ್ ಧ್ರುವ್ ರಾಠಿ ಭಾರತಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ಸಿಜೆಪಿ ಆಯೋಜಿಸಿದ ಗ್ಯಾನೇಶ್ ಕುಮಾರ್ ರಾಜೀನಾಮೆ ಹೋರಾಟದಲ್ಲಿ ಪಾಲ್ಗೊಂಡು ಭಾರಿ ಸಂಚಲನ ಸೃಷ್ಟಿಸಿದ್ದರು. ಬಳಿಕ ದೆಹಲಿ ಪ್ರತಿಭಟನೆಗೆ ಸಜ್ಜಾಗಿದ್ದರು. ಅದಕ್ಕೂ ಮುನ್ನವೇ ದಿಲ್ಲಿ ಪೊಲೀಸರು ಧ್ರುವ್ ರಾಠಿ ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದರು. ಆದರೆ ಧ್ರುವ್ ರಾಠಿ ಸಂಕಷ್ಟ ಇಲ್ಲಿಗೆ ಮುಗಿದಿಲ್ಲ. ಇದೀಗ ಹಳೇ ಪ್ರಕರಣಗಳ ವಿಚಾರಣೆ ಚುರುಕುಗೊಂಡಿದೆ. 2018ರ ಪ್ರಕರಣ ಸಂಬಂಧ ದೆಹಲಿ ಕೋರ್ಟ್ ಧ್ರುವ್ ರಾಠಿಗೆ ಹೊಸ ಸಮನ್ಸ್ ನೀಡಿದೆ.

24 ಗಂಟೆಯಲ್ಲಿ ಎರಡು ಪ್ರಕರಣ ದಾಖಲು

ಧ್ರುವ್ ರಾಠಿ ವಿರುದ್ಧ ಕಳೆದ 24 ಗಂಟೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಹೀಗಾಗಿ ದೆಹಲಿ ಕೋರ್ಟ್, ಧ್ರುವ್ ರಾಠಿ ವಿರುದ್ಧ ಹೊಸ ಸಮನ್ಸ್ ಜಾರಿಗೊಳಿಸಿದೆ. ಧ್ರುವ್ ರಾಠಿ ವಿರುದ್ದ ಎರಡು ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಬಿಜೆಪಿ ಐಟಿ ಸೆಲ್ ಸದಸ್ಯ ವಿಕಾಸ್ ಪಾಂಡೆ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ದೆಹಲಿ ಕೋರ್ಟ್ ಹೊಸ ಸಮನ್ಸ್ ಜಾರಿಗೊಳಿಸಿದೆ. ಯೂಟ್ಯೂಬ್‌ಗೆ ತೆಗೆದು ಹಾಕಲು ಸೂಚಿಸಿದ್ದ ವಿಡಿಯೋವನ್ನು ಮತ್ತೆ ಮೂರು ಭಾಗಗಳಾಗಿ ಮಾಡಿ ಧ್ರುವ್ ರಾಠಿ ಪೋಸ್ಟ್ ಮಾಡಿದ್ದಾರೆ ಎಂದು ವಿಕಾಸ್ ಪಾಂಡೆ ಆರೋಪಿಸಿದ್ದಾರೆ.

ರಾಮ ಸೀತೆ ಮಾಂಸ ಮಧ್ಯ ಸೇವನೆ ವಿಡಿಯೋ

ಧ್ರುವ್ ರಾಠಿ ವಿಡಿಯೋ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಧ್ರುವ್ ರಾಠಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ವನಸವಾಸದಲ್ಲಿ ರಾಮ ಸೀತೆ ಮದ್ಯ ಮಾಂಸ ಸೇವಿಸುತ್ತಿದ್ದರು ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ಹಿಂದೂ ದೇವರ ಕುರಿತು ಅಪಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.

ಗುರುಗಾಂ ಮನೆಗೆ ಸಮನ್ಸ್

ಬೆಂಗಳೂರಿನ ಪ್ರತಿಭಟನೆಗೆ ಬಳಿಕ ದೆಹಲಿ ಪ್ರತಿಭಟನೆಗಾಗಿ ಧ್ರುವ್ ರಾಠಿ ತೆರಳಿದ್ದರು. ಗುರುಗಾಂವ್‌ನಲ್ಲಿರುವ ಮನೆಯಲ್ಲಿ ಉಳಿದುಕೊಂಡಿದ್ದರು. ಅಕ್ಟೋಬರ್ 10ರ ಪ್ರತಿಭಟನೆಗೂ ಮೊದಲು ಧ್ರುವ್ ರಾಠಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಗುರುಗಾಂವ್‌ನ ಮನೆಯಿಂದ ಪೊಲೀಸರು ಧ್ರುವ್ ರಾಠಿಯನ್ನು ವಶಕ್ಕೆ ಪಡೆದಿದ್ದರು. ಇದೀಗ ಧ್ರುವ್ ರಾಠಿಯನ್ನು ವಶಕ್ಕೆ ಪಡೆದಿದ್ದ ಅದೇ ಮನೆಗೆ ಹೊಸ ಸಮನ್ಸ್ ಜಾರಿಗೊಳಿಸಲಾಗಿದೆ.

2018ರಲ್ಲಿ ಧ್ರುವ್ ರಾಠಿ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಾಗಿತ್ತು. 2019ರಲ್ಲಿ ಧ್ರುವ್ ರಾಠಿಗೆ ಮೊದಲ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಧ್ರುವ್ ರಾಠಿ ವಿದೇಶದಲ್ಲಿ ನೆಲೆಸಿರುವ ಕಾರಣ ಪ್ರಕರಣದ ವಿಚಾರಣೆ ಮುಂದುವರಿಯಲಿಲ್ಲ. ಇದೀಗ ಧ್ರುವ್ ರಾಠಿ ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಪ್ರಕರಣ ಚುರುಕು ಪಡೆದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Drinking Water: ಹಲಸಿನ ಸಾರದಿಂದ ನೀರಿನ ಫ್ಲೋರೈಡ್‌ ತೆಗೆಯುವ ಟೆಕ್‌ ಅವಿಷ್ಕರಿಸಿದ ಎನ್‌ಐಟಿ
ಇಸ್ಲಾಂಗೆ ಮತಾಂತರವಾದರೆ ಹಿಂದುಳಿದ ವರ್ಗಗ ಮೀಸಲಾತಿ ನೀಡುವಂತಿಲ್ಲ: ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌