ಡೆಲಿವರಿ ಬಾಯ್ ಆಹಾರ ವಿತರಣೆ ಮಾಡುವಾಗ ಹಲವು ರೋಚಕ ಘಟನೆಗಳು ನಡೆದಿದೆ. ಆಧರೆ ದೀಪಾವಳಿ ಹಬ್ಬದ ನಡುವೆ ಬಿರಿಯಾನಿ ಆರ್ಡರ್ ಮಾಡಿದ ಗ್ರಾಹಕನಿಗೆ ಡೆಲಿವರಿ ಬಾಯ್ ಉಗಿದು ಉಪ್ಪಿನಕಾಯಿ ಹಾಕಿದ ಘಟನೆ ನಡೆದಿದೆ.
ದೆಹಲಿ(ಅ.31) ಸರ್ ನೀವು ತಪ್ಪು ಮಾಡುತ್ತಿದ್ದೀರಿ. ಮಾಂಸಾಹಾರ ದೀಪಾವಳಿ ಬಳಿಕ ಸೇವಿಸಿ, ಇದು ಒಳ್ಳೆಯದಲ್ಲ. ಇದು ಡೆಲಿವರಿ ಬಾಯ್, ಬಿರಿಯಾನಿ ಆರ್ಡರ್ ಮಾಡಿದ ಗ್ರಾಹಕನಿಗೆ ನೀಡಿದ ವಾರ್ನಿಂಗ್. ಆಹಾರ ಆರ್ಡರ್ ಮಾಡಿದ ಗ್ರಾಹಕರು ಡೆಲಿವರಿ ಬಾಯ್‌ಗೆ ತಡವಾದ ಕಾರಣಕ್ಕೆ, ಅಥವಾ ಇನ್ಯಾವುದೋ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸುವುದು, ರಿಪೋರ್ಟ್ ಮಾಡುವ ಘಟನೆಗಳು ನಡೆದಿದೆ. ಆದರೆ ಫುಡ್ ಆರ್ಡರ್ ಮಾಡಿದ ಗ್ರಾಹಕನಿಗೆ ಈ ಆಹಾರ ಆರ್ಡರ್ ಮಾಡಿದ್ದು ಯಾಕೆ ಎಂದು ಡೆಲಿವರಿ ಬಾಯ್ ಆಕ್ರೋಶ ಹೊರಹಾಕಿದ ಘಟನೆ ಇದೇ ಮೊದಲು. ದೆಹಲಿಯಲ್ಲಿ ಬಿರಿಯಾನಿ ಆರ್ಡರ್ ಮಾಡಿ ಇನ್ನೇನು ಖುಷಿಯಿಂದ ತಿನ್ನಲು ಕಾಯುತ್ತಿದ್ದ ಗ್ರಾಹಕನಿಗೆ ಬಿರಿಯಾನಿ ತಿನ್ನಬೇಕೋ ಅಥವಾ ಎಸೆಯಬೇಕು ಅನ್ನೋ ಪರಿಸ್ಥಿತಿ ಎದುರಾಗಿದೆ.
ದೆಹಲಿಯ ಗ್ರಾಹಕನೊಬ್ಬ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಿದ್ದಾನೆ. ಕೆಲ ಹೊತ್ತಲ್ಲೇ ಡೆಲಿವರಿ ಬಾಯ್ ಮನೆಯ ಡೋಲ್ ಬೆಲ್ ರಿಂಗಣಿಸಿದ್ದಾನೆ. ಬಾಗಿಲು ತೆರೆದ ಗ್ರಾಹಕನಿಗೆ ಬಿರಿಯಾನಿ ಪಾರ್ಸೆಲ್ ಹೇಳಿದ್ದೀರಿ. ಒಟಿಪಿ ಹೇಳಿ ಎಂದಿದ್ದಾನೆ. ಮೊಬೈಲ್ ತೆಗೆದು ಒಟಿಪಿ ಹೇಳಿದ ಬೆನ್ನಲ್ಲೇ ಡೆಲಿವರಿ ಬಾಯ್ ಕೋಡ್ ದಾಖಲಿಸಿದ್ದಾನೆ. ಬಳಿಕ ಬಿರಿಯಾನಿ ಪಾರ್ಸೆಲ್‌ನ್ನು ಗ್ರಾಹಕನ ಕೈಗಿಟ್ಟಿದ್ದಾನೆ. ಸಾಮಾನ್ಯವಾಗಿ ಇಷ್ಟು ಮಾಡಿದ ಬಳಿಕ ಡೆಲಿವರಿ ಬಾಯ್ ಕೆಲಸ ಮುಗೀತು.
undefined
ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿ, ಡೆಲಿವರಿಗೆ ಬಂದ ಜೊಮ್ಯಾಟೋ ಸಿಇಒ & ಪತ್ನಿ!
ಆದರೆ ಇಲ್ಲಿ ಹಾಗಾಗಲಿಲ್ಲ. ಪಾರ್ಸೆಲ್ ಕೈಗೆ ನೀಡಿದ ಡೆಲಿವರಿ ಬಾಯ್, ಭಯ್ಯಾ ಇಲ್ಲಿ ಕೇಳಿ ಎಂದು ಡೆಲಿವರಿ ಆಡಿದ ಮಾತುಗಳು ಬಿರಿಯಾನಿ ಆರ್ಡರ್ ಮಾಡಿದ ಗ್ರಾಹನಿಗೆ ಕಪಾಳ ಮೋಕ್ಷ ಮಾಡಿದಂತಿತ್ತು. ಅಣ್ಣಾ ಕೇಳು, ನೀವು ಅತೀ ದೊಡ್ಡ ತಪ್ಪು ಮಾಡುತ್ತೀದ್ದೀರಿ. ನಿಮ್ಮ ಧರ್ಮದಲ್ಲಿ ಇದು ಸರಿಯಲ್ಲ ಎಂದು ಆಕ್ರೋಶ ಭರಿತನಾಗಿ ಹೇಳಿದ್ದಾನೆ. ಅಚ್ಚರಿಗೊಂಡ ಗ್ರಾಹಕ, ಎನಾಯ್ತು ಅಣ್ಣಾ ಎಂದು ಮರು ಪ್ರಶ್ನಿಸಿದ್ದಾನೆ.
ಇದಕ್ಕೆ ಉತ್ತರಿಸಿದ ಡೆಲಿವರಿ ಬಾಯ್, ಈ ಚಿಕನ್, ಮಟನ್ ಎಲ್ಲಾ ದೀಪಾವಳಿ ಹಬ್ಬದ ಬಳಿಕ ಸೇವಿಸಿ. ಅಲ್ಲೀವರೆಗೆ ಪಾವಿತ್ರ್ಯತೆ ಕಾಪಾಡಿಕೊಳ್ಳಿ ಎಂದಿದ್ದಾನೆ. ಇಷ್ಟೇ ಅಲ್ಲ ಸಿಟ್ಟಿನಿಂದ ಡೆಲಿವರಿ ಬಾಯ್ ಒಂದೆರಡು ಕ್ಷಣ ಗ್ರಾಹಕನ ದಿಟ್ಟಿಸಿ ನೋಡಿದ್ದಾನೆ. ಈ ಘಟನೆಯನ್ನು ಗ್ರಾಹಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಆತನ ಮಾತುಗಳನ್ನು ಕೇಳಿದ ಬಳಿಕ ನಾನು ತಪ್ಪಿತಸ್ಥನ ಭಾವದಲ್ಲಿ ಆತನ ಎದರು ನಿಂತಿದ್ದೆ. ಅವನಿಗೆ ಏನು ಹೇಳಲಿ ಎಂದು ತೋಚದಾಯಿತು. ಆತ ಇಷ್ಟೊಂದು ಕಾಳಜಿ ವಹಿಸುತ್ತಿರುವುದೇಕೆ? ಆತನ ನಂಬರ್ ನನ್ನ ಬಳಿ ಇದೆ, ಆತನ ವಿರುದ್ದ ದೂರು ನೀಡಲೇ? ದೂರು ನೀಡಿ ದೊಡ್ಡ ಘಟನೆಯನ್ನಾಗಿ ಮಾಡಬೇಕಾ? ಆದರೆ ದಿನ ಮೂಡ್ ಹಾಳಾಯಿತು. ದಿನವೂ ಹಾಳಾಯಿತು ಎಂದು ಗ್ರಾಹಕ ಬರೆದುಕೊಂಡಿದ್ದಾರೆ.
ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಟೆಕ್ಕಿ, ಬೀದಿಗೆ ಬಿದ್ದು ಬೀದಿಯಿಂದ ಕಟ್ಟಿದ ಜೀವನ ನೆನೆದು ಭಾವುಕ!
ಈ ಪೋಸ್ಟ್‌ಗೆ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನಾವು ಯಾವ ಆಹಾರ ಸೇವಿಸಬೇಕು ಅನ್ನೋದು ನಮ್ಮ ಹಕ್ಕು. ಆತನ ವಿರುದ್ದ ದೂರು ನೀಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ಹಲವರು ಇದೇ ರೀತಿ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ಇತ್ತ ಡೆಲಿವರಿ ಬಾಯ್ ಪರವಾಗಿಯೂ ಕೆಲವರು ಕಮೆಂಟ್ ಮಾಡಿದ್ದಾರೆ. ಹಿಂದೂವಾಗಿ ಒಂದೆರೆಡು ದಿನ ಮಾಂಸಾಹಾರ ಸೇವಿಸುವುದು ಕಷ್ಟವಲ್ಲ. ದೀಪಾವಳಿ ಅಥವಾ ಇನ್ಯಾವುದೇ ಪವಿತ್ರ ಹಬ್ಬಗಳಿಗೆ ಪಾವಿತ್ರ್ಯ ಕಾಪಾಡಿಕೊಂಡರೆ ಮುಂದಿನ ಪೀಳಿಗೆಗೆ ನಮ್ಮ ಹಬ್ಬಗಳ ಮಹತ್ವ ಅರಿವಾಗಲಿದೆ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ದೂರುವುದಕ್ಕಿಂತ ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದು ಸರಿಯಾದ ಕ್ರಮ ಎಂದು ಹಲವರು ಸೂಚಿಸಿದ್ದಾರೆ.
Weird shit happened today
byu/paisaagadimehngaghar indelhi