TVK; ಸ್ಟಾಲಿನ್ ಹೇಳಿಕೆಗೆ ಸಿಎಂ ವಿಜಯ್ ಆಕ್ರೋಶ; ಕೇಸ್ ದಾಖಲಾಗುವವರೆಗೆ ಹೋಯ್ತು ಕಿರಿಕ್! ಆಗಿದ್ದೇನು?

Published : Oct 03, 2026, 03:49 PM IST
Thalapthy Vijay

ಸಾರಾಂಶ

ತಮಿಳುನಾಡು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಹೇಳಿಕೆಯೊಂದು ವಿವಾದ ಸೃಷ್ಟಿಸಿದೆ. ಸ್ಟಾಲಿನ್ ಹೇಳಿಕೆಗೆ ತಮಿಳುನಾಡಿನಲ್ಲಿ ಮಹಾ ಸ್ಫೋಟ ಸಂಭವಿಸಿದಂತಾಗಿದೆ ಸಿಎಂ ವಿಜಯ್ ಆಕ್ರೋಶ; ಕೇಸ್ ದಾಖಲಾಗುವವರೆಗೆ ಹೋಯ್ತು ಕಿರಿಕ್! ಆಗಿದ್ದೇನು?

ಚೆನ್ನೈ; ತಮಿಳುನಾಡಿನ ಧಾರಾಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಕಾವು ಗರಿಷ್ಠ ಮಟ್ಟಕ್ಕೇರಿದ್ದು, ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ನಡುವೆ ತೀವ್ರ ರಾಜಕೀಯ ಸಮರ ಏರ್ಪಟ್ಟಿದೆ. ಟಿವಿಕೆ ಅಭ್ಯರ್ಥಿ ಸತ್ಯಭಾಮಾ ಅವರ ದೈಹಿಕ ನೋಟದ ಕುರಿತು ಎಂ.ಕೆ. ಸ್ಟಾಲಿನ್ ನೀಡಿದ್ದಾರೆನ್ನಲಾದ ಅಸಭ್ಯ ಹಾಗೂ ಅವಹೇಳನಕಾರಿ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಪ್ರಸ್ತುತ ಈ ವಿವಾದವು ಚುನಾವಣಾ ಆಯೋಗ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಧಾರಾಪುರಂ ರ್ಯಾಲಿಯಲ್ಲಿ ಸತ್ಯಭಾಮಾ ವಿರುದ್ಧ ಅಸಭ್ಯ ಹೇಳಿಕೆ?

ಶುಕ್ರವಾರ ಧಾರಾಪುರಂನಲ್ಲಿ ನಡೆದ ಡಿಎಂಕೆ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಎಂ.ಕೆ. ಸ್ಟಾಲಿನ್, ಎದುರಾಳಿ ಟಿವಿಕೆ ಅಭ್ಯರ್ಥಿ ಸತ್ಯಭಾಮಾ ಅವರ ದೈಹಿಕ ರೂಪವನ್ನು (Body Shaming) ಉಲ್ಲೇಖಿಸಿ ಅಣಕಿಸಿದ್ದಾರೆ ಎಂದು ಟಿವಿಕೆ ಆರೋಪಿಸಿದೆ. ಸಾರ್ವಜನಿಕ ವೇದಿಕೆಯಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರ ಬಗ್ಗೆ ಅಸಭ್ಯ ರೀತಿಯಲ್ಲಿ ಮಾತನಾಡುವ ಮೂಲಕ ಸ್ಟಾಲಿನ್ ಮತ್ತು ಡಿಎಂಕೆ ನಾಯಕತ್ವ ವಿಕೃತ ಆನಂದ ಪಡುತ್ತಿದೆ ಎಂದು ಟಿವಿಕೆ ನಾಯಕರು ಕಟುವಾಗಿ ವೀರೋಧಿಸಿದ್ದಾರೆ.

ಎಕ್ಸ್‌ನಲ್ಲಿ ಸಿಡಿದೆದ್ದ ವಿಜಯ್: ಡಿಎಂಕೆ ವಿರುದ್ಧ ಗಂಭೀರ ಆರೋಪ!

ಈ ಘಟನೆಯ ಬೆನ್ನಲ್ಲೇ ಟಿವಿಕೆ ಮುಖ್ಯಸ್ಥ, ನಟ-ರಾಜಕಾರಣಿ ವಿಜಯ್ ಸಾಮಾಜಿಕ ಜಾಲತಾಣ 'ಎಕ್ಸ್' (X)ನಲ್ಲಿ ದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಡಿಎಂಕೆ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. "ಧಾರಾಪುರಂನಲ್ಲಿ ಡಿಎಂಕೆ ನಡೆಸಿರುವುದು ಚುನಾವಣಾ ರ್ಯಾಲಿಯಲ್ಲ, ಬದಲಾಗಿ ಮಾನನಷ್ಟ ಮತ್ತು ಅಶ್ಲೀಲತೆಯಿಂದ ಕೂಡಿದ ಸಭೆ. ಮಹಿಳೆಯರ ಬಗ್ಗೆ ಅತ್ಯಂತ ಅಸಭ್ಯವಾಗಿ ಮಾತನಾಡುವುದು ಡಿಎಂಕೆ ರಾಜಕೀಯದ ಭಾಗವೇ ಆಗಿದೆ. ಮಹಿಳೆಯರ ಎದುರಲ್ಲೇ ಇನ್ನೊಬ್ಬ ಮಹಿಳೆಯನ್ನು ಹೀಗಳೆಯುವುದು ಅತ್ಯಂತ ಆಕ್ಷೇಪಾರ್ಹ" ಎಂದು ಆಕ್ರೋಶ ಹೊರಹಾಕಿದ್ದಾರೆ. ತಮ್ಮನ್ನು ತಮಿಳುನಾಡಿನ ಮಹಿಳೆಯರ 'ಮಗ ಮತ್ತು ಸಹೋದರ' ಎಂದು ಕರೆದುಕೊಂಡ ವಿಜಯ್, "ಧಾರಾಪುರಂ ಹಾಗೂ ಸಮಗ್ರ ತಮಿಳುನಾಡಿನ ಜನತೆ ಮುಂಬರುವ ಚುನಾವಣೆಯಲ್ಲಿ ಈ ದ್ವೇಷದ ರಾಜಕೀಯಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಎಚ್ಚರಿಸಿದ್ದಾರೆ.

ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ದೂರು ಸಲ್ಲಿಕೆ!

ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗದ ಈ ವಿವಾದ ಇದೀಗ ಕಾನೂನು ಸಮರಕ್ಕೆ ತಿರುಗಿದೆ. ಟಿವಿಕೆ ಸಚಿವ ನಿರ್ಮಲ್ ಕುಮಾರ್ ಹೆಜ್ಜೆಯಿಟ್ಟು, ಪಕ್ಷದ ಕಾನೂನು ತಂಡದ ಮೂಲಕ ತಮಿಳುನಾಡು ರಾಜ್ಯ ಚುನಾವಣಾ ಆಯೋಗ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿರುವ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಎಂ.ಕೆ. ಸ್ಟಾಲಿನ್ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

ತಮಿಳುನಾಡಿನಲ್ಲಿ ಹೆಚ್ಚಿದ ಉಪಚುಬನಾವಣೆ ಕಾವು!

ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಪ್ರಕಟಣೆಯು ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪವಾಗಿ ಉಳಿಯದೆ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದೆ. ಚುನಾವಣಾ ಆಯೋಗ ಮತ್ತು ಪೊಲೀಸರು ಕೈಗೊಳ್ಳುವ ಮುಂದಿನ ಕ್ರಮ ತಮಿಳುನಾಡು ಉಪಚುನಾವಣಾ ಕಣದಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕಿಸ್ತಾನದಿಂದ LoC ಗಡಿ ದಾಟಿ ಭಾರತಕ್ಕೆ ಬಂದ 17ರ ಹುಡುಗಿ, ಜಮ್ಮು ಪೊಲೀಸರ ವಶಕ್ಕೆ
15 ಜನರ ಮುಂದೆ ಅವಮಾನ… ಮ್ಯಾನೇಜರ್‌ಗೆ ಹೊಡೆಯಲು ಮುಂದಾಗಿದ್ದ ಟೆಕ್ಕಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದು ಹೇಗೆ?