ನಾನು ಹೇಳುವುದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ, ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇಂಡಿಯಾ ಮೈತ್ರಿಕೂಟ ಸೋಲಿಸಲಿದೆ ಎಂದು ರಾಹುಲ್ ಗಾಂಧಿ ಬಿಜೆಪಿಗೆ ಸವಾಲೆಸೆದಿದ್ದಾರೆ.
ನವದೆಹಲಿ: ನಾನು ಹೇಳುವುದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ, ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇಂಡಿಯಾ ಮೈತ್ರಿಕೂಟ ಸೋಲಿಸಲಿದೆ ಎಂದು ರಾಹುಲ್ ಗಾಂಧಿ ಬಿಜೆಪಿಗೆ ಸವಾಲೆಸೆದಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ತಮ್ಮ ಮೊದಲ ಭಾಷಣ ಮಾಡಿದ ರಾಹುಲ್ ಗಾಂಧಿ ಆಡಳಿತರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಹುಲ್ ಪದೇ ಪದೇ ಗುಜರಾತ್‌ಗೆ ಹೋಗಿ ಏನು ಮಾಡುತ್ತಾರೆ ಎಂಬ ಬಿಜೆಪಿಯ ವ್ಯಂಗ್ಯಕ್ಕೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಬರೆದಿಟ್ಟುಕೊಳ್ಳಿ ಮುಂದಿನ ಗುಜರಾತ್ ಚುನಾವಣೆಯಲ್ಲಿ ಇಂಡಿಯಾ ಕೂಟ ಕಾಂಗ್ರೆಸ್‌ನ್ನು ಸೋಲಿಸಲಿದೆ ಎಂದರು. ಅಲ್ಲದೇ ಇಂಡಿಯಾ ಕೂಟ ಎಂಬ ಐಡಿಯಾದ ಮೇಲೆ ವ್ಯವಸ್ಥಿತ ಹಾಗೂ ದೊಡ್ಡ ಮಟ್ಟದಲ್ಲಿ ದಾಳಿ ನಡೆಯುತ್ತಿದೆ ಎಂದು ರಾಹುಲ್ ಇದೇ ವೇಳೆ ದೂರಿದರು.
ರಾಹುಲ್ ಹಿಂದುಗಳನ್ನು ನಿಂದಿಸಲಾರ: ಸಹೋದರನ ಪರ ಪ್ರಿಯಾಂಕ ಬ್ಯಾಟಿಂಗ್
ನವದೆಹಲಿ: ‘ರಾಹುಲ್ ಗಾಂಧಿ ಹಿಂದೂಗಳನ್ನು ಹಿಂಸಾಕೋರರು ಎಂದಿದ್ದಾರೆ’ ಎಂಬ ಬಿಜೆಪಿ ಆರೋಪವನ್ನು ತಳ್ಳಿಹಾಕಿರುವ ಸೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ರಾಹುಲ್ ಎಂದೂ ಹಿಂದುಗಳನ್ನು ನಿಂದಿಸಲಾರ. ಅದು ಬಿಜೆಪಿ ಹಾಗೂ ಅದರ ನಾಯಕರ ಬಗ್ಗೆ ಆಡಿದ ಮಾತಾಗಿತ್ತು. ಇದನ್ನು ರಾಹುಲ್ ಖುದ್ದಾಗಿ ಹೇಳಿದ್ದಾರೆ’ ಎಂದು ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ಸಿಗರಿಗೆ ಸರಳ ಟೆಕ್ನಾಲಾಜಿಯ ಬಗ್ಗೆಯೂ ಗೊತ್ತಿಲ್ಲವೇ? ಸದನದ ಮೈಕ್ ಆಟೋಮೇಟಿಕ್: ರಾಜ್ಯಸಭಾಧ್ಯಕ್ಷ
ತಮ್ಮನ್ನು ತಾವು ಹಿಂದೂ ನಾಯಕರು ಎನ್ನುವ ಕೆಲವರು ಹಿಂಸೆ ಹಾಗೂ ದ್ವೇಷದಲ್ಲಿ ತೊಡಗಿದ್ದಾರೆ ಎಂಬ ರಾಹುಲ್ ಹೇಳಿಕೆಗೆ ಆಡಳಿತ ಪಕ್ಷದಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕ್ಷಮೆ ಕೇಳಿವಂತೆ ಗೃಹ ಮಂತ್ರಿ ಅಮಿತ್ ಶಾ ಆಗ್ರಹಿಸಿದ್ದರು.
ಪ್ರಮಾಣ ವಚನಕ್ಕೆ ನಿಮ್ಮ ಸ್ವಂತ ಪದಗಳನ್ನು ಸೇರಿಸಬೇಡಿ: ಬಿರ್ಲಾ
ನವದೆಹಲಿ: ಪ್ರಮಾಣ ವಚನ ಸ್ವೀಕರಿಸುವಾಗ ಅದಕ್ಕೆ ತಮ್ಮ ಇಚ್ಛೆಯಂತೆ ಯಾವುದೇ ಪದವನ್ನು ಸೇರಿಸಬಾರದು. ಸೇರಿಸಿದರೆ ಸಂವಿಧಾನದ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಸದಸದರಿಗೆ ಸೂಚಿಸಿದ್ದಾರೆ.
18ನೇ ಲೊಕಸಭೆಯ ಸದಸ್ಯರಾಗಿ ಪ್ರಮಾಣ ಸ್ವೀಕರಿಸುವಾಗ ಕೆಲ ಸದಸ್ಯರು ಜೈ ಸಂವಿಧಾನ, ಜೈ ಹಿಂದೂ ರಾಷ್ಟ್ರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ್ದು ವಿವಾದವಾಗಿ ಪಕ್ಷಗಳ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು. ಇದನ್ನು ಪರಿಶೀಲಿಸಲು ಎಲ್ಲಾ ಪ್ರಮುಖ ಪಕ್ಷದ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದಿರುವ ಸ್ಪೀಕರ್, ಇದು ಪುನರಾವರ್ತನೆಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಲು ಇನ್ನು ಮುಂದೆ ಸಂವಿಧಾನದ IIIನೇ ಅನುಸೂಚಿಯಲ್ಲಿ ಉಲ್ಲೇಖಿಸಲಾಗಿರುವಂತೆಯೇ ಪ್ರಮಾಣ ಸ್ವೀಕರಿಸಬೇಕು ಎಂದು ಸೂಚಿಸಿದ್ದಾರೆ.
ಅಗ್ನಿವೀರರು ಯೂಸ್ ಅಂಡ್ ಥ್ರೋ ಕಾರ್ಮಿಕರು: ಒಬ್ಬ ಯೋಧನಿಗೆ ಪಿಂಚಣಿ, ಇನ್ನೊಬ್ಬನಿಗೆ ಇಲ್ಲ: ರಾಹುಲ್