
ಗುವ್ಹಾಟಿ (ಅ.03) ಮುಖ್ಯಮಂತ್ರಿ ಭೇಟಿಗಾಗಿ ಜನರು ಕಿಕ್ಕಿರಿದು ತುಂಬಿದ್ದರು. ಹಲವರು ತಮ್ಮ ಸಮಸ್ಯೆಗಳು, ಅರ್ಜಿಗಳನ್ನು ಹಿಡಿದು ನಿಂತಿದ್ದರು. ಮತ್ತೆ ಕೆಲವರು ಸಿಎಂ ಭೇಟಿಗಾಗಿ ಕಾದಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಎಲ್ಲೆ ಹೋದರು ಜನರನ್ನು ಭೇಟಿ ಮಾಡಿ ಮಾತನಾಡಿಸುತ್ತಾರೆ. ಜನರಿದ್ದ ಬಳಿ ಹಿಮಂತ ಬಿಸ್ವಾ ಶರ್ಮಾ ಬರುತ್ತಿದ್ದಂತೆ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮನೆಯಿಲ್ಲ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಸಾವಿರ ಸಮಸ್ಯೆಗಳು. ಇದರ ನಡುವೆ ಯುವಕನೊಬ್ಬ ನನಗೆ ಐಫೋನ್ ಕೊಡಿಸಿ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬಳಿ ಮನವಿ ಮಾಡಿದ್ದಾರೆ. ಯಾವುದಾದರು ಸರಿ ಒಂದು ಐಫೋನ್ ಕೊಡಿಸಿ ಎಂದು ಮನವಿ ಮಾಡಿದ್ದಾನೆ. ಇದಕ್ಕೆ ಹಿಮಂತ ಕೂಡ ಅಷ್ಟೇ ಕ್ಲಾಸ್ ಉತ್ತರ ನೀಡಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಬರುತ್ತಿದ್ದಂತೆ ಜನರು ಮುತ್ತಿಕೊಂಡಿದ್ದಾರೆ. ಎಲ್ಲರನ್ನು ಮಾತನಾಡಿಸುತ್ತಾ, ಕೈಕುಲುತ್ತಾ ಬಂದ ಹಿಮಂತ ಶರ್ಮಾಗೆ ಯುವಕನೊಬ್ಬ ಎದುರಾಗಿದ್ದಾನೆ. ಒಂದೆರಡು ಮಾತನಾಡಿ ಸರ್ ನನಗೆ ಐಫೋನ್ ಬೇಕು, ಒಂದು ಐಫೋನ್ ಕೊಡಿಸಿ ಎಂದು ಮನವಿ ಮಾಡಿದ್ದಾನೆ. ಯುವಕನ ಮಾತು ಕೇಳಿ ಹಿಮಂತ ಬಿಸ್ವ ಶರ್ಮಾ ಒಂದು ಕ್ಷಣ ಯೋಚಿಸಿದ್ದಾರೆ. ಬಳಿಕ ನಿನಗೆ ಐಫೋನ್ ಬೇಕಾ ಎಂದು ತಮ್ಮ ಎಂದಿನ ಶೈಲಿಯಲ್ಲೇ ಕೈ ಎತ್ತಿದ್ದಾರೆ. ಓಹ್ ಐಫೋನ್ ಬೇಕಾ ನಿನಗೆ, ಹೊಸ ಐಫೋನ್ ಬೇಕಾ ಅಥವಾ ಹಳೇ ಐಫೋನ್ ಬೇಕಾ ಎಂದು ಹಿಮಂತ ಬಿಸ್ವ ಶರ್ಮಾ ಮರು ಪ್ರಶ್ನಿಸಿದ್ದಾರೆ.
ಹಿಮಂತ ಬಿಸ್ವ ಶರ್ಮಾ ಮರು ಪ್ರಶ್ನೆಗೆ ಯುವಕ ಉತ್ತರಿಸಿದ್ದಾನೆ. ಹೊಸದು ಅಥವಾ ಹಳೇದು, ಯಾವುದಾದರು ಸರಿ ಒಂದು ಐಫೋನ್ ಸಾಕು ಎಂದು ಯುವಕ ಉತ್ತರಿಸಿದ್ದಾನೆ. ಯುವಕನ ಜೊತೆ ಹಾಸ್ಯ ಚಟಾಕಿ ಹಾರಿಸಿದ ಹಿಮಂತ ಬಿಸ್ವ ಶರ್ಮಾ, ಸರಿ ನಿನಗೆ ಐಫೋನ್ ಕೊಡಿಸುತ್ತೇನೆ ಎಂದಿದ್ದಾರೆ. ಇಷ್ಟಕ್ಕೇ ಯುವಕ ಸುಮ್ಮನಾಗಲಿಲ್ಲ, ನೀವು ಸೂಚನೆ ಕೊಟ್ಟಿರಿ,ನಾನು ಪಡೆದುಕೊಳ್ಳುತ್ತೇನೆ ಎಂದು ಉತ್ತರಿಸಿ ಅಲ್ಲಿಂದ ತೆರಳಿದ್ದಾನೆ.
ಈ ಘಟನೆ ವಿಡಿಯೋವನ್ನು ಹಿಮಂತ ಬಿಸ್ವ ಶರ್ಮಾ ಹಂಚಿಕೊಂಡಿದ್ದಾರೆ. ಅತ್ಯಂತ ಸ್ಪಷ್ಟ ಆದ್ಯತೆ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಭರ್ಜರಿ ಕಮೆಂಟ್ಸ್ ವ್ಯಕ್ತವಾಗಿದೆ. ಈಗಿನ ಯುವ ಜನರೇಶನ್ ಆದ್ಯತೆ, ಗುರಿ ಬಹಲ ಸ್ಪಷ್ಟವಾಗಿದೆ. ತಮಗೆ ಬೇಕಾಗಿದ್ದನ್ನು ಕೇಳುತ್ತಾರೆ. ಈ ಹಿಂದೆ ಉದ್ಯೋಗ ಬೇಕು, ಗ್ರಾಮಕ್ಕೆ ರಸ್ತೆ ಬೇಕು ಎಂದು ಕೇಳುತ್ತಿದ್ದರು. ಈಗ ಭಾರತ ಸಾಕಷ್ಟು ಮುಂದುವರಿದಿದೆ. ಐಫೋನ್ ಬೇಡಿಕೆ ಬಂದಿದೆ. ಸರ್ಕಾರ ಐಫೋನ್ 18 ಪ್ರೊ ಮ್ಯಾಕ್ಸ್ ಕೊಡಿಸುವ ಯೋಜನೆ ಆರಂಭಿಸಬಹುದು ಎಂದು ಹಲವರು ಸಲಹೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ