
ನವದೆಹಲಿ[ಡಿ.26]: ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್‌ನ ಕೆಳ ಭಾಗದಲ್ಲಿ ನಿರ್ಮಿಸಿರುವ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ ಸುರಂಗಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. ಅಟಲ್‌ರ 95ನೇ ಜನ್ಮದಿನಾಚರಣೆಯ ಅಂಗವಾಗಿ ಬುಧವಾರ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ.
ಅಟಲ್ ಪ್ರಧಾನಿಯಾಗಿದ್ದ ವೇಳೆ ಅಂದರೆ 2000ನೇ ಇಸವಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಸುಮಾರು 4000 ಕೋಟಿ ರು. ವೆಚ್ಚದ ಈ ಯೋಜನೆ 2020ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಮುದ್ರ ಮಟ್ಟದಿಂದ 3000 ಮೀಟರ್ ಎತ್ತರದ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಈ ಸುರಂಗ 8.8 ಕಿ.ಮೀ ಉದ್ದವಿರಲಿದೆ. ಇಷ್ಟುಎತ್ತರದ ಪ್ರದೇಶದಲ್ಲಿ ಇಷ್ಟುಉದ್ದದ ಸುರಂಗ ವಿಶ್ವದಲ್ಲೇ ಮೊದಲು.
ಈ ಸುರಂಗ ಮಾರ್ಗ ಸಂಚಾರಕ್ಕೆ ಲಭ್ಯವಾದ ಬಳಿಕ ಮನಾಲಿ ಮತ್ತು ಲೇಹ್ ನಡುವಿನ ಮಾರ್ಗ 46 ಕಿ.ಮೀನಷ್ಟುಇಳಿಕೆಯಾಗಿದೆ. ಸರ್ವಋುತು ಸಂಚಾರಕ್ಕೆ ಲಭ್ಯವಿರುವ ಮಾರ್ಗದಿಂದ ಚೀನಾದೊಂದಿಗೆ ಗಡಿ ಭಾಗ ಹೊಂದಿರುವ ಭಾರತಕ್ಕೆ ತ್ವರಿತಗತಿಯಲ್ಲಿ ಸೇನೆ ರವಾನೆಗೆ ಅನುಕೂಲವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ