ಅಮಿತ್ ಶಾಗೆ ಕಪ್ಪು ಧ್ವಜ ತೋರಿಸಿದ ಮಹಿಳೆಯರು: ಇದು ದೀದಿ ಕೆಲಸ ಎಂದ ಶಾ

Suvarna News   | Asianet News
Published : Feb 19, 2021, 01:30 PM ISTUpdated : Feb 19, 2021, 01:38 PM IST
ಅಮಿತ್ ಶಾಗೆ ಕಪ್ಪು ಧ್ವಜ ತೋರಿಸಿದ ಮಹಿಳೆಯರು: ಇದು ದೀದಿ ಕೆಲಸ ಎಂದ ಶಾ

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್‌ ಶಾಗೆ ಮಹಿಳೆಯರು ಕಪ್ಪು ಧ್ವಜ ತೋರಿಸಿ ಪ್ರತಿಭಟಿಸಿದ್ದಾರೆ.

ಪಶ್ಚಿಮ ಬಂಗಾಳದ ಸಾರ್ವಜನಿಕ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾಗೆ ಮಹಿಳೆಯರು ಕಪ್ಪು ಧ್ವಜಗಳನ್ನು ಎತ್ತಿ ತೋರಿಸಿ ಪ್ರತಿಭಟಿಸಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ನಡೆದ ಸಭೆಯಲ್ಲಿ ಕೆಲವು ಮಹಿಳೆಯರು ಕಪ್ಪು ಧ್ವಜ ಹಿಡಿದುಕೊಂಡು ಬ್ಯಾರಿಕೇಟ್ ದಾಟಿ ಬಂದಿದ್ದಾರೆ.

ಲಡಾಖ್‌‌ನಿಂದ ಚೀನಾ ಸೇನೆ ಹಿಂದೆ ಹೋಗಿದ್ದರ ಗುಟ್ಟೇನು?

ಬ್ಯಾರಿಕೇಡ್ ದಾಟಿ ಬಂದು ಕಪ್ಪು ಧ್ವಜ ತೋರಿಸಿದ ಮಹಿಳೆಯರನ್ನು ಭದ್ರತಾ ಸಿಬ್ಬಂದಿ ತಕ್ಷಣ ಸ್ಥಳದಿಂದ ತೆರವು ಮಾಡಿದ್ದಾರೆ. 
ಸಿಎಂ ಮಮತಾ ಬ್ಯಾನರ್ಜಿ ಇದಕ್ಕೆ ಆರ್ಡರ್ ಕೊಟ್ಟಿದ್ದಾರಾ..? ಎಲ್ಲವನ್ನೂ ಅವ್ಯವಸ್ಥೆ ಮಾಡಲೆಂದೇ ಮಮತಾ ಮಹಿಳೆಯರನ್ನು ಕಳಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಹತ್ತಿರವಾದಂತೆ ಬಿಜೆಪಿ ರಾಜ್ಯವನ್ನು ಕಮಲದ ತೆಕ್ಕೆಗೆ ಪಡೆಯಲು ಪ್ರಯತ್ನಿಸುತ್ತಿರುವುದು ಸಿಎಂ ಮಮತಾ ಬ್ಯಾನರ್ಜಿಗೆ ತಲೆನೋವಾಗಿದೆ. ತೃಣಮೂಲಕ ಕಾಂಗ್ರೆಸ್ನ ಕೆಲವು ಪ್ರಮುಖ ಸಚಿವರು ಮತ್ತು ಮುಖಂಡರು ಬಿಜೆಪಿ ಸೇರಿದ ನಂತರ ಇದೀಗ ಬೃಹತ್ ಸಭೆ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!