4 ದಿನದಲ್ಲಿ 108 ಪಿಎಫ್‌ಐ ಸದಸ್ಯರ ಸೆರೆ!

By Kannadaprabha NewsFirst Published Feb 4, 2020, 9:07 AM IST
Highlights

4 ದಿನದಲ್ಲಿ 108 ಪಿಎಫ್‌ಐ ಸದಸ್ಯರ ಸೆರೆ| ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿ ಹಿಂಸಾಚಾರ 

ಲಖನೌ[ಫೆ.04]: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಕಳೆದ ನಾಲ್ಕು ದಿನದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸೇರಿದ 108 ಸದಸ್ಯರನ್ನು ಬಂಧಿಸಿದ್ದಾರೆ.

ಲಖನೌದಲ್ಲಿ 14, ಮೇರಠ್‌ನಲ್ಲಿ 20, ವಾರಾಣಸಿಯಲ್ಲಿ 20, ಬಹ್ರೇಚ್‌ನಲ್ಲಿ 16, ಸೀತಾಪುರ್‌ನಲ್ಲಿ 3 ಗಾಜಿಯಾಬಾದ್‌ನಲ್ಲಿ 9, ಮಜಫ್ಫರ್‌ನಗರದಲ್ಲಿ 6 ಶಾಮ್ಲಿಯಲ್ಲಿ 7, ಬಿಜ್ನೋರ್‌ನಲ್ಲಿ 4, ಕಾನ್ಪುರದಲ್ಲಿ 5, ಗೊಂಡಾ, ದಾಪುರ್‌ ಮತ್ತು ಜೌನ್‌ಪುರದಲ್ಲಿ ತಲಾ ಒಬ್ಬ ಪಿಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ.

ಈಗಾಗಲೇ ಪಿಎಫ್‌ಐಗೆ ಸೇರಿದ 25 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಇನ್ನಷ್ಟುಜನರನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ಇಲ್ಲಿಗೇ ನಿಲ್ಲುವುದಿಲ್ಲ. ರಾಜ್ಯದಲ್ಲಿ ಪಿಎಫ್‌ಐ ಅನ್ನು ಬೇರು ಸಮೇತ ಕಿತ್ತುಹಾಕಲಾಗುವುದು. ಈ ಸಂಘಟನೆಯ ಹಣದ ಮೂಲದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಜಿಪಿ ಹಿತೇಶ್‌ ಚಂದ್ರ ಅವಸ್ಥಿ ತಿಳಿಸಿದ್ದಾರೆ.

ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಪಿಎಫ್‌ಐ ಸಂಘಟನೆ ನಿಷೇಧಕ್ಕೆ ಕೋರಿ 2019ರ ಡಿಸೆಂಬರ್‌ನಲ್ಲೇ ಯುಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

click me!