ಮದ್ಯ ಉದ್ಯಮಿ ಪಾಂಟಿ ಚಡ್ಡಾಗೆ ಸೇರಿದ 400 ಕೋಟಿ ಫಾರ್ಮ್‌ಹೌಸ್‌ ನೆಲಸಮ

By Suvarna NewsFirst Published Mar 4, 2024, 10:56 AM IST
Highlights

ಮದ್ಯ ಉದ್ಯಮಿ ಪಾಂಟಿ ಚಡ್ಡಾಗೆ ಸೇರಿದ ಐಷಾರಾಮಿ ಫಾರ್ಮ್‌ಹೌಸ್‌ ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೆಲಸಮ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನವದೆಹಲಿ: ಮದ್ಯ ಉದ್ಯಮಿ ಪಾಂಟಿ ಚಡ್ಡಾಗೆ ಸೇರಿದ ಐಷಾರಾಮಿ ಫಾರ್ಮ್‌ಹೌಸ್‌ ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೆಲಸಮ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಛತ್ತರ್‌ಪುರದಲ್ಲಿರುವ ಸುಮಾರು 400 ಕೋಟಿ ಮೌಲ್ಯದ ಫಾರ್ಮ್‌ಹೌಸನ್ನು ಶುಕ್ರವಾರ ಮತ್ತು ಶನಿವಾರ ನೆಲಸಮ ಮಾಡಲಾಗಿದೆ.  ಸುಮಾರು 10 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಫಾರ್ಮ್‌ಹೌಸ್‌ ಅನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಅನಧಿಕೃತ ಒತ್ತುವರಿ ಮತ್ತು ಅಕ್ರಮವಾಗಿ ನಿರ್ಮಿಸಿರುವ ಸರಕಾರಿ ಭೂಮಿಯನ್ನು ಹಿಂಪಡೆಯುವ ಕಸರತ್ತನ್ನು ಮುಂದುವರಿಸಿರುವ ಡಿಡಿಎ  ಛತ್ತರ್‌ಪುರದಲ್ಲಿ ಸುಮಾರು 10 ಎಕರೆಗಳಷ್ಟು ವಿಸ್ತೀರ್ಣ ಹೊಂದಿದ್ದ ಹೈಪ್ರೊಫೈಲ್ ಲಿಕ್ಕರ್ ಬ್ಯಾರನ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಫಾರ್ಮ್‌ಹೌಸ್ ಅನ್ನು ನೆಲಸಮಗೊಳಿಸಿದೆ ಇದರ ಮೌಲ್ಯ 400 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2012ರಲ್ಲಿ ಪಾಂಟಿ ಚಡ್ಡಾ ಹಾಗೂ ಆತನ ಸೋದರ ಹರ್ದೀಪ್ ಚಡ್ಡಾ ಅವರನ್ನು ಇದೇ ಫಾರ್ಮ್‌ ಹೌಸ್‌ನಲ್ಲಿ ದುಷ್ಕರ್ಮಿಗಳು  ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಈ ಕೊಲೆ ನಡೆದಿತ್ತು. 

Latest Videos

ರೈತರಿಗಿಲ್ಲದ ನೀರು ಫಾರ್ಮ್ ಹೌಸ್‌ಗೆ, ಪಂಪ್‌ ಸೆಟ್‌ ಮೂಲಕ ಕಾವೇರಿ ನೀರು ಕದಿಯುತ್ತಿರುವ ಪ್ರಭಾವಿಗಳು!

ಈ ಆಸ್ತಿ ತೆರವು ಕಾರ್ಯಾಚರಣೆ ಆರಂಭಿಸಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮೊದಲ ದಿನ 5 ಎಕರೆ ಭೂಮಿಯನ್ನು ತೆರವುಗೊಳಿಸಿತ್ತು. ದೆಹಲಿ ಅಭಿವೃದ್ಧಿ ಪ್ರಾಧಿಕಾರವೂ ದೊಡ್ಡ ಮಟ್ಟದಲ್ಲಿ ಅಕ್ರಮ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು, ಬ್ಯಾಂಕ್ವೆಟ್ ಹಾಲ್‌, ಹೊಟೇಲ್, ಗೋದಾಮು, ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡಲಾಗಿದೆ. 

 

click me!