-ರೈಲಿನಿಂದ ಜಾರಿ ಬಿದ್ದ ಮಹಿಳೆಯನ್ನು ರಕ್ಷಿಸಿದ RPF ಸಿಬ್ಬಂದಿ
-ಮಹಿಳಾ ಸಿಬ್ಬಂದಿಗೆ ನೆಟ್ಟಿಗರಿಂದ ಶ್ಲಾಘನೆ
- ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮುಂಬೈ (ಅ. 22) : ಮಹಾರಾಷ್ಟ್ರದ ಮುಂಬೈ (Mumbai) ಲೋಕಲ್ ರೈಲುಗಳಲ್ಲಿ (Local Trains) ದಿನನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ದಿನದ 24 ಗಂಟೆಯೂ ಕಾರ್ಯನಿರತವಾಗಿರುವ ಈ ನಗರದಲ್ಲಿ ಜನದಟ್ಟಣೆ ಹೆಚ್ಚು. ಕೆಲವೊಂದು ಬಾರಿ ಲೋಕಲ್ ಟ್ರೇನ್ ಭೋಗಿಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಜನರು ಈ ರೈಲುಗಳನ್ನು ಹತ್ತಲು ಹರಸಾಹಸಪಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ವೈರಲ್ (Viral) ಆಗುತ್ತವೆ. ಹಿಗೇಯೆ ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆಯೊಬ್ಬರನ್ನು ಆರ್‌ಪಿಎಫ್ ಮಹಿಳಾ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಮುಂಬೈನ ಸೈಂಡರ್ಸ್ಟ್ (Sandhurst) ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಅಲ್ಲದೇ ಮಹಿಳೆಯನ್ನು ರಕ್ಷಿಸಿದ RPF ಮಹಿಳಾ ಸಿಬ್ಬಂದಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
| Maharashtra: Railway Protection Force (RPF) constable Sapna Golkar saves a 50 year-old woman from falling into the gap between platform and train while she was boarding the running train at Sandhurst Road railway station on Thursday. pic.twitter.com/XkTZGODpYQ
— ANI (@ANI)
undefined
50 ವರ್ಷದ ಮಹಿಳೆಯೊಬ್ಬರು ರೈಲು ಹತ್ತಲೆಂದು ಮುಂದಾದಾಗ ರೈಲು ಮುಂದೆ ಸಾಗಿದೆ. ರೈಲಿನ ಬಾಗಿಲಿನ ಕಂಬಿಯನ್ನು ಹಿಡಿಯುವಾಗ ಮಹಿಳೆ ಜಾರಿ ಬಿದ್ದಿದ್ದಾರೆ. ಇನ್ನೇನು ಮಹಿಳೆ ರೇಲಿನಡಿ ಬೀಳುತ್ತಾರೆ ಅನ್ನುವಷ್ಟರಲ್ಲಿ ಮಹಿಳಾ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ಮಹಿಳೆ ಜಾರಿ ಬಿಳುತ್ತಿದ್ದಂತೆಯೇ ತಕ್ಷಣ ಅಲರ್ಟ್ ಆದ ಮಹಿಳಾ ಪೋಲಿಸ್ ಸಿಬ್ಬಂದಿ ಅವರ ಕೈ ಹಿಡಿದು ಪ್ಲಾಟ್‌ಫಾರ್ಮ್ ಕಡೆಗೆ ಎಳೆದಿದ್ದಾರೆ. ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈಗ ಈ ವಿಡಿಯೋವನ್ನು ಸಾಕಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದು ವೈರಲ್ ಆಗಿದೆ. ಮಹಿಳೆಯನ್ನು ರಕ್ಷಿಸಿದ ಮಹಿಳಾ ಸಿಬ್ಬಂದಿಯನ್ನು ಸಪ್ನಾ ಗೊಲ್ಕರ್ (Sapna Golkar) ಎಂದು ಗುರುತಿಸಲಾಗಿದೆ. ಮಹಿಳಾ ಸಿಬ್ಬಂದಿಯ ಕಾರ್ಯಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
60 ಅಂತಸ್ತಿನ ಐಷಾರಾಮಿ ಫ್ಲ್ಯಾಟ್‌ನಲ್ಲಿ ಬೆಂಕಿ, 19ನೇ ಮಹಡಿ ಧಗಧಗ, ಓರ್ವ ಸಾವು!
ಚಲಿಸುತ್ತಿರುವ ರೈಲನ್ನು ಹತ್ತಬೇಡಿ ಎಂದು ಎಚ್ಚರಿಸಿದ್ದ ಅಧಿಕಾರಿ!
ಎರಡು ದಿನಗಳ ಹಿಂದೆ ಕೂಡ ಇಂಥಹ ಘಟನೆಯೊಂದು ನಡೆದಿತ್ತು. ರೈಲು ಮತ್ತು ಪ್ಲಾಟ್ ಫಾರ್ಮ್ ಮಧ್ಯದ ಜಾಗದಲ್ಲಿ ಜಾರಿ ಬಿದ್ದ ಗರ್ಭಿಣಿ ಮಹಿಳೆಯೊಬ್ಬರನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿದ್ದರು. ಮಹಾರಾಷ್ರ್ಟದ ಥಾಣೆ (Thane) ಜಿಲ್ಲೆಯ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಮಹಿಳೆ ತಾವು ಹೋಗಬೇಕಿದ್ದ ಟ್ರೇನ್ ಬದಲಾಗಿ ಬೇರೊಂದು ಟ್ರೇನ್ ಹತ್ತಿದ್ದರು. ರೈಲು ಚಲಿಸಲು ಪ್ರಾರಂಭಿಸಿದಾಗ ಇದು ತಾವು ಹೋಗಬೇಕಿದ್ದ ರೈಲು ಅಲ್ಲ ಎಂದು ಅರಿತ ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸಿದಾಗ ಜಾರಿ ಬಿದ್ದು ಈ ಘಟನೆ ನಡೆದಿತ್ತು. ಸೆಂಟ್ರಲ್ ಮುಂಬೈನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (Public relation officer) ಶಿವರಾಜ್ ಸುತಾರ್ (Sivraj sutar) ಈ ಘಟನೆಯನ್ನು ಟ್ವೀಟರ್‌ನಲ್ಲಿ (twitter) ಹಂಚಿಕೊಂಡಿದ್ದರು. ಅಲ್ಲದೇ ಈ ರೀತಿ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದರಿಂದ ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದ್ದರು. ಮುಂಬೈನ ಲೋಕಲ್ ರೈಲುಗಳಲ್ಲಿ ಇಂಥಹ ದೃಶ್ಯಗಳು ಪದೇ ಪದೇ ಕಾಣಸಿಗುತ್ತವೆ. ತಾವು ಹೋಗುತ್ತಿರುವ ಸ್ಥಳವನ್ನು ತಲುಪುವ ಗಡಿಬಿಡಿಯಲ್ಲಿ ಅಥವಾ ರೈಲು ಮಿಸ್ ಆಗುವ ಆತಂಕದಲ್ಲಿ ಸಾರ್ವಜನಿಕರು ಈ ರೀತಿ ವರ್ತಿಸಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳತ್ತಾರೆ.
ಪ್ರಧಾನಿ ಘೋಷಿಸಿದ್ದ ‘ಗತಿಶಕ್ತಿ’ಯೋಜನೆಗೆ ಸಂಪುಟ ಒಪ್ಪಿಗೆ!
Railway Protection Force (RPF) staff Shri S R Khandekar saved the life of a pregnant woman who had slipped while attempting to de-board a moving train at Kalyan railway station today.
Railway appeals to passengers not to board or de-board a running train. pic.twitter.com/68imlutPaY