ಟ್ರೇನಿ ಮಹಿಳಾ ಸಿಬ್ಬಂದಿ ಬೆತ್ತಲೆ ಪರೀಕ್ಷೆ!

By Kannadaprabha NewsFirst Published Feb 22, 2020, 8:27 AM IST
Highlights

ಟ್ರೇನಿ ಮಹಿಳಾ ಸಿಬ್ಬಂದಿಗಳ ಬೆತ್ತಲೆ ಪರೀಕ್ಷೆ!| ಟ್ರೇನಿ ಮಹಿಳಾ ಉದ್ಯೋಗಿಗಳನ್ನು ಬೆತ್ತಲೆಗೊಳಿಸಿ ಪರೀಕ್ಷೆ| ಅಸಂಬಂದ್ದ , ವೈಯಕ್ತಿಕ ಪ್ರಶ್ನೆ ಕೇಳಿ ಮುಜುಗರ| ಅಮಾನವೀಯವಾಗಿ ನಡೆಸಿಕೊಂಡ ವೈದ್ಯರು

ಸೂರತ್‌[ಫೆ.22]: ಭುಜ್‌ನ ಕಾಲೇಜೊಂದರಲ್ಲಿ ಋುತುಮತಿಯಾಗಿರುವ ಬಗ್ಗೆ ಪರೀಕ್ಷೆ ಮಾಡಲು ವಿದ್ಯಾರ್ಥಿನಿಯರನ್ನು ಬಟ್ಟೆಬಿಚ್ಚಿಸಿದ ಹೇಯ ಘಟನೆ ನಡೆದ ಬೆನ್ನಲ್ಲೇ ಗುಜರಾತ್‌ನ ಸೂರತ್‌ನಲ್ಲಿ ನಗರ ಪಾಲಿಕೆಯ ಟ್ರೇನಿ ಮಹಿಳಾ ಸಿಬ್ಬಂದಿಗಳನ್ನು ದೈಹಿಕ ಪರೀಕ್ಷೆ ಹೆಸರಿನಲ್ಲಿ ಬೆತ್ತಲೆ ನಿಲ್ಲಿಸಿದ ಪ್ರಸಂಗ ನಡೆದಿದೆ. ಅಲ್ಲದೇ ವೈದ್ಯರು ಅಸಂಬದ್ದ ಹಾಗೂ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಾತ್ರೆ ತೊಳೆಯೋ ಸಿಂಕ್‌ನಲ್ಲೇ ಮೈ ತಿಕ್ಕಿ ಸ್ನಾನ ಮಾಡಿದ..!

ಟ್ರೇನಿ ಸಿಬ್ಬಂದಿಗಳ ನೇಮಕಕ್ಕೂ ಮುನ್ನ ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೀಗಾಗಿ ನೂರು ಮಂದಿಯನ್ನು ಸೂರತ್‌ ಮುನ್ಸಿಪಾಲ್‌ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು. ಅಲ್ಲಿ ತಲಾ ಹತ್ತು ಮಂದಿಯ ತಂಡ ಮಾಡಿ ಕೊಠಡಿಯೊಂದರಲ್ಲಿ ಬೆತ್ತಲೆ ನಿಲ್ಲಿಸಲಾಗಿದೆ. ಕೊಠಡಿಯ ಬಾಗಿಲೂ ಸಹ ಸರಿ ಮುಚ್ಚಲಾಗದೇ ಪರದೆಯಿಂದ ಬಂದ್‌ ಮಾಡಲಾಗಿತ್ತು. ಅವಿವಾಹಿತರಾಗಿದ್ದರೂ ಈ ಹಿಂದೆ ಗರ್ಭ ಧರಿಸಿದ್ದೀರಾ ಎಂಬೆಲ್ಲಾ ಅಸಂಬದ್ದ ಹಾಗೂ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲ ಮಹಿಳಾ ವೈದ್ಯರು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡರು ಎಂದು ನಗರ ಪಾಲಿಕೆಯ ಹಿರಿಯ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಪುರುಷ ಅಭ್ಯರ್ಥಿಗಳಿಗೆ ಸಾಮಾನ್ಯ ದೈಹಿಕ ಪರೀಕ್ಷೆಯನ್ನು ಮಾತ್ರ ಮಾಡಲಾಗಿದೆ. ಆದರೆ ಮಹಿಳಾ ಅಭ್ಯರ್ಥಿಗಳೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ಪಾಲಿಕೆಯ ಗಮನಕ್ಕೆ ತರಲಾಗಿದೆ. ಇದನ್ನು ಸಹಿಸುವುದು ಅಸಾಧ್ಯ ಎಂದು ನೌಕರರ ಒಕ್ಕೂಟದ ಕಾರ್ಯದರ್ಶಿ ಎಎ ಶೇಖ್‌ ಹೇಳಿದ್ದಾರೆ.

ದೇವಸ್ಥಾನದಲ್ಲಿ ಒಂದೇ ಬಾರಿ ಬೆತ್ತಲಾದ 10 ಸಾವಿರ ಮಂದಿ!

click me!