
ಗಾಂಧಿನಗರ: ಇಂದಿನ ಯುವ ಸಮುದಾಯ (youth) ಸೋಶಿಯಲ್ ಮೀಡಿಯಾದಲ್ಲಿ (Social Media) ಹೆಚ್ಚು ಲೈಕ್ಸ್, ವ್ಯೂವ್ ಹುಚ್ಚಾಟಕ್ಕೆ ಮುಂದಾಗುತ್ತಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಎತ್ತರ ಪ್ರದೇಶದಲ್ಲಿ ಸ್ಟಂಟ್ ಮಾಡಿ ನೆಟ್ಟಿಗರಿಂದ ಛೀಮಾರಿ ಹಾಕಿಸಿಕೊಂಡಿದ್ದಳು. ಇದೀಗ ಯುವಕರ ಸರದಿ. ಕಡಲ ಕಿನಾರೆಯಲ್ಲಿ ಥಾರ್ (Thar) ಕಾರ್ ನಿಲ್ಲಿಸಿ ಸ್ಟಂಟ್ ಮಾಡಲು ಹೋಗಿದ್ದ ಯುವಕರು ಪಜೀತಿ ಸಿಲುಕಿದ್ದಾರೆ. ಯುವಕರು ಪಜೀತಿಗೆ ಸಿಲುಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಇದು ನಿಮಗೆ ಬೇಕಿತ್ತಾ ಎಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಕಛ್ ನಗರದ ಮುಂದ್ರಾ ಬೀಚ್‌ನಲ್ಲಿ (Mundra Beach) ಈ ಘಟನೆ ನಡೆದಿದೆ. ಎರಡು ಥಾರ್ ನಲ್ಲಿ ಬಂದ ಕೆಲ ಯುವಕರು ಎರಡು ವಾಹನಗಳು ಸಮುದ್ರದ ಆಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಥಾರ್ ಆಳಕ್ಕೆ ಹೋದಂತೆ ಮರಳಿನಲ್ಲಿ ಸಿಲುಕಿದ್ದರಿಂದ ಹಿಂದಕ್ಕೆ ಬರಲು ಆಗದೇ ಅಲ್ಲೇ ಸಿಲುಕಿವೆ. ಥಾರ್‌ಗಳು ಸಮುದ್ರದಲ್ಲಿ ಸಿಲುಕಿದ್ದರಿಂದ ಯುವಕರು ಸಹಾಯಕ್ಕಾಗಿ ಸ್ಥಳೀಯರಿಂದ ಸಹಾಯ ಪಡೆದುಕೊಂಡಿದ್ದಾರೆ.
ಕೊನೆಗೆ ಸ್ಥಳೀಯರ ನೆರವಿನಿಂದ ಎರಡೂ ಥಾರ್‌ಗಳನ್ನು ಹೊರಗಡೆ ಎಳೆಯಲಾಗಿದೆ. ಒಂದು ವಾಹನದ ಇಂಜಿನ್ ಸಂಪೂರ್ಣ ಫೇಲ್ ಆಗಿದೆ. ಇದೀಗ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ನನಗೆ ಪೆಟ್ಟಾಗಿದೆ, ಪ್ಲೀಸ್ ಗಾಬರಿ ಆಗಬೇಡಿ; ಮಗನ ಕೊನೆಯ ಮಾತು ನೆನೆದು ಭಾವುಕರಾದ ತಂದೆ
ಎತ್ತರ ಕಟ್ಟಡದಿಂದ ನೇತಾಡಿದ ಯುವತಿ
ಪುಣೆ ಮೂಲದ ಯುವತಿಯೊಬ್ಬಳು ಎತ್ತರ ಕಟ್ಟಡದ ತುದಿಯಿಂದ ನೇತಾಡಿ ರೀಲ್ಸ್ ಮಾಡಿದ್ದಳು. ಯುವತಿಯ ಅಪಾಯಕಾರಿ ಸ್ಟಂಟ್ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಪುಣೆ ವ್ಯಾಪ್ತಿಯ ಮುಂಬೈ-ಬೆಂಗಳೂರು ಹೆದ್ದಾರಿ ಬಳಿಕ ನರ್ಹೆ ಪ್ರದೇಶದ ಕಟ್ಟಡ ಮೇಲ್ಭಾಗದಿಂದ ಯುವತಿ ಅಪಾಯಕಾರಿ ಸ್ಟಂಟ್ ಮಾಡಿದ್ದಳು.
ಯುವತಿ ಕಟ್ಟಡದ ಟೆರೇಸ್‌ನಿಂದ ನೇತಾಡುತ್ತಿದ್ದಳು. ಸ್ನೇಹಿತರು ಆಕೆಯ ಕೈ ಹಿಡಿದಿದ್ದರೆ ಮತ್ತೋರ್ವ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದನು. ಪ್ರಕರಣ ಸಂಬಂಧ ಭಾರತಿ ವಿದ್ಯಾಪೀಠ ಪೊಲೀಸರು ಐವರು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಹಾರದಲ್ಲಿಂದು ಮೂರನೇ ಸೇತುವೆ ಕುಸಿತ; ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನೆಲಕಚ್ಚಿದ ಬ್ರಿಡ್ಜ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ