
ಆಗ್ರಾ (ಜ.8): ಕೋತಿಯೊಂದು ಹೊತ್ತೊಯ್ದಿದ್ದ ವೃದ್ಧೆಯೊಬ್ಬರ ಚಪ್ಪಲಿಯನ್ನು ತೆಗೆದುಕೊಡಲು ರೈಲಿನ ಮೇಲೆ ಹತ್ತಿದ್ದ 26 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ರೈಲು ನಿಲ್ದಾಣದಲ್ಲಿ ಗುರುವಾರ ಸಂಜೆ 4 ಗಂಟೆಗೆ ನಡೆದಿದೆ. ಪ್ಲಾಟ್‌ಫಾಮ್‌ರ್‍ನ ಅಂಗಡಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ ಅಶೋಕ್ ಎಂಬಾತ ಕಸ್‌ಗಂಜ್- ಫರೂಖಾಬಾದ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹತ್ತಿದ್ದಾಗ ರೈಲಿಗೆ ವಿದ್ಯುತ್ ಸರಬರಾಜು ಮಾಡುವ 25,000-ವೋಲ್ಟ್ ಓವರ್‌ಹೆಡ್ ವಿದ್ಯುತ್ ತಂತಿ ಸ್ಪರ್ಶಿಸಿ 10 ನಿಮಿಷಗಳಲ್ಲೇ ಸುಟ್ಟು ಕರಕಲಾಗಿದ್ದಾನೆ. ಅಶೋಕ್ ರೈಲು ಹತ್ತುವುದನ್ನು ತಡೆಯಲು ಸ್ಥಳದಲ್ಲಿ ಯಾವುದೇ ರೈಲು ಅಧಿಕಾರಿಗಳಿಲ್ಲದಿದ್ದುದ್ದೇ ದುರಂತಕ್ಕೆ ಕಾರಣವಾಗಿದೆ.
ಘಟನೆಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ ಸ್ವಲ್ಪ ಸಮಯದ ನಂತರ ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಯಿತು. ರೈಲಿನ ಬೆಂಕಿಯನ್ನು ನಂದಿಸಿ, ತೀವ್ರವಾಗಿ ಸುಟ್ಟ ದೇಹವನ್ನು ಹೊರತೆಗೆಯಲಾಯಿತು. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ. ನಿಲ್ದಾಣದಲ್ಲಿ ಕೋತಿಗಳ ಹಾವಳಿ ಜಾಸ್ತಿಯಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈಲು ಅಧಿಕಾರಿಗಳು ಆರೋಪಿಸಿದ್ದಾರೆ.
ಸೈಟ್‌ನಲ್ಲಿ ಕೆಲಸ ಮಾಡುವ ಸಂತ್ರಸ್ತೆಯ ಸಂಬಂಧಿಯ ಪ್ರಕಾರ, "ಅಶೋಕ್ ರೈಲಿನಲ್ಲಿ ಹತ್ತುವುದನ್ನು ತಡೆಯಲು ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ರೈಲ್ವೆ ರಕ್ಷಣಾ ಪಡೆ ಅಥವಾ ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಅವರು ಹೈ-ಟೆನ್ಷನ್ ಲೈನ್ನೊಂದಿಗೆ ಸಂಪರ್ಕಕ್ಕೆ ಬಂದ ನಂತರ, ಮೂರು ಸ್ಫೋಟಗಳು ಸಂಭವಿಸಿದವು ಮತ್ತು ಅವರು 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಸುಟ್ಟುಹೋದರು. ಬಹಳ ವಿಳಂಬದ ನಂತರ ರೈಲ್ವೆ ಅಧಿಕಾರಿಗಳು ಸ್ಥಳಕಕೆ ಧಾವಿಸಿ ಕ್ರಮಕ್ಕೆ ಮುಂದಾದರು ಎಂದಿದ್ದಾರೆ.
ಕರೆಂಟ್ ವೈರ್ ಮೈಮೇಲೆ ಬಿದ್ದು ದೂರ ಚಿಮ್ಮಿದ ವ್ಯಕ್ತಿ: ಭಯಾನಕ ವಿಡಿಯೋ
ಘಟನೆಗೆ ಪ್ರತಿಕ್ರಿಯಿಸಿದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪರಿಸ್ಥಿತಿಯನ್ನು ವ್ಯಾಪಕವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ಘಟನೆಗೆ ಕಾರಣವಾದ ನ್ಯೂನತೆಗಳನ್ನು ಗುರುತಿಸುವ ಕರ್ತವ್ಯವನ್ನು ಸಬ್ ಇನ್ಸ್‌ಪೆಕ್ಟರ್‌ಗೆ ವಹಿಸಲಾಗಿದೆ.
Yashwanthpur Railway Station: ಡ್ರಮ್‌ನಲ್ಲಿ ಯುವತಿ ಶವ ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು
ಸ್ಥಳೀಯರ ಪ್ರಕಾರ, ಕಾಸ್ಗಂಜ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ಮಂಗಗಳು ಹೆಚ್ಚಿನ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಆಗ್ರಾ ಪ್ರದೇಶಾದ್ಯಂತ ಕೋತಿಗಳ ಕಾಟಕ್ಕೆ ಕಳೆದ ವರ್ಷ ಕನಿಷ್ಠ 15 ಜನರು ಸಾವನ್ನಪ್ಪಿದ್ದು ಕಳೆದ ವಾರದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಓರ್ವರು ಗಂಭೀರವಾಗಿ ಗಾಯಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ