World Sparrow Day 2022: ಬೆಚ್ಚಗಿನ ಅನುಭವ ನೀಡೋ ಗೂಡು, ಮನಕ್ಕೆ ಮುದ ನೀಡೋ ಗುಬ್ಬಚ್ಚಿ!

By Suvarna NewsFirst Published Mar 20, 2021, 5:22 PM IST
Highlights

ಹಳ್ಳಿ ಮನೆಗಳಲ್ಲಿ  ಎಲ್ಲಿ ನೋಡಿದರೆ ಅಲ್ಲಿ ಗುಬ್ಬಿ ಮರಿಗಳು ಸಿಗುತ್ತಿದ್ದವು. ಗೂಡ ರಾರಾಜಿಸುತ್ತಿದ್ದು. ಜೀವನದ ಅವಿಭಾಜ್ಯ ಅಂಗವೇ ಆಗಿದ್ದ ಈ ಪುಟ್ಟ ಜೀವಿಗಳು ಹೋಗಿದ್ದಾದರೂ ಎಲ್ಲಿಗೆ? ಮನಸ್ಸಿಗೆ ಮುದ ನೀಡುತ್ತಿದ್ದ ಗುಬ್ಬಿಗಳ ದಿನ ಇವತ್ತು!

ಗುಬ್ಬಚ್ಚಿಗಳು ಜೀವನದ ಭಾಗವೇ ಆಗಿದ್ದವು ಒಂದು ಕಾಲದಲ್ಲಿ ಮನೆಯಲ್ಲಿ ಕೇಳುತ್ತಿದ್ದ ಕಲರವದ (Chirping) ಸದ್ದು ನಿಂತಂತೆ ಭಾಸವಾಗುತ್ತಿದೆ. ಜೀವನವೇ (Life) ಬರಡು ಎನಿಸುವಷ್ಟು ಈ ಪುಟ್ಟ ಜೀವಿಯೊಂದಿಗೆ ಅತ್ಯಾಪ್ತ ಒಲವು ತೋರಿಸುದ್ದ ಮಂದಿಗೀಗಿ ಅನಿಸೋದು ಸಹಜ. ಅದೇ ಖುಷಿ ಈ ಪಕ್ಷಿಗಳನ್ನು (Birds) ನೋಡಿದರು. ಗದ್ದೆಯ ಬದುವಿನ ಮರದಲ್ಲಿ (Tress) ಕಟ್ಟಿ ಕೊಂಡ ಗೂಡುಗಳು ಮಕ್ಕಳನ್ನು ಎಲ್ಲಿಲ್ಲದಂತೆ ಕೈ ಬೀಸಿ ಕರೆಯುತ್ತಿದ್ದವು. ಆ ಗೂಡನ್ನು ಒಂದೆರಡು ನಿಮಿಷಗಳ ನೋಡಿದರ ಸಾಕಿತ್ತು, ಅದನ್ನು ಹೆಣೆಯಲ್ಲಿ ಶ್ರಮಿಸುವ ಈ ಪಕ್ಷಿ, ಸ್ಕಿಲ್ಸ್ (Skills) ಎಲ್ಲವೂ ಅರಿವಿಗೆ ಬಂದು ನೈಸರ್ಗಿಕ ಅಚ್ಚರಿಗೆ (Nature) ಎಂಥವನೇ ಆದರೂ ಮೂಕ ವಿಸ್ಮಿತನಾಗೋದು ಗ್ಯಾರಂಟಿ. 

ಎಲ್ಲರಿಗೂ ಒಂದು ದಿನ ಇರೋ ಹಾಗೆ ಗುಬ್ಬಚ್ಚಿಗಳಿಗೂ ಒಂದು ದಿನವಿದೆ. ಮಾರ್ಚ್ 20ನ್ನು ವಿಶ್ವ ಗುಬ್ಬಚ್ಚಿ (World Sparrow Day) ದಿನವಾಗಿ ಆಚರಿಸಲಾಗುತ್ತದೆ. ಸುಮಧುರ ಸ್ವರ ಮಾಡುವ ಈ ಹಕ್ಕಿಗಳನ್ನು ಮನುಷ್ಯ ಸ್ನೇಹಿ ಎಂದೇ ಹೇಳಲಾಗುತ್ತದೆ. ಒಂದು ಸಮಯದಲ್ಲಿ ಈ ಗುಬ್ಬಚ್ಚಿಗಳು ಎಲ್ಲೆಲ್ಲೂ ಕಾಣಸಿಗುತ್ತಿದ್ದವು. ಅಂಗಡಿ, ಕಟ್ಟಡ, ಮನೆ, ವಠಾರ ಎಲ್ಲ ಕಡೆಗಳಲ್ಲಿಯೂ ಈ ಗುಬ್ಬಚ್ಚಿಗಳಿರುತ್ತಿದ್ದವು. ಆದರೆ ಈಗೀಗ ಈ ಪಕ್ಷಿಗಳನ್ನು ಕಾಣುವುದೇ ಅಪರೂಪ, ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಹಕ್ಕಿಗಳು ಮಾಯವಾಗಿವೆ.

ತಲೆ ಮೇಲೆ ಹಕ್ಕಿ ಪಿಕ್ಕ ಮಾಡಿದರೆ ಶುಭವೇ?

ಉಳಿದ ಹಕ್ಕಿಗಳ ಸಂತತಿ ನಶಿಸುವುದಕ್ಕಿಂತ ವೇಗವಾಗಿ ಈ ಹಕ್ಕಿಗಳ ಸಂತತಿ ನಶಿಸುತ್ತಾ ಬಂದಿದೆ. ಈ ಪುಟ್ಟ ಗುಬ್ಬಚ್ಚಿಗಳಿಗೆ ವಾಸಿಸೋ ಗೂಡಿಲ್ಲ, ಮೊಬೈಲ್ ಟವರ್ ರೇಡಿಯೇಷನ್ (Mobile Tower Radiation) ಈ ಹಕ್ಕಿಯನ್ನು ಬದುಕಲು ಬಿಡುತ್ತಿಲ್ಲ. ಸ್ಥಳೀಯ ಸಸ್ಯ ಸಂಕುಲ ನಾಶ, ಕ್ರಿಮಿ ನಾಶಕಗಳ ಬಳಕೆ ಇವೆಲ್ಲವೂ ಗುಬ್ಬಚ್ಚಿಗಳ ಇರುವಿಕೆಗೆ ಅಪಾಯವನ್ನು ತಂದೊಡ್ಡಿದೆ. ಆಧುನಿಕ ಮೂಲಸೌಕರ್ಯಗಳಿಂದ (Modern Facilities) ಬಹುತೇಕ ಎಲ್ಲಾ ಕಟ್ಟಡಗಳನ್ನು ಬದಲಾಯಿಸುವುದರಿಂದ, ಒಂದು ಕಾಲದಲ್ಲಿ ಗೂಡುಕಟ್ಟುವ ತಾಣಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಕಟ್ಟಡಗಳು ಗುಬ್ಬಚ್ಚಿಗಳಿಗೆ ಲಭ್ಯವಿಲ್ಲ.

  1. ಪಕ್ಷಿಗಳು ಕಾಂತೀಯ ವಿಕಿರಣದಿಂದ ತೊಂದರೆಗೊಳಗಾಗುತ್ತವೆ. ನಗರಗಳಲ್ಲಿ ಹೆಚ್ಚುತ್ತಿರುವ ಸೆಲ್ ಫೋನ್ ಟವರ್‌ಗಳು (Mobile Towers) ಪಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ.
  2. ಪಾರಿವಾಳಗಳು ಮತ್ತು ಕಾಗೆಗಳಂತಹ (Crow) ಇತರ ದೊಡ್ಡ ಪಕ್ಷಿಗಳ ಉಪಸ್ಥಿತಿಯು ಗುಬ್ಬಚ್ಚಿಗಳನ್ನು ದುರ್ಬಲಗೊಳಿಸುತ್ತದೆ. ತಮ್ಮ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದರ ಹೊರತಾಗಿ, ದೊಡ್ಡ ಪಕ್ಷಿಗಳು ಧಾನ್ಯಗಳು ಮತ್ತು ಹುಳುಗಳು (Insects) ಸೇರಿದಂತೆ ಗುಬ್ಬಚ್ಚಿಗಳ ಆಹಾರವನ್ನು ಸಹ ಕಸಿಯುತ್ತವೆ.
  3. ಹವಾನಿಯಂತ್ರಣ (Air Condition) ಮತ್ತು ಪ್ಲಾಸ್ಟಿಕ್ ಪ್ಯಾಕೇಜಿಂಗ್  (Plastic Packaging) ಹೊಂದಿರುವ ಆಧುನಿಕ ದಿನಸಿ ಅಂಗಡಿಗಳು ಆಹಾರಕ್ಕಾಗಿ ಧಾನ್ಯಗಳನ್ನು ಹುಡುಕುವ ಯಾವುದೇ ಅವಕಾಶವನ್ನು ನೀಡುವುದಿಲ್ಲ.

    ಹಕ್ಕಿಗಳ ಉಳಿವಿಗಾಗಿ 2 ಲಕ್ಷಕ್ಕೂ ಹೆಚ್ಚು ಗೂಡು ಕಟ್ಟಿದ ನೆಸ್ಟ್ ಮ್ಯಾನ್
     
  4. ಪ್ರಪಂಚದಾದ್ಯಂತ ಅರಣ್ಯನಾಶದ (Deforestation) ಹೆಚ್ಚಳವು ಹೆಚ್ಚುತ್ತಿದೆ ಮತ್ತು ಗುಬ್ಬಚ್ಚಿಗಳು ಮತ್ತು ಇತರ ಪಕ್ಷಿಗಳು ಆವಾಸಸ್ಥಾನದ ನಷ್ಟವನ್ನು ಎದುರಿಸುತ್ತಿರುವುದಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ.

    "
     
  5. ವಿಶ್ವ ಗುಬ್ಬಚ್ಚಿ ದಿನಕ್ಕೆ ಗಣ್ಯರು ಶುಭಾಶಯ ಕೋರಿದ್ದು ಹೀಗೆ. 

"ವಿಶ್ವ ಗುಬ್ಬಚ್ಚಿ ದಿನ "

ಮನೆಯಂಗಳದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನ ಜಾಗೃತಿ ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ದಿನವನ್ನು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ. pic.twitter.com/ClrOZUGfig

— Govind M Karjol (@GovindKarjol)
 

AIR News ಟ್ವೀಟ್ ಮಾಡಿ ಶುಭ ಹಾರೈಸಿದ್ದು ಹೀಗೆ
ಇಂದು ವಿಶ್ವ ಗುಬ್ಬಚ್ಚಿ ದಿನ. ಪಕ್ಷಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತದೆ. ಇಂದು ಗುಬ್ಬಚ್ಚಿ ಸಂತತಿ ಅಳಿವಿನಂಚಿನಲ್ಲಿದ್ದು, ಅವುಗಳ ಉಳಿವಿಗೆ ಪ್ರಯತ್ನಿಸಬೇಕಿದೆ. ಮೊದಲ ವಿಶ್ವ ಗುಬ್ಬಚ್ಚಿ ದಿನವನ್ನು ೨೦೧೦ರಲ್ಲಿ ಆಚರಿಸಲಾಯಿತು.

click me!