ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಪ್ರತೋ ಕುಟುಂಬವೂ 11 ರುಪಾಯಿ ಒಂದು ಕಲ್ಲನ್ನು ಕೊಡುಗೆಯಾಗಿ ನೀಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಲಕ್ನೋ [ಡಿ.14]: ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕಾಗಿ ಪ್ರತೀ ಕುಟುಂಬವೂ ಸಹ 11 ರುಪಾಯಿ ಹಾಗೂ ಒಂದು ಕಲ್ಲನ್ನು ಕೊಡುಗೆಯಾಗಿ ನೀಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಶೀಘ್ರದಲ್ಲೇ ಅದ್ಧೂರಿಯಾದ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಪ್ರತೀ ಕುಟುಂಬದ ಕೊಡುಗೆ ಇರಬೇಕು ಎಂದು ಜಾರ್ಖಂಡ್ ನ ಬಗೋದರ್ ಪ್ರದೇಶದಲ್ಲಿನ ಚುನಾವಣಾ ಪ್ರಚಾರದ ವೇಳೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ 500 ವರ್ಷದ ವಿವಾದ ಬಗೆಹರಿದಿದೆ. ಆದರೆ ಈ ವಿವಾದಕ್ಕೆ ಕಾಂಗ್ರೆಸ್, ಆರ್ ಜೆಡಿ, ಸಿಪಿಐ ಪಕ್ಷಗಳು ಈ ಈ ವಿವಾಹ ಬಗೆಹರಿಸಲು ಯತ್ನಿಸಿರಲಿಲ್ಲ ಎಂದು ಆದಿತ್ಯನಾಥ್ ಹೇಳಿದರು.
ಅಯೋಧ್ಯೆ: ಮರುಪರೀಶಿಲನೆ ಅರ್ಜಿ ಸಲ್ಲಿಸಿದವರಿಗೆ ಮುಖಭಂಗ, ಎಲ್ಲ ಅರ್ಜಿ ವಜಾ..
ನಾನು ರಾಮನ ಊರಿಂದ ಬಂದಿದ್ದೇನೆ. ಆತನ ಆಡಳಿತ ಅಳವಡಿಸಿಕೊಂಡ ನಾಡು ನಮ್ಮದು, ಇದನ್ನು ರಾಮರಾಜ್ಯ ಎನ್ನುತ್ತಾರೆ. ಯಾವುದೇ ರೀತಿಯ ಪೂರ್ವಾಗ್ರಹವಿಲ್ಲದೇ ಬಿಜೆಪಿಗೆ ಮತ ನೀಡಿ. ಪ್ರಧಾನಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಸಾಥ್ ನೀಡಿ ಎಂದು ಆದಿತ್ಯನಾಥ್ ಕರೆ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಆದಿತ್ಯನಾಥ್ ಪ್ರಧಾನಿ ಅವರ ನೂತನ ಕಾಯ್ದೆ ಸಿಎಬಿ ವಿರುದ್ಧ ಇಂತಹ ಪಕ್ಷಗಳು ಮಾತ್ರ ಪ್ರತಿಭಟಿಸು ತ್ತಿವೆ ಎಂದರು. ಪಾಕಿಸ್ತಾನದ ಪರವಾಗಿ ಕಾಂಗ್ರೆಸ್ ಮಾತಾಡುತ್ತಿದೆ ಎಂದರು.