ಬುಲ್ಡೋಜರ್‌ ಬಾಬಾ ಯೋಗಿಗೆ ಟ್ವಿಟ್ಟರ್‌ನಲ್ಲಿ 2.5 ಕೋಟಿ ಹಿಂಬಾಲಕರು: ಈ ದಾಖಲೆ ಬರೆದ ದೇಶದ ಮೊದಲ ಸಿಎಂ

By Kannadaprabha News  |  First Published Jun 15, 2023, 6:28 AM IST

2015ರಲ್ಲಿ ಯೋಗಿ ಆದಿತ್ಯನಾಥ್‌ ತಮ್ಮ ಟ್ವಿಟ್ಟರ್‌ ಖಾತೆ ತೆರೆದಿದ್ದು 8 ವರ್ಷಗಳಲ್ಲಿ 2.5 ಕೋಟಿ ಹಿಂಬಾಲಕರನ್ನು ಪಡೆದಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.


ಲಖನೌ (ಜೂನ್ 15, 2023): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಟ್ವಿಟ್ಟರ್‌ನಲ್ಲಿ 2.5 ಕೋಟಿ ಫಾಲೋವರ್ಸ್‌ಗಳನ್ನು ಪಡೆಯುವ ಮೂಲಕ, ಈ ಪ್ರಮಾಣ ತಲುಪಿದ ಭಾರತದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಪರಾಧಗಳ ವಿರುದ್ಧ ತಮ್ಮ ಕಠಿಣ ನಿಲುವು ಮತ್ತು ನಿರ್ದಾಕ್ಷಿಣ್ಯ ಕ್ರಮಕ್ಕೆ ದೇಶದಲ್ಲೇ ‘ಬುಲ್ಡೋಜರ್‌ ಬಾಬಾ’ ಎಂದು ಹೆಸರಾಗಿರುವ ಯೋಗಿ 2017ರಲ್ಲಿ ಮೊದಲ ಬಾರಿಗೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದರು. 

2015ರಲ್ಲಿ ಯೋಗಿ ಆದಿತ್ಯನಾಥ್‌ ತಮ್ಮ ಟ್ವಿಟ್ಟರ್‌ ಖಾತೆ ತೆರೆದಿದ್ದು 8 ವರ್ಷಗಳಲ್ಲಿ 2.5 ಕೋಟಿ ಹಿಂಬಾಲಕರನ್ನು ಪಡೆದಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮುಖ್ಯಮಂತ್ರಿಗಳ ಜನಪ್ರಿಯತೆ ಗಡಿ ಮೀರಿರುವುದು ಗಮನಾರ್ಹ. ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್‌ಗಳ ವಿಷಯದಲ್ಲಿ ಹಲವಾರು ನಾಯಕರು ಮತ್ತು ಸೆಲೆಬ್ರಿಟಿಗಳು ಇನ್ನೂ ಈ ಗಡಿ ತಲುಪಿಲ್ಲ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಮೋದಿಗೆ ನಿಂದಿಸಿದ ಖರ್ಗೆ ಪುತ್ರನ ಠೇವಣಿ ಕಳೆಯಿರಿ: ತಂದೆ ರೀತಿ ಪ್ರಿಯಾಂಕ್‌ರನ್ನೂ ಸೋಲಿಸಿ: ಯೋಗಿ ಕರೆ

2017 ರಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ತೋರಿಸಿದ ರೀತಿಯಲ್ಲಿ ಅವರ ಜನಪ್ರಿಯತೆಯು ಗುಣಾತ್ಮಕ ಹೆಚ್ಚಳವನ್ನು ಕಂಡಿದೆ.

Twitter ನಲ್ಲಿ 25 ಮಿಲಿಯನ್‌ ಅನುಯಾಯಿಗಳೊಂದಿಗೆ, ಅವರು ಈಗಾಗಲೇ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಆ ಗಡಿ ದಾಟಿದ ಕ್ಲಬ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಂತಹ ಅನುಭವಿ ನಾಯಕರನ್ನು ಸೇರುತ್ತಾರೆ. ಅವರು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಸಹ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂಬುದು ಗಮನಾರ್ಹ. ಪ್ರಧಾನಿ ಮೋದಿ 8 ಕೋಟಿ 90 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ.

ಇದನ್ನೂ ಓದಿ: ‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ

ಇನ್ನು, ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಕೂ ಆ್ಯಪ್‌ನಲ್ಲಿಯೂ ಅವರು ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯ ಮುಖ್ಯಮಂತ್ರಿ ಮತ್ತು ರಾಜಕಾರಣಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ: ಅತೀಕ್ ಅಹ್ಮದ್ ಹತ್ಯೆ ಕೇಸ್‌: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

click me!