ಕೊರೋನಾ ನಿವಾರಣೆಗೆ ಪ್ರಾಣಾಯಾಮ, ಯೋಗ ಮತ್ತು ಗಾಯತ್ರಿ ಮಂತ್ರ/ ಅಧ್ಯಯನಕ್ಕೆ ಮುಂದಾದ ವೈದ್ಯರ ತಂಡ/ ಇಪ್ಪತ್ತು ರೋಗಿಗಳ ಮೇಲೆ ಸಂಶೋಧನೆ/ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಳವಾಗಲಿದೆ?
ನವದೆಹಲಿ (ಮಾ. 20): ಕೊರೋನಾ ವೈರಸ್‌ನಿಂದ ಉಂಟಾಗುವ ಆತಂಕ ನಿವಾರಣೆಗೆ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡಬೇಕು ಎಂದು ಹಾರ್ವರ್ಡ್ ವಿವಿ ಸಂಶೋಧನೆ ಹಿಂದೆ ಹೇಳಿತ್ತು. ಒಂದು ವರ್ಷದ ನಂತರ ಭಾರತದಲ್ಲಿ ಪ್ರಯೋಗಾತ್ಮಕ ಅಧ್ಯಯನ ಆರಂಭವಾಗಿದೆ.
ಯೋಗ, ಗಾಯತ್ರಿ ಮಂತ್ರವನ್ನು ಪಠಿಸುವುದು ಮತ್ತು ಪ್ರಾಣಾಯಾಮ ಮಾಡುವುದರಿಂದ ಸಾಮಾನ್ಯ ಚಿಕಿತ್ಸೆಯ ವಿಧಾನಗಳ ಜೊತೆಗೆ ಕೊರೊನಾವೈರಸ್ ಅನ್ನು ಗುಣಪಡಿಸಬಹುದೇ? ಎಂಬ ಬಗ್ಗೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಶೋಧನೆ ನಡೆಸುತ್ತಿದೆ. ಈ ಅಧ್ಯಯನವನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ನಿಯೋಜಿಸಿದೆ.
undefined
ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!
ಯೋಗ ಮತ್ತು ಪ್ರಾಣಾಯಾಮ ಕೊರೋನಾದಿಂದ ಅತಿ ಬೇಗ ರಿಕವರಿಯಾಗಲು ನೆರವು ನೀಡುತ್ತದೆ ಎಂಬುದು ಅಧ್ಯಯನಕ್ಕೆ ಆಧಾರ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಟ್ರಯಲ್ ಆರಂಭಿಸಿದೆ. 20 ರೋಗಿಗಳನ್ನು ಗುರುತಿಸಿಕೊಂಡು ಅದರಲ್ಲಿ ಎರಡು ತಂಡ ಮಾಡಲಾಗಿದೆ. ಒಂದು ತಂಡಕ್ಕೆ ಚಿಕಿತ್ಸೆ ಇನ್ನೊಂದು ತಂಡಕ್ಕೆ ಚಿಕಿತ್ಸೆ ಜತೆಗೆ ಯೋಗ ಮತ್ತು ಪ್ರಾಣಾಯಮ ನೀಡಲು ಮುಂದಾಗಿದ್ದು 14 ದಿನಗಳ ಚಿಕಿತ್ಸಾ ಕ್ರಮ ಅನುಸರಿಲಿದೆ.
ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಅವಧಿಯ ಪ್ರಾಣಾಯಾಮ ಮಾಡಿಸಲಾಗುವುದು. ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಳವಾಗುತ್ತಿದೆ ಎಂಬುದನ್ನು ಲೆಕ್ಕ ಹಾಕಲಾಗುವುದು ಎಂದು ಏಮ್ಸ್ ಸಹಾಯಕ ಪ್ರಾಧ್ಯಾಪಕಿ ಡಾ. ರುಚಿ ದುವಾ ತಿಳಿಸಿದ್ದಾರೆ.
ಸದ್ಯ ಹಿಂದೂ ಧರ್ಮದಲ್ಲಿನ ಪ್ರಮುಖ ಮಂತ್ರಗಳಲ್ಲಿ ಒಂದಾದ ಗಾಯತ್ರಿ ಮಂತ್ರ ಹಾಗೂ ಪ್ರಾಣಾಯಾಮದಿಂದ ಕೊರೋನಾ ವೈರಸ್ ಅನ್ನು ತಡೆಗಟ್ಟುವುದರ ಬಗ್ಗೆ ಅಧ್ಯಯನ ಆರಂಭಿಸಿರುವ ವೈದರ ತಂಡ ಮುಂದೆ ಯಾವ ಅಂಕಿ ಅಂಶಗಳ ಮೇಲೆ ಸಂಶೋಧನಾ ವರದಿ ನೀಡುತ್ತದೆ ಎಂಬುದನ್ನು ನೋಡಬೇಕಿದೆ. ಮುಂದಿನ ಎರಡು ಅಥವಾ ಮೂರು ತಿಂಗಳಿನಲ್ಲಿ ಸ್ಪಷ್ಟ ವರದಿ ಬರಲಿದೆ.