ಕೇಂದ್ರದ ನೀತಿ ವಿರೋಧಿಸಿ ಇಂದು ಭಾರತ್‌ ಬಚಾವೋ ಪ್ರತಿಭಟನೆ

By Kannadaprabha NewsFirst Published Dec 14, 2019, 11:06 AM IST
Highlights

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ದೆಹಲಿ, ವಿಶ್ವದ ಇತರೆ 10ಕ್ಕೂ ಹೆಚ್ಚು ದೇಶಗಳಲ್ಲಿ ಕಾಂಗ್ರೆಸ್‌ನಿಂದ ಹೋರಾಟ | ಆರ್ಥಿಕತೆ ಕುಸಿತ, ಬೆಲೆ ಏರಿಕೆ, ನಿರುದ್ಯೋಗ ಪ್ರಮಾಣ ವಿರೋಧಿಸಿ ಪ್ರತಿಭಟನೆ

ನವದೆಹಲಿ (ಡಿ. 14): ಕೇಂದ್ರ ಸರ್ಕಾರದ ವಿವಿಧ ನೀತಿಗಳನ್ನು ವಿರೋಧಿಸಿ ಶನಿವಾರ ದೇಶ- ವಿದೇಶಗಳಲ್ಲಿ ಬೃಹತ್‌ ಪ್ರತಿಭಟನೆಗೆ ಕಾಂಗ್ರೆಸ್‌ ನಿರ್ಧರಿಸಿದೆ. ಈ ಹಿಂದೆ 3-4 ಬಾರಿ ದಿನಾಂಕ ನಿಗದಿ ಮಾಡಿ ಮುಂದೂಡಲ್ಪಟ್ಟಿದ್ದ ಪ್ರತಿಭಟನೆಯನ್ನು ಶನಿವಾರ ದೊಡ್ಡ ಮಟ್ಟದಲ್ಲಿ ನಡೆಸಲು ಪಕ್ಷ ಆಯೋಜಿಸಿದೆ.

ಅಕ್ರಮ ವಲಸಿಗರಿಗೆಲ್ಲ ಆಶ್ರಯ ನೀಡುತ್ತಾ ಹೋಗಲು ಭಾರತವೇನು ಧರ್ಮಛತ್ರವೇ?

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆಯುವ ಬೃಹತ್‌ ಭಾರತ್‌ ಬಚಾವೋ ಪ್ರತಿಭಟನೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಬಹುತೇಕ ಎಲ್ಲಾ ನಾಯಕರು ಭಾಗಿಯಾಗುವ ನಿರೀಕ್ಷೆ ಇದೆ.

ಭಾರತಕ್ಕೆ ದಾಖಲೆ ವಿದೇಶೀ ಬಂಡವಾಳ; ಆರ್ಥಿಕ ಪ್ರಗತಿಯ ಸಂಕೇತವಿದು!

ಇನ್ನು ಅಮೆರಿಕ, ಬ್ರಿಟನ್‌, ಸೌದಿ ಅರೇಬಿಯಾ, ಆಸ್ಪ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿನ ಭಾರತೀಯ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ನ ಸಾಗರೋತ್ತರ ವಿಭಾಗ ನಿರ್ಧರಿಸಿದೆ. ಈ ಪ್ರತಿಭಟನೆ ವೇಳೆ ರಾಯಭಾರ ಕಚೇರಿಗೆ ಮುತ್ತಿಗೆ ಹಾಕುವ ಯತ್ನವನ್ನೂ ಪಕ್ಷದ ನಾಯಕರು, ಕಾರ್ಯಕರ್ತರು ಮಾಡಲಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು, ಬೆಲೆ ಏರಿಕೆ, ರೈತರ ಸಂಕಷ್ಟ, ನಿರುದ್ಯೋಗ ಪ್ರಮಾಣ ಏರಿಕೆ, ಸರ್ಕಾರದ ವಿಭಜನಕಾರಿ ನೀತಿ ವಿರೋಧಿಸಿ ಈ ಪ್ರತಿಭಟನೆಗೆ ಪಕ್ಷ ನಿರ್ಧರಿಸಿದೆ.

click me!