Asianet Suvarna News Asianet Suvarna News

ನನಗೆ ಪೆಟ್ಟಾಗಿದೆ, ಪ್ಲೀಸ್ ಗಾಬರಿ ಆಗಬೇಡಿ; ಮಗನ ಕೊನೆಯ ಮಾತು ನೆನೆದು ಭಾವುಕರಾದ ತಂದೆ

ಅಂದು ಬೆಳಗ್ಗೆ 11.48ಕ್ಕೆ ಸ್ವೀಕರಿಸಿದ ಪೋನ್ ಕರೆಯಲ್ಲಿನ ಧ್ವನಿ ನನ್ನ ಜೀವನದುದ್ದಕ್ಕೂ ನೆನಪಿನಲ್ಲಿರುತ್ತದೆ. ಆ 13 ಸೆಕೆಂಡ್ ನನ್ನ ಜೀವನದ ಕಷ್ಟಕರ ದಿನಗಳು ಎಂದು ನಾನು ಭಾವಿಸುತ್ತೇನೆ.

I am hit please don t panic humayun bhat father remember son s last 13 second phone call mrq
Author
First Published Jun 23, 2024, 3:53 PM IST

ಶ್ರೀನಗರ: ಹುತಾತ್ಮ ಹುಮಾಯೂನ್ ಭಟ್ (Humayun Bhat) ತಂದೆ ಜಮ್ಮು ಮತ್ತು ಕಾಶ್ಮೀರದ ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಗುಲಾಂ ಹಸನ್ ಭಟ್ ಕೊನೆಯ ಬಾರಿಗೆ ಮಗನ ಜೊತೆ ಮಾತನಾಡಿದ 13 ಸೆಕೆಂಡ್‌ಗಳ ವಿಷಯವನ್ನು ಹಂಚಿಕೊಂಡಿದ್ದಾರೆ. ಅಪ್ಪಾ, ನಾನು ಗಾಯಗೊಂಡಿದ್ದೇನೆ, ಪ್ಯಾನಿಕ್ ಆಗಬೇಡಿ ಎಂದು ಪುತ್ರ ಕೊನೆಯ ಬಾರಿ ಹೇಳಿದ್ದನು ಎಂದು ಗುಲಾಂ ಹಸನ್ ಭಟ್ ಹೇಳಿದ್ದಾರೆ. ಮಗ ನಮ್ಮೊಂದಿಗೆ ಇಲ್ಲದಿದ್ದರೂ ಆತ ಕೊನೆಯ ಬಾರಿ ಹೇಳಿದ ಮಾತುಗಳು ನನ್ನ ಕಿವಿಯಲ್ಲಿ ಪದೇ ಪದೇ ಪ್ರತಿಧ್ವನಿಸುತ್ತಿರುತ್ತವೆ ಎಂದು ಗುಲಾಂ ಹಸನ್ ಭಟ್ (Ghulam Hasaan Bhat) ಹೇಳುತ್ತಿರುತ್ತಾರೆ. 

ಹುಮಾಯನ್ ಭಟ್ ಹುತಾತ್ಮರಾಗಿದ್ದ ವೇಳೆ ಅವರು 29 ದಿನದ ಹಸೂಗೂಸಿನ ತಂದೆಯಾಗಿದ್ದರು. ಒಂದೂವರೆ ವರ್ಷಗಳ ಹಿಂದೆಯಷ್ಟೇ ಫಾತಿಮಾ ಎಂಬವರನ್ನು ವಿವಾಹವಾಗಿದ್ದರು. 13ನೇ ಸೆಪ್ಟೆಂಬರ್ 2023ರಲ್ಲಿ ನಡೆದ ಅನಂತ್‌ನಾಗ್ ಆಪರೇಷನ್ (anantnag operations) ವೇಳೆ ಹುಮಾಯೂನ್ ಭಟ್ ಸೇರಿದಂತೆ ಮೂವರು ಯೋಧರು  ಹುತಾತ್ಮರಾಗಿದ್ದರು. ಮನ್‌ಪ್ರೀತ್ ಸಿಂಗ್,  ಆಶೀಶ್ ಧೊನಚ್ ಸಹ ಅನಂತ್‌ನಾಗ್ ಆಪರೇಷನ್ ಹುತಾತ್ಮರಾಗಿದ್ದರು. ಹುಮಾಯೂನ್ ಭಟ್ ಜಮ್ಮು ಕಾಶ್ಮೀರದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಕೇವಲ 13 ಸೆಕೆಂಡ್ ಮಾತುಕತೆ

ಮಾಧ್ಯಮವೊಂದರ ಜೊತೆ ಮಾತನಾಡಿರುವ ಗುಲಾಂ ಹಸನ್ ಭಟ್, ಇನ್ನು ಒಂದು ತಿಂಗಳು ಕಳೆದ್ರೆ ಮೊಮ್ಮಗಳ ಹುಟ್ಟುಹಬ್ಬ. ಮಗಳ ಮೊದಲ ಹುಟ್ಟುಹಬ್ಬ ನೋಡಲು ಮಗನಿಲ್ಲ ಎಂಬ ನೋವು ನಮ್ಮಲ್ಲಿದೆ. ಸೆಪ್ಟೆಂಬರ್ 13ರ ದಾಳಿಯಲ್ಲಿ ಮಗ ಗಾಯಗೊಂಡಿದ್ದಾಗ ಕೊನೆಯ ಬಾರಿ ನನ್ನೊಂದಿಗೆ ಮಾತನಾಡಿದ್ದನು. ನನಗೆ ಗಾಯವಾಗಿದ್ದು, ದಯವಿಟ್ಟು ಗಾಬರಿಯಾಗಬೇಡಿ ಎಂದು ಪುತ್ರ ದೂರವಾಣಿ ಮೂಲಕ ನನಗೆ ಹೇಳಿದ್ದನು. ಇದದ ಬಳಿಕ ನಾನು ನಿರಂತರವಾಗಿ ಸೇನೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ.  ಅಂದು ನಮ್ಮಿಬ್ಬರು ಕೇವಲ 13 ಸೆಕೆಂಡ್ ಮಾತ್ರ ಮಾತುಕತೆಯಾಗಿತ್ತು ಎಂದು ಗುಲಾಂ ಹಸನ್ ಭಟ್ ಹೇಳುತ್ತಾರೆ. 

5 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ದೇಶದ ಅತೀ ಉದ್ದದ ಸೀ ಬ್ರಿಡ್ಜ್‌ ಅಟಲ್‌ ಸೇತುವಿನಲ್ಲಿ ಬಿರುಕು

ಮೊಮ್ಮಗು ಆಶರ್ ಅಂಬೆಗಾಲಿಡುತ್ತಿರೋದನ್ನು ನೋಡಿದ್ರೆ ಮಗ ಹುಮಾಯೂನ್ ನೆನಪಿಗೆ ಬರುತ್ತಾನೆ. ಹುಮಾಯೂನ್ ಇನ್ನು ಹೆಚ್ಚು ಕಾಲ ಬದುಕಿ ಬಾಳಬೇಕಿತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ. ಅಶರ್ ಮೊದಲ ಹುಟ್ಟುಹಬ್ಬ ನೋಡುವ ಭಾಗ್ಯವೂ ಮಗನಿಗೆ ಇಲ್ಲದಾಗಿದೆ ಎಂದು ಗುಲಾಂ ಹಸನ್ ಭಟ್ ಭಾವುಕರಾಗುತ್ತಾರೆ. ಗುಲಾಂ ಹಸನ್ ಭಟ್ ಸಹ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. 

ನನಗೆ ಪೆಟ್ಟಾಗಿದೆ, ಗಾಬರಿಯಾಗಬೇಡಿ

ಅಂದು ಬೆಳಗ್ಗೆ 11.48ಕ್ಕೆ ಸ್ವೀಕರಿಸಿದ ಪೋನ್ ಕರೆಯಲ್ಲಿನ ಧ್ವನಿ ನನ್ನ ಜೀವನದುದ್ದಕ್ಕೂ ನೆನಪಿನಲ್ಲಿರುತ್ತದೆ. ಆ 13 ಸೆಕೆಂಡ್ ನನ್ನ ಜೀವನದ ಕಷ್ಟಕರ ದಿನಗಳು ಎಂದು ನಾನು ಭಾವಿಸುತ್ತೇನೆ. ಶ್ರೀನಗರದ ಸೇನಾಸ್ಪತ್ರೆ ತಲುಪುವವರೆಗೂ ಅಲ್ಲಿ ಏನಾಗಿದೆ ಎಂಬುವುದು ನನಗೆ ಏನು ಗೊತ್ತಿರಲಿಲ್ಲ. ನನಗೆ ಪೆಟ್ಟಾಗಿದೆ, ಗಾಬರಿಯಾಗಬೇಡಿ ಎಂಬ ಮಾತುಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು ಎಂದು ಅಂದಿನ ದಿನವನ್ನು ಗುಲಾಂ ಹಸನ್ ಭಟ್ ನೆನಪಿಸಿಕೊಳ್ಳುತ್ತಾರೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ನಮ್ಮ ಪ್ರಧಾನಿ ಮೋದಿ ಭೇಟಿ: ಹಲವು ಮಹತ್ವದ ಒಪ್ಪಂದಗಳಿಗೆ ಸಹಿ

ಬೆಳಗ್ಗೆ ಮಗನ ಕರೆ ಬಂದ ನಂತರ ನಾನು ತುಂಬಾ ಭಯಗೊಂಡಿದ್ದೆ. ಆ ಬಳಿಕ ಮಧ್ಯಾಹ್ನ 3.30ಕ್ಕೆ ಮಗನನ್ನು ಸ್ಟ್ರೆಚರ್‌ನಲ್ಲಿ ಕೆಳಗೆ ಇಳಿಸುವ ಫೋಟೋ ಕಳುಹಿಸಲಾಗಿತ್ತು. ಶ್ರೀನಗರದಿಂದ ಕೊಕನಾರ್ಗ್‌ 100 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಶ್ರೀನಗರದ ಆಸ್ಪತ್ರೆಗೆ ತಲುಪಲು ಕನಿಷ್ಠ 3 ಗಂಟೆ ಬೇಕಾಗುತ್ತದೆ. ಆಸ್ಪತ್ರೆಯ 100 ಮೀಟರ್ ಉದ್ದದ ಕಾರಿಡಾರ್‌ ದಾರಿ ನಮಗೆ ತುಂಬಾ ದೂರ ಆನ್ನಿಸಿತ್ತು ಎಂದು ಹೇಳಿದರು.

Latest Videos
Follow Us:
Download App:
  • android
  • ios