
ಒಮ್ಮೆ ಪ್ರೇಮದ ಬಲೆಯಲ್ಲಿ ಸಿಲುಕಿದ್ರೆ ಅದು ನಿಮ್ಮನ್ನು ಹೊಸದಾದ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಪ್ರೀತಿಯನ್ನು ಉಳಿಸಿಕೊಳ್ಳಲು ಜನರು ಏನು ಬೇಕಾದ್ರೂ ಮಾಡಲು ಸಿದ್ಧರಾಗಿರುತ್ತಾರೆ. ನಗರ ಪ್ರದೇಶಗಳಲ್ಲಿ ಯುವಪ್ರೇಮಿಗಳು ಯಾವುದೇ ಭಯವಿಲ್ಲದೇ ವಿಹರಿಸುತ್ತಾರೆ. ನಗರದ ಪಾರ್ಕ್, ಬಸ್ ನಿಲ್ದಾಣ, ಮಾರುಕಟ್ಟೆ, ಮೆಟ್ರೋ ನಿಲ್ದಾಣವಿದ್ರೂ ತಮ್ಮ ಪ್ರೀತಿ ಸಂಗಾತಿ ಕೈ ಹಿಡಿದುಕೊಂಡು ಓಡಾಡುತ್ತಿರುತ್ತಾರೆ. ಕೆಲ ಜೋಡಿಗಳು ಅತಿರೇಕವಾಗಿ ವರ್ತಿಸಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಇಂತಹವುದೇ ಒಂದು ವಿಡಿಯೋ ಮುನ್ನಲೆಗೆ ಬಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೋರ್ವ ಯುವತಿಯ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುತ್ತಾನೆ. ಈ ದೃಶ್ಯಗಳನ್ನು ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಸತೇಂದ್ರ ಪ್ರತಾಪ್ (@SatendraPr42678) ಹೆಸರಿನ ಎಕ್ಸ್ ಖಾತೆಯಲ್ಲಿ ಏಪ್ರಿಲ್ 27ರಂದು ಪೋಸ್ಟ್ ಮಾಡಿಕೊಳ್ಳಲಾಗಿದೆ. ಈವರೆಗೆ ವಿಡಿಯೋಗೆ 2.5 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಯುವಕನೋರ್ವ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರಂನಲ್ಲಿರುವ ಚಿಕ್ಕ ಕಟ್ಟೆ ಮೇಲೆ ಕುಳಿತಿರುತ್ತಾನೆ. ಆತನ ಮುಂದೆಯೇ ಯುವತಿ ನಿಂತಿರುತ್ತಾಳೆ. ಯುವತಿಯ ಪಾದಗಳನ್ನು ಮುಟ್ಟಿ ಯುವಕ ಕೈಗಳನ್ನು ತನ್ನ ಕಣ್ಣುಗಳಿಗೆ ಮೂರು ಬಾರಿ ಒತ್ತಿಕೊಳ್ಳುತ್ತಾನೆ. ನಂತರ ಇಬ್ಬರ ಮಧ್ಯೆ ಚುಟುಕು ಮಾತುಕತೆಯೂ ನಡೆಯುತ್ತದೆ. ಇದಾದ ಬಳಿಕ ಖುಷಿಯಿಂದ ಕೈಯಲ್ಲಿ ಕ್ಯಾಂಡಿ ತಿನ್ನುತ್ತಾ ಕುಣಿಯುತ್ತಾಳೆ. ಈ ಎಲ್ಲಾ ದೃಶ್ಯಗಳನ್ನು ಎದುರಿನ ಪ್ಲಾಟ್‌ಫಾರಂನಲ್ಲಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಯುವಕ ಲೈಸೆನ್ಸ್ ರದ್ದು ಮಾಡುವಂತೆ ಆಗ್ರಹ!
ಈ ವಿಡಿಯೋಗೆ ಕಮೆಂಟ್ ಮಾಡಿರುವ ಪುರುಷರು, ಈತ ಗಂಡಸು ಜಾತಿಗೆ ಅವಮಾನ. ಪುರುಷರ ಸಂಘದಿಂದ ಈತನನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸತೇಂದ್ರ ಪ್ರತಾಪ್, ಅಖಿಲ ಭಾರತ ಖಾಂತಿ ಮರ್ದ್ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷನಾಗಿರುವ ನಾನು, ಈ ಯುವಕನ ಪುರುಷ ಪ್ರಮಾಣಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸುತ್ತೇನೆ. ಇಂತಹ ಯುವಕರು ಇಡೀ ಪುರುಷ ಸಮಾಜಕ್ಕೆ ಕಳಂಕ. ಇಂದು ಆಕೆಯ ಕಾಲಿಗೆ ನಮಸ್ಕರಿಸಿದ್ದಾನೆ. ನಾಳೆ ಆಕೆಯ ಕೈ-ಕಾಲುಗಳನ್ನು ಒತ್ತುತ್ತಾನೆ ಎಂದು ಬರೆದುಕೊಂಡಿದ್ದಾರೆ.
ಸತೇಂದ್ರ ಪ್ರತಾಪ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದು, ಪುರುಷ ಪ್ರಮಾಣಪತ್ರವನ್ನು ರದ್ದುಗೊಳಿಸುತ್ತಿರುವ ನಿಮಗೆ ಆ ಯುವಕ ಯಾರೆಂದು ನಿಮಗೆ ತಿಳಿದಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಯುವತಿಯ ಪಾದಸ್ಪರ್ಶ ಮಾಡಿದ್ದರಲ್ಲಿ ತಪ್ಪೇನಿದೆ? ಇಂದು ಗಂಡು-ಹೆಣ್ಣು ಸರಿಸಮಾನರು. ಹೆಣ್ಣಿನ ಬಗ್ಗೆ ಕೀಳು ಭಾವನೆ ಇರೋರಿಗೆ ಇಂತಹ ಆಲೋಚನೆಗಳು ಬರುತ್ತವೆ ಎಂದಿದ್ದಾರೆ. ಆದ್ರೆ ಈ ಘಟನೆ ಎಲ್ಲಿ ನಡೆದಿದೆ? ಆ ಯುವಕ ಮತ್ತು ಯುವತಿ ಯಾರು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಇದನ್ನೂ ಓದಿ: ಪಾಕ್ ವಿರುದ್ಧ ಪ್ರತಿಭಟನೆ ವೇಳೆ ಹೀಗೆ ದೇಶಪ್ರೇಮ ಮೆರೆದ್ರಾ ಕರ್ನಾಟಕದ ಮಹಿಳೆಯರು? ವಿಡಿಯೋ ನೋಡಿ!
ಚರ್ಚೆಗೆ ಗ್ರಾಸವಾದ ವಿಡಿಯೋ
ಈಗಲೇ ಆ ಯುವಕನ ಸ್ಥಿತಿ ಹೇಗಿದೆ? ಮುಂದೆ ಮದುವೆಯಾದ್ಮೇಲೆ ಆತನ ಜೀವನ ಹೇಗಿರುತ್ತೆ ಎಂದು ಊಹಿಸಿಕೊಂಡ್ರೆ ಭಯವಾಗುತ್ತಿದೆ ಎಂದು ಓರ್ವ ನೆಟ್ಟಿಗ ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ನೆಟ್ಟಿಗ, ನಾನು ಹೆಂಡತಿಯ ಗುಲಾಮ. ಸಂಸಾರದಲ್ಲಿ ಒಬ್ಬರಿಗೊಬ್ಬರು ಸೋಲುವುದು ಸಹಜ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ