ದಿಲ್ಲಿ ಸಿಎಂ ಕೇಜ್ರಿವಾಲ್ ಭಯೋತ್ಪಾದಕ ಅನ್ನೋದಕ್ಕೆ ಸಾಕ್ಷ್ಯ ಇದೆ: ಜಾವಡೇಕರ್| ದೆಹಲಿ ವಿಧಾನಸಭಾ ಕದನ ರಂಗು, ಮಾತಿನ ಬಾಣಗಳು ಮತ್ತಷ್ಟು ತೀಕ್ಷ್ಣ
ನವದೆಹಲಿ[ನ.04]: ದೆಹಲಿ ವಿಧಾನಸಭಾ ಕದನ ರಂಗೇರಿದ್ದು, ಮಾತಿನ ಬಾಣಗಳು ಮತ್ತಷ್ಟುತೀಕ್ಷ$್ಣವಾಗಿದೆ. ಬಿಜೆಪಿ ಸಂಸದ ಪರ್ವೇಶ್ ವರ್ಮಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಕರೆದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರೂ ಕೂಡ ಕೇಜ್ರಿವಾಲ್‌ರನ್ನು ಭಯೋತ್ಪಾದಕ ಎಂದು ಜರೆದಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್ ಒಬ್ಬ ಅರಾಜಕತಾವಾದಿ. ಅರಾಜಕತಾವಾದಿಗೂ ಭಯೋತ್ಪಾದಕನಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಪಂಜಾಬ್ ಚುನಾವಣೆ ವೇಳೆ ಪ್ರತ್ಯೇಕ ಖಲಿಸ್ಥಾನ ಚಳುವಳಿಯ ಮುಖ್ಯ ಕಮಾಂಡೋ ಗುರಿಂದರ್ ಸಿಂಗ್ ಅವರ ಮನೆಯಲ್ಲಿ ತಂಗಿ ಉಳಿದುಕೊಂಡಿದ್ದೀರಿ. ಉಗ್ರನ ಮನೆ ಎಂದು ಗೊತ್ತಿದ್ದರೂ ಅಲ್ಲಿ ತಂಗಿದ್ದೀರಿ. ದೇಶ ವಿರೋಧಿ ಘೋಷಣೆ ಕೂಗಿದ ಜೆಎನ್‌ಯೂ ಅವರ ಬೆಂಬಲಕ್ಕೆ ನಿಂತಿದ್ದೀರಿ. ನೀವು ಭಯೋತ್ಪಾದಕ ಎನ್ನುವುದಕ್ಕೆ ಇನ್ನೆಷ್ಟು ಪುರಾವೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಇನ್ನು ಜಾವ್ಡೇಕರ್ ಈ ಆರೋಪಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಷ್ಟೇ