
ನವದೆಹಲಿ : ಎಲ್ಲಾ ಎಲೆಕ್ಟ್ರಿಕ್ ಉಪಕರಣಗಳ ತಯಾರಿಯಲ್ಲಿ ಅತ್ಯಗತ್ಯವಾಗಿರುವ ಸಿಲಿಕಾನ್ ಬಳಸದ ವಿಶ್ವದ ಮೊಟ್ಟಮೊದಲ ಕಂಪ್ಯೂಟರ್ ಅನ್ನು ಸಿದ್ಧಪಡಿಸಲಾಗಿದೆ. ಈ ಸಾಧನೆಯನ್ನು, ತಂತ್ರಜ್ಞಾನ ಲೋಕದ ಬಹುದೊಡ್ಡ ಮೈಲುಗಲ್ಲು ಎಂದೇ ಬಣ್ಣಿಸಲಾಗುತ್ತಿದೆ.
ಎಲೆಕ್ಟ್ರಿಕ್ ಉಪಕರಣಗಳನ್ನು ಗಾತ್ರದಲ್ಲಿ ಸಣ್ಣ ಮತ್ತು ಕೆಲಸದಲ್ಲಿ ಚುರುಕುಗೊಳಿಸಲು ಸಿಲಿಕಾನ್ ಬಳಸಲಾಗುತ್ತಿದ್ದು, ಇದು ಕಳೆದರ್ಧ ಶತಮಾನದಲ್ಲಿ ಕ್ರಾಂತಿಯನ್ನೇ ಮಾಡಿತ್ತು. ಆದರೆ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ನ್ಯಾನೋಫ್ಯಾಬ್ರಿಕೇಷನ್ ಘಟಕವು, ಸಿಲಿಕಾನ್ ರಹಿತ ಕಾಂಪ್ಲಿಮೆಂಟರಿ ಮೆಟಲ್-ಆಕ್ಸೈಡ್ ಸೆಮಿಕಂಡಕ್ಟರ್ (ಸಿಎಂಒಎಸ್) ಬಳಸಿ ಕಂಪ್ಯೂಟರ್ ತಯಾರಿಸಿದೆ.
ಈ ಮೂಲಕ ಸಿಲಿಕಾನ್‌ಗೆ ಪರ್ಯಾಯ ವಸ್ತುವನ್ನು ಕಂಡುಹಿಡಿಯಲಾಗಿದೆ. ಸಿಲಿಕಾನ್ ರಹಿತ ಕಂಪ್ಯೂಟರ್ ಆವಿಷ್ಕಾರದ ಪ್ರಬಂಧದದ ಮುಖ್ಯ ಸಂಶೋಧಕರಾಗಿರುವ ಸಪ್ತರ್ಷಿ ದಾಸ್ ಮಾತನಾಡಿ, ‘ಸೆನ್ಸಾರ್ ಮತ್ತು ಮೆಮೋರಿ ಸಾಧನಗಳಲ್ಲಿ ಬಳಕೆಯಾಗುವ 2ಡಿ ವಸ್ತುಗಳನ್ನು ಬಳಸಿ ಸಿಲಿಕಾನ್ ವೃದ್ಧಿಸಲು ಯತ್ನಿಸುತ್ತೇವೆ. ಮುಂದೊಂದು ದಿನ ಸಿಲಿಕಾನ್ ಪೂರ್ಣಪ್ರಮಾಣದ ಪರ್ಯಾಯವನ್ನು ಹುಡುಕುತ್ತೇವೆ’ ಎಂದರು.
ಸಿಲಿಕಾನ್‌ಗೆ ಪರ್ಯಾಯವೇಕೆ?:
ವಿದ್ಯುತ್ ವಾಹಕವಾಗಿರುವ ಸಿಲಿಕಾನ್‌ಅನ್ನು 1947ರಿಂದ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾಗುತ್ತಿದೆ. ಅನ್ಯ ಸೆಮಿಕಂಡಕ್ಟರ್‌ಗಳಿಗೆ ಹೋಲಿಸಿದರೆ ಇದು ಕೊಂಚ ಅಗ್ಗವೂ ಹೌದು. ಆದರೆ ಕಾಲ ಕಳೆದಂತೆ ಎಲ್ಲಾ ಸಾಧನಗಳ ಗಾತ್ರವನ್ನು ಕ್ಷೀಣಿಸುವತ್ತ ಗಮನ ಹರಿಸಲಾಗುತ್ತಿದೆ. ಹೀಗಿರುವಾಗ ಸಿಲಿಕಾನ್ ಬಳಕೆ ಅಸಾಧ್ಯವಾಗುತ್ತದೆ. ಕಾರಣ, ಸಿಲಿಕಾನ್‌ಅನ್ನು ಸಣ್ಣ ಮಾಡುವುದು ಸಾಧ್ಯವಿಲ್ಲ. ಆದ್ದರಿಂದಲೇ ಇದಕ್ಕೆ ಪರ್ಯಾಯವಾಗಿ ಕಾಗದದಷ್ಟು ತೆಳುವಾಗಿರುವ ಮತ್ತೊಂದು 2ಡಿ ವಸ್ತುವನ್ನು (ಸಿಎಂಒಎಸ್) ಆವಿಷ್ಕರಿಸಲಾಗಿದೆ. ಇದರ ಬಳಕೆ ವ್ಯಾಪಕವಾದಲ್ಲಿ, ವಸ್ತುಗಳ ಗಾತ್ರ ಸಣ್ಣದಾಗುವುದ ಜತೆಗೆ, ಸಿಲಿಕಾನ್ ಅಗತ್ಯತೆಯೂ ಇಲ್ಲವಾಗುತ್ತದೆ.
ಎಲೆಕ್ಟ್ರಿಕ್ ಉಪಕರಣಗಳಲ್ಲಿ ಬಳಕೆಯಾಗುವ ಸಿಲಿಕಾನ್
ಪರ್ಯಾಯವಾಗಿ ಕಾಗದದಷ್ಟು ತೆಳ್ಳಗಿನ ಸಿಎಂಒಎಸ್ ಶೋಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ