ಯೂಟ್ಯೂಬ್ ನೋಡಿ ತನಗೆ ತಾನೇ ಸರ್ಜರಿ ಮಾಡಿಕೊಂಡ ಯುವಕ

ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನೋರ್ವ ತನಗೆ ತಾನೇ ಅಪರೇಷನ್ ಮಾಡಿಕೊಂಡಿದ್ದಾನೆ. ಯೂಟ್ಯೂಬ್‌ ನೋಡಿ ತನಗೆ ತಾನೇ ಅಪರೇಷನ್ ಮಾಡಿಕೊಂಡ ಯುವಕನಿಗೆ ನಂತರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

Young man performs self-surgery after watching YouTube

ಕೆಲವರು ಯೂಟ್ಯೂಬ್ ನೋಡಿ ಅನೇಕ ವಿದ್ಯೆಗಳನ್ನು ಕಲಿತಿದ್ದಾರೆ. ಏಕಲವ್ಯನಂತೆ ಸ್ವಯಂಶಿಕ್ಷಾರ್ಥಿಗಳಾಗಿ ಹಲವು ವಿದ್ಯೆಗಳಲ್ಲಿ ಪರಿಣಿತರೆನಿಸಿದ್ದಾರೆ. ಹಲವರು ಯುಪಿಎಸ್‌ಸಿಯಂತಹ ಪರೀಕ್ಷೆಗಳನ್ನು ಯೂಟ್ಯೂಬ್‌ನಲ್ಲಿ  ಬರುವ ಉಚಿತ ತರಬೇತಿ ವೀಡಿಯೋಗಳನ್ನು ನೋಡುತ್ತಾ ಕಲಿತು ಯುಪಿಎಸ್‌ಸಿ ಪಾಸಾಗಿದ್ದಾರೆ. ಇನ್ನು ಕುಕ್ಕಿಂಗ್ ಬಗ್ಗೆ ಹೇಳೋದೆ ಬೇಡ. ಅನೇಕ ಯುವ ಸಮುದಾಯ ಇಂದು ಯೂಟ್ಯೂಬ್‌ ನೋಡಿಯೇ ರುಚಿ ರುಚಿಯಾದ ಅಡುಗೆಯನ್ನು ಮಾಡುತ್ತಿದ್ದಾರೆ ಕಲಿಯುತ್ತಿದ್ದಾರೆ. ಕೋಟ್ಯಾಂತರ ಜನರಿಗೆ ಹಣ ಗಳಿಕೆಯ ದಾರಿಯಾಗಿ ಯೂಟ್ಯೂಬ್‌ ಕಾರ್ಯನಿರ್ವಹಿಸುತ್ತಿರುವುದು ಈಗ ಗುಟ್ಟಾಗೇನು ಉಳಿದ್ದಿಲ್ಲ. ಆದರೆ ಕೆಲವರು ಈ ಯೂಟ್ಯೂಬ್ ನೋಡಿ ವೈದ್ಯರಾಗಲು ಹೋಗುತ್ತಿದ್ದು, ದೊಡ್ಡ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.  ಕೆಲ ವರ್ಷಗಳ ಹಿಂದ ಯೂಟ್ಯೂಬ್ ನೋಡಿ ಗಂಡನೋರ್ವ ಹೆಂಡತಿಗೆ ಹೆರಿಗೆ ಮಾಡಲು ಹೋಗಿ ಗರ್ಭದಲ್ಲಿದ್ದ ಶಿಶು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಇನ್ನೂ ನೆನಪಿನಲ್ಲಿರುವಾಗಲೇ ಉತ್ತರ ಪ್ರದೇಶದ ಮಥುರಾದಲ್ಲಿ ಇದೇ ರೀತಿಯ ವಿಚಿತ್ರವೆನಿಸುವ ಘಟನೆ ನಡೆದಿದೆ.

ಯೂಟ್ಯೂಬ್ ನೋಡಿ ತನಗೆ ತಾನೇ ಶಸ್ತ್ರಚಿಕಿತ್ಸೆ

Latest Videos

ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನೋರ್ವ ತನಗೆ ತಾನೇ ಅಪರೇಷನ್ ಮಾಡಿಕೊಂಡಿದ್ದಾನೆ. ಯೂಟ್ಯೂಬ್‌ ನೋಡಿ ತನಗೆ ತಾನೇ ಅಪರೇಷನ್ ಮಾಡಿಕೊಂಡ ಯುವಕನಿಗೆ ನಂತರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮಥುರಾ ಜಿಲ್ಲೆಯ ವೃಂದಾವನದ ಸುನರಖ್ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.  32 ವರ್ಷದ ರಾಜಬಾಬು ಎಂಬಾತನೇ ಹೀಗೆ ತನಗೆ ತಾನೇ ಅಪರೇಷನ್ ಮಾಡಿಕೊಂಡ ಯುವಕ.  ರಾಜಬಾಬುಗೆ ಕಳೆದ ಹಲವು ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ಆತ ವೈದ್ಯರ ಬಳಿ ಹೋಗುವ ಬದಲು ಯುಟ್ಯೂಬ್‌ನಲ್ಲಿ ವೀಡಿಯೋ ನೋಡಿದ್ದಾನೆ. ಬಳಿಕ ತನ್ನ ಸಮಸ್ಯೆಗೆ ತಾನೇ ಮುಕ್ತಿ ನೀಡಲು ಬಯಸಿದ್ದಾನೆ.

ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ : ಹೆರಿಗೆಯ ನಂತರ ಕೂಸನ್ನು ಕೊಂದ 15 ವರ್ಷದ ಬಾಲಕಿ

ಹೆಚ್ಚಾದ ಹೊಟ್ಟೆನೋವಿನಿಂದ ಪ್ರಕರಣ ಬೆಳಕಿಗೆ

ಬಳಿಕ ಮಥುರಾದ ಮೆಡಿಕಲ್‌ ಶಾಪೊಂದಕ್ಕೆ ತೆರಳಿದ ರಾಜಬಾಬು ಅಲ್ಲಿ ಆಪರೇಷನ್‌ಗೆ ಬೇಕಾದ ಅಗತ್ಯ ವಸ್ತುಗಳಾದ ಬ್ಲೇಡ್, ಅರಿವಳಿಕೆ ಚುಚ್ಚುಮದ್ದು ಮತ್ತು ಹೊಲಿಗೆ ಹಾಕಲು ಸೂಜಿಯನ್ನು ಖರೀದಿಸಿ ಮನೆಗೆ ತಂದಿದ್ದಾನೆ. ಬಳಿಕ ತನಗೆ ತಾನೇ ಅರವಳಿಕೆ ನೀಡಿಕೊಂಡು ಅಪರೇಷನ್ ಮಾಡಿಕೊಂಡಿದ್ದಾನೆ. ಪ್ಲಾಸ್ಟಿಕ್ ದಾರದಿಂದ 11 ಹೊಲಿಗೆ ಹಾಕಿಕೊಂಡಿದ್ದಾನೆ. ಆದರೆ ಆಪರೇಷನ್ ಬಳಿಕ ಯುವಕನ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ನೋವು ಹೆಚ್ಚಾದಾಗ ಕುಟುಂಬಸ್ಥರು ವೈದ್ಯರಿಗೆ ತಿಳಿಸಿದ್ದಾರೆ. ನಂತರ ರಾಜಾಬಾಬು ಅವರ ಸೋದರಳಿಯ ರಾಹುಲ್ ಠಾಕೂರ್ ಅವರನ್ನು ಜಿಲ್ಲಾ ಸಂಯುಕ್ತ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಇದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದಿದ್ದ ಖದೀಮರ ಸೆರೆ!

ಈ ವಿಚಾರಕ್ಕೆ ಸಂಬಂಧಿಸಿದಂತೆ ಡಾ. ಶಶಿ ರಂಜನ್ ಮಾತನಾಡಿ, ರಾಜಾಬಾಬು ಅವರಿಗೆ 15 ವರ್ಷಗಳ ಹಿಂದೆ ಅಪೆಂಡಿಕ್ಸ್ ಆಪರೇಷನ್ ಆಗಿತ್ತು. ಇದರ ನಂತರ, ಇತ್ತೀಚೆಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ, ಅವರು ತಮ್ಮ ಹೊಟ್ಟೆಯನ್ನು 7 ಸೆಂಟಿಮೀಟರ್ ಕತ್ತರಿಸಿ ತಾವೇ ಆಪರೇಷನ್ ಮಾಡಿಕೊಂಡು ಹೊಲಿಗೆ ಹಾಕಿಕೊಂಡಿದ್ದಾರೆ. ಇದರಿಂದ ಹೊಟ್ಟೆಯೊಳಗೆ ಸೋಂಕು ಹರಡುವ ಅಪಾಯವಿದೆ ಮತ್ತು ಈ ರೀತಿಯ ಆಳವಾದ ಗಾಯದ ಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.  

ಬಿಬಿಎ ಓದಿ ರೈತನಾಗಿದ್ದ ರಾಜಬಾಬು

ಈ ರಾಜಬಾಬು ಬಿಬಿಎ ಓದಿದ್ದು, ವೃತ್ತಿಯಲ್ಲಿ ರೈತನಾಗಿದ್ದು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ. ಕಳೆದ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹೀಗಾಗಿ ತಾನೇ ಹೊಟ್ಟೆಗೆ ಆಪರೇಷನ್ ಮಾಡಲು ನಿರ್ಧರಿಸಿದ್ದಾನೆ. ಇದಕ್ಕಾಗಿ, ಆಪರೇಷನ್ ಮಾಡಲು ಬೇಕಾದ ಉಪಕರಣಗಳು ಮತ್ತು ತಂತ್ರಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಮೊದಲು ಯೂಟ್ಯೂಬ್‌ನಲ್ಲಿ ಹೊಟ್ಟೆಯ ಆಪರೇಷನ್‌ಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಿದ್ದಾನೆ. ನಂತರ, ಮಥುರಾದ ವೈದ್ಯಕೀಯ ಅಂಗಡಿಯಿಂದ ಆಪರೇಷನ್‌ಗಾಗಿ ಬ್ಲೇಡ್, ಅರಿವಳಿಕೆ ಚುಚ್ಚುಮದ್ದು ಮತ್ತು ಹೊಲಿಗೆ ಹಾಕಲು ಸೂಜಿಯನ್ನು ಖರೀದಿಸಿ, ತನ್ನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿಕೊಂಡು ತಾನೇ ಆಪರೇಷನ್ ಮಾಡಿಕೊಂಡಿದ್ದಾನೆ.  ಈ ಸುದ್ದಿ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ. 

vuukle one pixel image
click me!