971 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ನೂತನ ಸಂಸತ್‌ ಭವನ: ಕಾಮಗಾರಿಗೆ ಚಾಲನೆ

By Suvarna NewsFirst Published Oct 2, 2020, 9:58 AM IST
Highlights

ನೂತನ ಸಂಸತ್‌ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ | ಕಟ್ಟಡದಲ್ಲಿ ಸುಮಾರು 1400 ಸಂಸದರಿಗೆ ಆಸನದ ವ್ಯವಸ್ಥೆ | 22 ತಿಂಗಳಲ್ಲಿ ಕಟ್ಟಡ ಕಾಮಗಾಗಿ ಪೂರ್ಣಗೊಳಿಸುವ ಉದ್ದೇಶ

ನವದೆಹಲಿ(ಅ.02): ಹಾಲಿ ಸಂಸತ್‌ ಭವನದ ಸಮೀಪದಲ್ಲೇ ನಿರ್ಮಾಣವಾಗಲಿರುವ ನೂತನ ಸಂಸತ್‌ ಭವನ ನಿರ್ಮಾಣ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಲಾಗಿದೆ. ಭೂಮಿಪೂಜೆಗೂ ಮುನ್ನ ನಡೆಯಬೇಕಾದ ಕೆಲ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ, ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಭೂಮಿಪೂಜೆ ನಡೆದ 22 ತಿಂಗಳಲ್ಲಿ ಕಟ್ಟಡ ಕಾಮಗಾಗಿ ಪೂರ್ಣಗೊಳಿಸುವ ಉದ್ದೇಶವನ್ನು, ನಿರ್ಮಾಣದ ಗುತ್ತಿಗೆ ಪಡೆದಿರುವ ಟಾಟಾ ಪ್ರಾಜೆಕ್ಟ್$್ಸ ಲಿ. ಹೊಂದಿದೆ. ನೂತನ ಕಟ್ಟಡ ಕಾಮಗಾರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಈ ಭಾಗದಲ್ಲಿರುವ ಕೇಂದ್ರೀಯ ಲೋಕೋಪಯೋಗಿ ಇಲಾಖೆಯ ಕೆಲ ಕಚೇರಿಗಳು ಹಾಗೂ ವಿದ್ಯುತ್‌ ಸ್ಟೇಷನ್‌ ಅನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೈಬರ್‌ಕ್ರೈಂ: ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಕೇಸ್‌ ದಾಖಲು

ಹಾಲಿ ಇರುವ ಲೋಕಸಭೆ ಮತ್ತು ರಾಜ್ಯಸಭೆ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಿದ್ದಲ್ಲಿ ಸಂಸದರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಹೀಗಾಗಿ, ನೂತನ ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆಯಡಿ ತ್ರಿಭುಜಾಕಾರದಲ್ಲಿ ನೂತನ ಸಂಸತ್ತಿನ ಕಟ್ಟಡದಲ್ಲಿ ಸುಮಾರು 1400 ಸಂಸದರಿಗೆ ಆಸನದ ವ್ಯವಸ್ಥೆ ಕಲ್ಪಿಸುವಂತೆ ವಿನ್ಯಾಸ ಮಾಡಲಾಗುತ್ತಿದೆ.

ನೂತನ ಸಂಸತ್ತಿನ ಕಟ್ಟಡ ಕಾಮಗಾರಿ ಪೂರ್ಣವಾಗುವವರೆಗೂ ಹಾಲಿ ಸಂಸತ್ತಿನ ಕಟ್ಟಡದಲ್ಲೇ ಸರ್ಕಾರಿ ಕಾರ್ಯಗಳು ನಡೆಯಲಿವೆ. ಆದರೆ, ಈ ಯೋಜನೆ ಪೂರ್ಣಗೊಂಡ ಬಳಿಕ ಹಾಲಿ ಕಟ್ಟಡವನ್ನು ಇತರ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಹೇಳಿದೆ.

ಸೆಪ್ಟೆಂಬರ್‌ನಲ್ಲಿ ಚೇತರಿಕೆ ಕಂಡ ದೇಶದ ಆರ್ಥಿಕತೆ

ಕಳೆದ ತಿಂಗಳು ಟಾಟ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಹೊಸ ಸಂಸತ್ತು ನಿರ್ಮಾಣ ಬಿಡ್ ಗೆದ್ದಿತ್ತು. ಪಾರ್ಲಿಮೆಂಟ್ ಎಸ್ಟೇಟ್‌ನ 118ನೇ ಪ್ಲಾಟ್‌ನಲ್ಲಿ ಹೊಸ ಭವನ ನಿರ್ಮಾಣವಾಗಲಿದೆ.

ಹೊಸ ಭವನ ನಿರ್ಮಾಣವಾಗುವವರೆ ಹಳೆ ಭವನದಲ್ಲಿ ಕೆಲಸಗಳು ನಡೆಯುತ್ತಲೇ ಇರುತ್ತವೆ. ಹೊಸತು ಭವನ ನಿರ್ಮಾಣವಾದ ಮೇಲೆ ಹಳೆಯದನ್ನು ಬೇರೆ ಕೆಲಸಗಳಿಗೆ ಮೀಡಲಿಡಲಾಗುತ್ತದೆ.

11 ರೇಪುಗಳು ; ಹತ್ತಾರು ಅನುಮಾನಗಳು... ಬೆಚ್ಚಿ ಬೀಳಿಸುವ ಯುಪಿ ರಿಪೋರ್ಟ್ ಕಾರ್ಡ್!

ಈ ಪ್ರಾಜೆಕ್ಟ್ ಬಹಳಷ್ಟು ಜನರಿಗೆ ಉದ್ಯೋಗ ಒದಗಿಸಲಿದೆ ಎಂದು ಕೇಂದ್ರ ವಸತಿ ಮತ್ತು ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದರು. ಹೊಸ ಸಂಸತ್ ಭವನ ನಿರ್ಮಾಣಕ್ಕೆ ಅಂದಾಜು 971 ಕೋಟಿ ಖರ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

click me!