ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲ, ರಾಜ್ಯ ಸ್ಥಾನಮಾನ ಕೇಳಲ್ಲ; ಸಿಎಂ ಓಮರ್ ಭಾವುಕ

Chethan Kumar   | ANI
Published : Apr 28, 2025, 03:09 PM ISTUpdated : Apr 28, 2025, 03:10 PM IST
ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲ, ರಾಜ್ಯ ಸ್ಥಾನಮಾನ ಕೇಳಲ್ಲ; ಸಿಎಂ ಓಮರ್ ಭಾವುಕ

ಸಾರಾಂಶ

ಕಾಶ್ಮೀರಕ್ಕೆ ಬಂದ ಅತಿಥಿಗಳಿಗೆ ನನಗೆ ರಕ್ಷಣೆ ಕೊಡಲು ಸಾಧ್ಯವಾಗಲಿಲ್ಲ. ನಾನು ಮಡಿದ 26 ಕುಟುಂಬದವರಲ್ಲಿ ಯಾವ ಮುಖದಲ್ಲಿ ಕ್ಷಮ ಕೇಳಲಿ? ಈ ಪರಿಸ್ಥಿತಿಯಲ್ಲಿ ನಾನು ಕೇಂದ್ರ ಸರ್ಕಾರದ ಬಳಿ ರಾಜ್ಯ ಸ್ಥಾನಮಾನ ಕೇಳುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ  ಸಿಎಂ ಓಮರ್ ಅಬ್ದುಲ್ಲಾ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಶ್ರೀನಗರ(ಏ.28) ಜಮ್ಮು ಮತ್ತು ಕಾಶ್ಮೀರಕ್ಕೆ ಬಂದ ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲನಾಗಿದ್ದೇನೆ. ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಸಚಿವಾಲಯ ಜವಾಬ್ದಾರಿ ಹೊತ್ತಿರುವ ನಾನು ಹೇಗೆ ಮಡಿದ 26 ಕುಟುಂಬದ ಬಳಿ ಕ್ಷಮೆ ಕೇಳಲಿ? ನನ್ನಲ್ಲಿ ಕ್ಷಮೆ ಕೇಳಲು ಪದಗಳು ಉಳಿದಿಲ್ಲ. ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ವಿಧಾನಸಭೆಯಲ್ಲಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಲವು ದಾಳಿಗಳನ್ನು ನೋಡಿದೆ. ಆದರೆ ಕಳೆದ 21 ವರ್ಷದಲ್ಲಿ ನಡೆದ ಅತೀ ದೊಡ್ಡ ದಾಳಿ ಇದಾಗಿದೆ. ಈ ಪರಿಸ್ಥಿತಿ ಮುಂದಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೇಳಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಯಾವ ಪದಗಳಲ್ಲಿ ಕ್ಷಮೆ ಕೇಳಲಿ?
ಪೂರ್ವದಿಂದ ಪಶ್ಚಿಮ, ಉತ್ತರ ದಿಂದ ದಕ್ಷಿಣದವರಗೆ ಭಾರತದ ಮೂಲೆ ಮೂಲೆಯಲ್ಲಿ ಈ ದಾಳಿಗೆ ಖಂಡನೆ ವ್ಯಕ್ತವಾಗುತ್ತಿದೆ, ನೋವು, ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಡೀ ದೇಶವೇ ಈ ದಾಳಿಗೆ ಶೋಕಾಚರಣೆ ನಡೆಸಿದೆ. ತೀವ್ರ ನೋವಾಗಿದೆ. ಬೈಸರನ್ ಕಣಿವೆಯಲ್ಲಿ ನಡೆದ ಈ ದಾಳಿ ಕಳೆದ 21 ವರ್ಷದಲ್ಲಿ ನಡೆದ ಅತೀ ದೊಡ್ಡ ದಾಳಿಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸುವ ಪ್ರವಾಸಿಗರನ್ನು ಅತ್ಯಂತ ಸುರಕ್ಷತೆಯಲ್ಲಿ ವಾಪಾಸ್ ಕಳುಹಿಸುವ ಜವಾಬ್ದಾರಿ ನನ್ನದು. ಆದರೆ ನಾನು ವಿಫಲನಾದೆ. 26 ಕುಟುಂಬದ ಬಳಿ ಹೇಗೆ ಕ್ಷಮೆ ಕೇಳಲಿ ಎಂದು ಓಮರ್ ಅಬ್ದುಲ್ಲಾ ವಿಧಾನ ಸಭೆಯಲ್ಲಿ ಹೇಳಿದ್ದಾರೆ.

ಭಾರತ ಯುದ್ಧ ಸಿದ್ಧತೆಗೆ ಪಾಕ್ ಕಂಗಾಲು, ಸೇನಾ ಮುಖ್ಯಸ್ಥ ನಾಪತ್ತೆ ಬೆನ್ನಲ್ಲೇ 5000 ಯೋಧರು ರಾಜೀನಾಮೆ?

ಯಾವ ಮುಖದಲ್ಲಿ ರಾಜ್ಯ ಸ್ಥಾನ ಮಾನ ಪಡೆಯಲಿ?
ಪೆಹಲ್ಗಾಂನಲ್ಲಿ ನಡೆದ ಈ ದಾಳಿಗೆ ದೇಶ ಮರುಗಿದೆ. ಈ ಸಂದರ್ಭದಲ್ಲಿ ನೋಡಿ, ಪೆಹಲ್ಗಾಂನಲ್ಲಿ 26 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ನೀಡಿ ಎಂದು ಕೇಳಬೇಕಾ? ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾಮಾನಮಾನಕ್ಕೆ ಈ ಹಿಂದೆ ಹೋರಾಟ ಮಾಡಿದ್ದೇವೆ, ಮುಂದೆ ಮಾಡುತ್ತೇವೆ. ಆದರೆ ಈ ಸಂದರ್ಭದಲ್ಲಿ ರಾಜ್ಯ ಸ್ಥಾನಮಾನ ಕೇಳುವುದಿಲ್ಲ. ಯಾವ ಮುಖ ಇಟ್ಟುಕೊಟ್ಟು ರಾಜ್ಯ ಸ್ಥಾನಮಾನ ಕೇಳಲಿ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.

 

 

ನನ್ನ ಜವಾಬ್ದಾರಿಯಾಗಿತ್ತು, ಆದರೆ ವಿಫಲನಾದೆ
ರಾಜ್ಯಕ್ಕೆ ಬರುವವರ ಸುರಕ್ಷತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜವಾಬ್ದಾರಿ ಮಾತ್ರ ಆಗಿರಲಿಲ್ಲ. ಅದು ಮುಖ್ಯಮತ್ರಿ ಹಾಗೂ ಪ್ರವಾಸೋದ್ಯಮ ಸಚಿವರ ಜವಾಬ್ದಾರಿಯಾಗಿತ್ತು. ಎರಡು ಪ್ರಮುಖ ಜವಾಬ್ದಾರಿ ಹೊತ್ತಿರುವ ನಾನು ಅತಿಥಿಗಳಿಗೆ ರಕ್ಷಣೆ ನೀಡಲು ವಿಫಲನಾದೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಉಗ್ರರನ್ನು ನಾವು ಶಸ್ತ್ರದ ಮೂಲಕ ಅಂತ್ಯಗೊಳಿಸಬಹುದು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸಲು ಜನರ ನೆರವು ಅಗತ್ಯ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ. ಈ ಮೂಲಕ ಸ್ಥಳೀಯ ಕೆಲ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಬಗ್ಗೆ ಓಮರ್ ಅಬುಲ್ಲಾ ಪರೋಕ್ಷವಾಗಿ ಮಾತನಾಡಿದ್ದಾರೆ. 

ಭಾರತದ ಡಿಜಿಟಲ್ ಸ್ಟ್ರೈಕ್, ಶೋಯೆಬ್ ಅಕ್ತರ್ ಸೇರಿ ಪಾಕಿಸ್ತಾನ 16 ಯೂಟ್ಯೂಬ್ ಚಾನೆಲ್ ಬ್ಯಾನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ