Breaking: ವಿಪಕ್ಷಗಳಿಗೆ ಜಯ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು

Published : Apr 17, 2026, 07:42 PM ISTUpdated : Apr 17, 2026, 07:53 PM IST
Lok sabha

ಸಾರಾಂಶ

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಲು ಕಂಡಿದೆ. ಹೊಸ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಇಲ್ಲದೆ ತ್ವರಿತವಾಗಿ ಜಾರಿಗೊಳಿಸಲು ಯತ್ನಿಸಿದ ಈ ಮಸೂದೆಯು, ಅಗತ್ಯವಾದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ವಿಫಲವಾಯಿತು.

ನವದೆಹಲಿ (ಏ.17): ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗಿದೆ. ಶುಕ್ರವಾರ ಲೋಕಸಭೆಯಲ್ಲಿ ನಡೆದ ಮತದಾನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಮತದಾನಕ್ಕೆ ಇಳಿಸಿದಾಗ 540 ಸಂಸದರ ಪೈಕಿ 526 ಮಂದಿ ಸಂಸದರ ಮತದಾನ ಮಾಡಿದರು. ತಿದ್ದುಪಡಿಯ ಪರವಾಗಿ 298 ಮಂದಿ ಮತ ಚಲಾಯಿಸಿದ್ದರೆ, ಮೀಸಲಾತಿಯ ವಿರುದ್ಧವಾಗಿ 230 ಮಂದಿ ಮತ ಚಲಾಯಿಸಿದರು. ಇದು ಪ್ರಮುಖವಾದ ಸಂವಿಧಾನ ತಿದ್ದುಪಡಿಯಾಗಿದ್ದ ಕಾರಣ ಮೂರನೇ ಎರಡರಷ್ಟು ಮತದಾನ ಪಡೆಯುವುದು ಅಗತ್ಯವಾಗಿತ್ತು. ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ಹೊಸ ಜನಗಣತಿಯನ್ನು ನಡೆಸದೆಯೇ ಕ್ಷೇತ್ರ ಪುನರ್ವಿಂಗಡಣೆಯನ್ನು ಕೈಗೊಳ್ಳಲು ಪ್ರಯತ್ನಿಸುವ ಮಸೂದೆಯನ್ನು ಲೋಕಸಭೆ ಶುಕ್ರವಾರ ತಿರಸ್ಕರಿಸಿತು.

ಮತಗಳ ವಿಭಜನೆಯ ನಂತರ ಈ ಪ್ರಸ್ತಾವನೆಯನ್ನು ಸೋಲಿಸಲಾಯಿತು, 298 ಸದಸ್ಯರು ಪರವಾಗಿ ಮತ್ತು 230 ಸದಸ್ಯರು ವಿರುದ್ಧವಾಗಿ ಚಲಾಯಿಸಿದರು. ಒಟ್ಟು 528 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಪುನರ್ವಿಂಗಡಣೆಗಾಗಿ ಹೊಸ ಜನಗಣತಿಯ ಅಗತ್ಯವನ್ನು ತಪ್ಪಿಸುವ ಗುರಿಯನ್ನು ಮಸೂದೆ ಹೊಂದಿತ್ತು, ಇದು ಶಾಸಕಾಂಗಗಳಲ್ಲಿ ಮಹಿಳಾ ಕೋಟಾವನ್ನು ಜಾರಿಗೆ ತರುವ ಕೇಂದ್ರ ನಿಬಂಧನೆಯಾಗಿದೆ.

ಲೋಕಸಭೆಯಲ್ಲಿ ನಡೆದ ಮತದಾನದ ವೇಳೆ ಒಟ್ಟು 528 ಸದಸ್ಯರು ಹಾಜರಿದ್ದರು. ಮಸೂದೆ ಪಾಸ್‌ ಮಾಡಲು 352 ಮತಗಳ ಅಗತ್ಯ ಸರ್ಕಾರಕ್ಕೆ ಇತ್ತು. ಕೇವಲ 54 ಮತಗಳ ಅಂತರದಿಂದ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ.

ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಮತ್ತು ಕ್ಷೇತ್ರ ಮರುವಿಂಗಡಣಾ ಚೌಕಟ್ಟಿನಲ್ಲಿ ಬದಲಾವಣೆ ತರಲು ಸರ್ಕಾರವು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿತ್ತು. ಸಂವಿಧಾನ ತಿದ್ದುಪಡಿ ಮಸೂದೆ, ಕ್ಷೇತ್ರ ಮರುವಿಂಗಡಣಾ (ಡಿಲಿಮಿಟೇಶನ್) ಮಸೂದೆ, 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026 ಮತದಾನ ಮಾಡಲು ಅಣೀಯಾಗಿತ್ತು.

ಸಂಸತ್ತಿನಲ್ಲಿ ನಡೆದ ಹೈಡ್ರಾಮಾ

ಗುರುವಾರ ಈ ಮಸೂದೆಗಳನ್ನು ಸದನದಲ್ಲಿ ಮಂಡಿಸಲಾಯಿತು. ಈ ವೇಳೆ ವಿರೋಧ ಪಕ್ಷಗಳು ಧ್ವನಿ ಮತದ ಬದಲು ಕಡ್ಡಾಯವಾಗಿ ಮತ ವಿಭಜನೆಗೆ (Division Vote) ಆಗ್ರಹಿಸಿದವು. ಮಸೂದೆಗಳ ಮಂಡನೆಯ ಪ್ರಸ್ತಾವನೆಗೆ ನಡೆದ ಆರಂಭಿಕ ಮತದಾನದಲ್ಲಿ 333 ಸದಸ್ಯರ ಪೈಕಿ 251 ಮಂದಿ ಪರವಾಗಿ ಹಾಗೂ 185 ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದರು.

ವಿಶೇಷ ಅಧಿವೇಶನದ ಉದ್ದೇಶ

'ನಾರಿ ಶಕ್ತಿ ವಂದನ್ ಅಧಿನಿಯಮ'ಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಏಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆದರೆ, ಈಗ ತಿದ್ದುಪಡಿ ಮಸೂದೆಗೆ ಸೋಲಾಗಿರುವುದು ಸರ್ಕಾರಕ್ಕೆ ದೊಡ್ಡ ರಾಜತಾಂತ್ರಿಕ ಹಿನ್ನಡೆಯಾಗಿ ಪರಿಣಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಚಿತ್ರಿಸಿ 'ವಿಷು' ಹಬ್ಬದ ವಿಶ್‌; ರೆಸ್ಟೋರೆಂಟ್‌ ಮಾಲೀಕ ಆರ್ಶದ್‌ ಅರೆಸ್ಟ್‌!
'ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ: Video Viral